ಈ ಸರ್ಕಾರಕ್ಕೆ ಮಾನ, ಮರ್ಯಾದೆ ಏನು ಇಲ್ಲ. ಇದು ದಪ್ಪ ಚರ್ಮದ ಸರ್ಕಾರ: ನಿಖಿಲ್ ಆಕ್ರೋಶ

Date:

ಈ ಸರ್ಕಾರಕ್ಕೆ ಮಾನ, ಮರ್ಯಾದೆ ಏನು ಇಲ್ಲ. ಇದು ದಪ್ಪ ಚರ್ಮದ ಸರ್ಕಾರ: ನಿಖಿಲ್ ಆಕ್ರೋಶ

ರಾಯಚೂರು, ಸಿಂಧನೂರು: ರೈತರಿಗೆ ಬೇಕಿರೋದು ನಿಮ್ಮ ಗ್ಯಾರಂಟಿಗಳಲ್ಲ, ಅವರಿಗೆ ನೀರು ಕೊಡಿ ಅವರೇ ನಿಮ್ಮ ಗ್ಯಾರಂಟಿಗಳಿಗೆ ಹಣ ಕೊಡ್ತಾರೆ ಎಂದು ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಿಂಧನೂರಿನ ಎಪಿಎಂಸಿ ಆವರಣದಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ 4 ಜಿಲ್ಲೆಯ ರೈತರ ಬದುಕು ಬೀದಿಗೆ ಬಂದಿದೆ. ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದಾರೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ಇದು ದಪ್ಪ ಚರ್ಮದ ಸರ್ಕಾರ.
ರೈತರಿಗೆ ಸೂಕ್ತ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ 8 ರಿಂದ 10 ದಿನಗಳ ಕಾಲ ಗಡುವು ನೀಡುತಿದ್ದೇವೆ. ಒಂದು ವೇಳೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೇ ತುಂಗಭದ್ರಾ ಆಣೆಕಟ್ಟಿಗೆ ಮುತ್ತಿಗೆ ಹಾಕುತ್ತೇವೆ ಎಂದು ನಿಖಿಲ್ ಅವರು ಎಚ್ಚರಿಕೆ ನೀಡಿದರು.
ತುಂಗಭದ್ರಾ ನದಿ ರೈತರ ತಾಯಿ
ತುಂಗಭದ್ರಾ ನದಿ ಈ ಭಾಗದ ಜೀವನಾಡಿ. ರೈತರು ಭೂಮಿ ತಾಯಿಯನ್ನ ಮಾತ್ರ ನಂಬಿ ಬದುಕುತ್ತಿದ್ದಾನೆ. ಈ ಸರ್ಕಾರ ರೈತನ ಬದುಕು ಕಸಿದುಕೊಳ್ಳಲು ಮುಂದಾಗಿದೆ. ಡ್ಯಾಂನಲ್ಲಿ 70 ಟಿಎಂಸಿ ನೀರಿದೆ. ಕುಮಾರಣ್ಣ ಸಿಎಂ ಆಗಿದ್ದ ವೇಳೆ 70 ಟಿಎಂಸಿಗೂ ಕಡಿಮೆ ನೀರು ಇತ್ತು. ಆಗ ರೈತರ ಎರಡು ಬೆಳೆಗೆ ನೀರು ಕೊಟ್ಟರು ಎಂದು ಹೇಳಿದರು.
ಶಾಸಕರ ಖರೀದಿಗೆ 50 ಕೋಟಿ
ಆಂಧ್ರ- ತೆಲಂಗಾಣ ಭಾಗಕ್ಕೆ ಶೇ.33ರಷ್ಟು ನೀರು ಹೋಗುತ್ತೆ. ಆದರೂ ಅಲ್ಲಿನ ರೈತರಿಗೆ ನೀರು ಕೊಡಬಹುದು. ಆದ್ರೆ ಸರ್ಕಾರ ಕಣ್ಣು ಮುಚ್ಚಿಕೊಂಡು ಕುಳಿತಿದೆ. ತುಂಗಾಭದ್ರಾ ಕ್ರಸ್ಟ್‌ ಗೇಟ್ ರಿಪೇರಿಗೆ 11ಕೋಟಿ ರೂ.ಕೊಡಲು ಈ ಸರ್ಕಾರಕ್ಕೆ ಶಕ್ತಿ ಇಲ್ಲ. 50 ಕೋಟಿ ರೂ. ಶಾಸಕರಿಗೆ ಕೊಟ್ಟು ಖರೀದಿಗೆ ಕಾಂಗ್ರೆಸ್ ಸಿದ್ಧವಾಗಿದೆ ಎಂದು ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಅವರು ಗುಡುಗಿದರು.
ಸರ್ಕಾರ ತನ್ನ ತಪ್ಪನ್ನು ಮುಚ್ಚಿಟ್ಟುಕೊಳ್ಳುವ ಮೂಲಕ ಎರಡನೇ ಬೆಳೆಗೆ ನೀರಿಲ್ಲ ಎಂದು ರೈತರ ದಾರಿ ತಪ್ಪಿಸುವ ಕೆಲಸ ಮಾಡಿದೆ. ಜಲಸಂಪನ್ಮೂಲ ಸಚಿವರು,ಉಸ್ತುವಾರಿ ಮಂತ್ರಿಗಳು , ಅಧಿಕಾರಿಗಳು ಸ್ಥಳಕ್ಕೆ ಬಂದು ರೈತರಿಗೆ ನ್ಯಾಯ ಕೊಡುವವರೆಗೆ ಹೋರಾಟವನ್ನು ಕೈ ಬಿಡುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಲಾಯಿತು. ಜನತಾದಳ ಪಕ್ಷ ರೈತರ ಪಕ್ಷ. ರೈತರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ. ಕೊನೆಯ ಉಸಿರು ಇರುವವರೆಗೆ ರೈತರಿಗಾಗಿ ಹೋರಾಟ ಮಾಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...