No menu items!
3.4 C
Munich
Thursday, April 23, 2026

ಟೆಕ್ಸಾಸ್‌ನಲ್ಲಿ 300 ಬಿಲಿಯನ್ ಡಾಲರ್ ತೈಲ ಸಂಸ್ಕರಣಾ ಘಟಕ: ರಿಲಯನ್ಸ್ ಹೂಡಿಕೆ ಘೋಷಿಸಿದ ಟ್ರಂಪ್

Must read

ಟೆಕ್ಸಾಸ್‌ನಲ್ಲಿ 300 ಬಿಲಿಯನ್ ಡಾಲರ್ ತೈಲ ಸಂಸ್ಕರಣಾ ಘಟಕ: ರಿಲಯನ್ಸ್ ಹೂಡಿಕೆ ಘೋಷಿಸಿದ ಟ್ರಂಪ್

ವಾಷಿಂಗ್ಟನ್: ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿ ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿ ನಿರ್ಮಾಣವಾಗಲಿರುವ ಹೊಸ ತೈಲ ಸಂಸ್ಕರಣಾ ಘಟಕಕ್ಕೆ ಹೂಡಿಕೆ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಸುಮಾರು 300 ಬಿಲಿಯನ್ ಡಾಲರ್ (ಸುಮಾರು 27.56 ಲಕ್ಷ ಕೋಟಿ ರೂ.) ವೆಚ್ಚದಲ್ಲಿ ಈ ಯೋಜನೆ ಕೈಗೊಳ್ಳಲಾಗುತ್ತಿದ್ದು, ಕಳೆದ 50 ವರ್ಷಗಳಲ್ಲಿ ಅಮೆರಿಕದಲ್ಲಿ ಆರಂಭವಾಗುತ್ತಿರುವ ಮೊದಲ ಹೊಸ ತೈಲ ಸಂಸ್ಕರಣಾಗಾರವಾಗಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮ ‘ಟ್ರೂತ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಟೆಕ್ಸಾಸ್‌ನ ಬ್ರೌನ್ಸ್‌ವಿಲ್‌ನಲ್ಲಿ ಈ ಮಹತ್ವದ ಸಂಸ್ಕರಣಾಗಾರ ನಿರ್ಮಾಣವಾಗಲಿದೆ. ಇದು ಅಮೆರಿಕದ ಇತಿಹಾಸದಲ್ಲೇ ಅತಿದೊಡ್ಡ ಹೂಡಿಕೆ ಒಪ್ಪಂದಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.

ಈ ಹೂಡಿಕೆ ಅಮೆರಿಕದ ಕಾರ್ಮಿಕರು, ಇಂಧನ ಕ್ಷೇತ್ರ ಮತ್ತು ದಕ್ಷಿಣ ಟೆಕ್ಸಾಸ್‌ನ ಜನರಿಗೆ ದೊಡ್ಡ ಗೆಲುವಾಗಿದೆ. ಭಾರತದಲ್ಲಿನ ಪಾಲುದಾರರಿಗೆ ಹಾಗೂ ಅತಿದೊಡ್ಡ ಖಾಸಗಿ ಸ್ವಾಮ್ಯದ ಇಂಧನ ಕಂಪನಿಯಾದ ರಿಲಯನ್ಸ್‌ಗೆ ಧನ್ಯವಾದಗಳು ಎಂದು ಟ್ರಂಪ್ ತಿಳಿಸಿದ್ದಾರೆ.

ಬ್ರೌನ್ಸ್‌ವಿಲ್ ಬಂದರಿನ ಬಳಿ ನಿರ್ಮಾಣವಾಗಲಿರುವ ಈ ಸಂಸ್ಕರಣಾಗಾರವು ಅಮೆರಿಕದ ಇಂಧನ ಉತ್ಪಾದನೆಯನ್ನು ಹೆಚ್ಚಿಸುವುದರ ಜೊತೆಗೆ ಜಾಗತಿಕ ರಫ್ತಿಗೂ ನೆರವಾಗಲಿದೆ. ಜೊತೆಗೆ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿದ್ದು, ದೇಶದ ಆರ್ಥಿಕ ಬೆಳವಣಿಗೆಗೂ ಸಹಕಾರಿ ಆಗಲಿದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಈ ಘಟಕವು ವಿಶ್ವದ ಅತ್ಯಂತ ಸ್ವಚ್ಛ ತೈಲ ಸಂಸ್ಕರಣಾಗಾರಗಳಲ್ಲಿ ಒಂದಾಗಲಿದೆ ಹಾಗೂ ಅಮೆರಿಕದ ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವಲ್ಲಿ ಸಹಾಯಕವಾಗಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ.

- Advertisement -spot_img

More articles

- Advertisement -spot_img

Latest article