ಈ 2 ಲಸಿಕೆ ಎಲ್ಲಾ ರೂಪಾಂತರಿ ಕೊರೊನಾಗೂ ಮದ್ದು

1
34

ದೇಶದಲ್ಲಿ ಹೊಸ ಕೊರೊನಾ ರೂಪಾಂತರ ಪತ್ತೆಯಾಗಿರುವ ಬೆನ್ನಲ್ಲೇ, ಅದರ ವಿರುದ್ಧ ಈಗ ಲಭ್ಯವಿರುವ ಲಸಿಕೆಗಳ ಕಾರ್ಯಕ್ಷಮತೆ ಕುರಿತು ವಿಶ್ಲೇಷಣೆಗಳು ನಡೆಯುತ್ತಿವೆ. ಈ ರೂಪಾಂತರ ಹೆಚ್ಚು ಬಲಿಷ್ಠವಾಗಿದ್ದು, ಈಗಿರುವ ಲಸಿಕೆಗಳು ಎಷ್ಟು ಸಮರ್ಥವಾಗಿವೆ ಎಂಬ ಚರ್ಚೆಗಳು ನಡೆಯುತ್ತಿವೆ.
ಈ ನಡುವೆ, ಎರಡು ಲಸಿಕೆಗಳ ಸಂಯೋಜನೆಯ ಡೋಸ್‌ಗಳನ್ನು ನೀಡಿದರೆ ಸೋಂಕಿನ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದೆಹಲಿಯ ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಅವರು ಕೂಡ ಇದೇ ಸಲಹೆ ನೀಡಿದ್ದು, ಎರಡು ಲಸಿಕೆಗಳ ಸಂಯೋಜನೆ, ರೂಪಾಂತರ ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿಸ ಕಾರ್ಯನಿರ್ವಹಿಸಬಹುದು ಎಂದು ಹೇಳಿದ್ದಾರೆ.

“ಈಗ ಸೃಷ್ಟಿಯಾಗಿರುವ ಡೆಲ್ಟಾ, ಡೆಲ್ಟಾ ಪ್ಲಸ್ ರೂಪಾಂತರಗಳ ವಿರುದ್ಧ ಎರಡು ಲಸಿಕೆಗಳ ಮಿಶ್ರಣ ಪರಿಣಾಮಕಾರಿ ಆಗಬಹುದು. ಆದರೆ ಅಂತಿಮ ಅನುಮೋದನೆ ನೀಡುವ ಮುನ್ನ ಇನ್ನಷ್ಟು ಮಾಹಿತಿಯ ಅವಶ್ಯಕತೆಯಿದೆ” ಎಂದು ಹೇಳಿದ್ದಾರೆ.
“ರೂಪಾಂತರದ ವಿರುದ್ಧ ಹೋರಾಡಲು ಎರಡು ಲಸಿಕೆಗಳ ಮಿಶ್ರಣ ಪರ್ಯಾಯ ಆಯ್ಕೆಯಾಗಬಹುದು ಎಂದು ಹಿಂದಿನ ಅಧ್ಯಯನಗಳು ತಿಳಿಸಿವೆ. ಆದರೆ ಪರಿಣಾಮಕಾರಿ ಫಲಿತಾಂಶ ಪಡೆಯಲು ಯಾವ ಎರಡು ಲಸಿಕೆಗಳನ್ನು ಮಿಶ್ರಣ ಮಾಡಬೇಕು ಎಂಬುದರ ಕುರಿತು ಅಧ್ಯಯನ ನಡೆಯಬೇಕಿದೆ” ಎಂದು ಹೇಳಿದ್ದಾರೆ.


ಈಚೆಗೆ ಪತ್ತೆಯಾಗಿರುವ ಡೆಲ್ಟಾ ಪ್ಲಸ್ ರೂಪಾಂತರಕ್ಕೆ ಈಗಿನ ಲಸಿಕೆಗಳು ಪರಿಣಾಮಕಾರಿಯಲ್ಲ ಎಂಬುದನ್ನು ಗುಲೇರಿಯಾ ಅವರು ತಳ್ಳಿಹಾಕಿದ್ದಾರೆ. ಮತ್ತಷ್ಟು ಮಾಹಿತಿ, ದತ್ತಾಂಶಗಳು ಲಭ್ಯವಾದ ನಂತರ ನಿರ್ಧಾರಕ್ಕೆ ಬರಲು ಸಾಧ್ಯ ಎಂದು ಸ್ಪಷ್ಟಪಡಿಸಿದ್ದಾರೆ.
ಹೊಸ ಲಸಿಕಾ ನೀತಿಯಡಿ ವಿಜ್ಞಾನಿಗಳು, ಯಾವ ಎರಡು ಕೊರೊನಾ ಲಸಿಕೆಗಳ ಸಂಯೋಜನೆ ಹೆಚ್ಚು ಪರಿಣಾಮಕಾರಿಯಾಗಬಹುದು ಎಂಬ ಕುರಿತು ಅಧ್ಯಯನ ಕೈಗೊಂಡಿರುವುದಾಗಿ ಕಳೆದ ತಿಂಗಳು ಕೇಂದ್ರ ತಿಳಿಸಿತ್ತು.

1 COMMENT

LEAVE A REPLY

Please enter your comment!
Please enter your name here