ಉಗ್ರನ ಕೃತ್ಯವನ್ನ ಸಂಭ್ರಮಿಸಿ ಸಿಕ್ಕಿಬಿದ್ದವರ ಪರ ವಕಾಲತ್ತು ವಹಿಸಿಲು ನಿರಾಕರಿಸದ ವಕೀಲರ ಸಂಘ..
ಫೆ.14 ರಂದು ನಡೆದ ಉಗ್ರ ದಾಳಿಗೆ ದೇಶವ್ಯಾಪಿ ತೀರ್ವ ಖಂಡನೆ ವ್ಯಕ್ತವಾಗಿತ್ತು.. ಆದರೆ ನಮ್ಮಸೈನಿಕರ ಸಾವನ್ನ ಹಾಗು ಉಗ್ರನ ನಡೆಯನ್ನ ಸಂಭ್ರಮಿಸಿದ್ದವರು ಸಹ ನಮ್ಮ ದೇಶದಲ್ಲಿದ್ರು.. ಅದರಲ್ಲು ಕರ್ನಾಟಕದಲ್ಲಿ ಉಗ್ರನ ಕೃತ್ಯವನ್ನ ಸಂಭ್ರಮಿಸಿ ಪಾಕಿಸ್ತಾನ ಪರ ಜೈಕಾರ ಕೂಗಿದವರು ಇದ್ರು..
ಈ ಸಂಬಂಧ ಮಸ್ಕಿ ತಾಲೂಕಿನ ತಲೆಖಾನದಲ್ಲಿ ಯುವಕರ ಗುಂಪುವೊಂದು ಸೈನಿಕರ ಮೇಲಿನ ದಾಳಿಯನ್ನು ಸಂಭ್ರಮಿಸಿತ್ತು. ಖಾಜಾಸಾಬ ಸೇರಿದಂತೆ ಆರು ಜನರ ವಿರುದ್ದ ಪ್ರಕರಣ ದಾಖಲಾಗಿತ್ತು. ಐದು ಜನರನ್ನು ಮಸ್ಕಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ರು..
ಈ ದೇಶದ್ರೋಹ ಕೃತ್ಯದಲ್ಲಿ ಪಾಲ್ಗೊಂಡವರ ಪರ ವಕೀಲರ ಸಂಘ ವಕಾಲತ್ತು ವಹಿಸದಿರಲು ತೀರ್ಮಾನಿಸಿದೆ.. ದೇಶದ ವಿರುದ್ದವೇ ನಮ್ಮ ಜೊತೆಯಲ್ಲಿಯೇ ಇದ್ದು ಮಾತನಾಡುವವರಿಗೆ ತಕ್ಕ ಶಿಕ್ಷೆಯಾಗಬೇಕು ಎಂಬ ನಿಟ್ಟಿನಲ್ಲಿ ಈ ನಿರ್ಧಾರವನ್ನ ಕೈಗೊಂಡಿದೆ ಲಿಂಗಸಗೂರು ವಕೀಲರ ಸಂಘ…
ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿಗಾಗಿ ಸಿಂಧನೂರಿನಿಂದ ಓರ್ವ ವಕೀಲರು ಆಗಮಿಸಿದ್ದರು. ಆದರೆ ಅವರಿಗೆ ವಕೀಲರ ಸಂಘದ ನಿರ್ಣಯ ಹಾಗು ಪ್ರಕರಣದ ಗಂಭೀರತೆ ಅರ್ಥ ಮಾಡಿಸಿದ್ದರಿಂದ ಅವರು ಸಹ ಬೇಲ್ ಅರ್ಜಿ ಹಾಕದೆ ವಾಪಸ್ಸಾಗಿದ್ದಾರೆ.. ಈ ಮೂಲಕ ದೇಶದ್ರೋಹಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂಬ ನಿಟ್ಟಿನಲ್ಲಿ ನಮ್ಮ ವಕೀಲರು ಈ ಕ್ರಮಕ್ಕೆ ಮುಂದಾಗಿದ್ದಾರೆ..