ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರಿಂದ ಮನನೊಂದ ಕಾಂಗ್ರೆಸ್ ನ ಕಾರ್ಯಕರ್ತರು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
ಲೋಕಸಭಾ ಚುನಾವಣೆಗೆ ಇನ್ನೆರಡು ಹಂತದ ಮತದಾನ ಬಾಕಿ ಇದ್ದು ಉತ್ತರ ಪ್ರದೇಶದಲ್ಲಿ ಈ ಘಟನೆಯಿಂದ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ ಎಂದು ತಿಳಿದು ಬಂದಿದೆ.
ಉತ್ತರ ಪ್ರದೇಶದ ಭಾಡೋಹಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮಾಕಾಂತ ಯಾದವ್ ನಮಗೆ ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ, ಯಾವೊಬ್ಬ ಕಾರ್ಯಕರ್ತನಿಗೂ ಮಣೆ ಹಾಕುತ್ತಿಲ್ಲ ಎಂದು ಜಿಲ್ಲಾಧ್ಯಕ್ಷ ನೀಲಮ್ ಮಿಶ್ರ ಪ್ರಿಯಾಂಕ ಗಾಂಧಿ ಎದುರು ದೂರನ್ನು ಸಲ್ಲಿಸಲು ಮುಂದಾದಾಗ ಪ್ರಚಾರಕ್ಕೆ ಬಂದಿದ್ದ ಪ್ರಿಯಾಂಕ ಗಾಂಧಿಯವರು ನೀಲಂ ಅವರನ್ನು ನಿಂದಿಸಿದ್ದರು ಎನ್ನುವುದು ರಾಜೀನಾಮೆಗೆ ಮುಂದಾಗಿರುವ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಆಪಾದನೆಯಾಗಿದೆ.
ಇದರೊಂದಿಗೆ ರಾಜೀನಾಮೆ ನೀಡಿರುವ ಮಿಶ್ರ ಅಂಡ್ ಟೀಮ್ ಕ್ಷೇತ್ರದಲ್ಲಿ ಎಸ್ಪಿ, ಬಿಎಸ್ಪಿ ಅಭ್ಯರ್ಥಿ ರಂಗನಾಥ್ ಮಿಶ್ರಾ ಗೆ ಬೆಂಬಲ ನೀಡಲು ನಿರ್ಧರಿಸಿದ್ದು ಇದರಿಂದ ಕಾಂಗ್ರೆಸ್ ಗೆ ತೀವ್ರ ಹಿನ್ನಡೆಯಾಗಿದೆ.