ಉಪ್ಪಿಗೆ ದಾರಿ ಬಿಟ್ಟು ಕೊಟ್ಟ ಶಿವರಾಜ್​ ಕುಮಾರ್

Date:

ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಆತ್ಮೀಯರು. 1995ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಹೊಸ ರೂಪ ನೀಡಿದರು. ಅಂದು ಅವರು ನಿರ್ದೇಶಿಸಿದ್ದ ‘ಓಂ’ ಸ್ಯಾಂಡಲ್​ವುಡ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿತ್ತು. ಆ ಸಿನಿಮಾ ಮೂಲಕ ಶಿವರಾಜ್​ಕುಮಾರ್ ಅವರಿಗೆ ಹೊಸ ಇಮೇಜ್ ಕೂಡ ಬಂತು. ಶಿವಣ್ಣ ಎರಡು ಶೇಡ್​ಗಳಲ್ಲಿ ಕಾಣಿಸಿಕೊಂಡಿದ್ರು.
ನಂತರ 2000ರಲ್ಲಿ ಶಿವರಾಜ್​ಕುಮಾರ್ ಮತ್ತು ಉಪೇಂದ್ರ ಪ್ರೀತ್ಸೆ ಎನ್ನುವ ಸಿನಿಮಾದಲ್ಲಿ ಒಟ್ಟಿಗೇ ನಟಿಸಿದ್ದರು. ಆ ಸಿನಿಮಾ ಕೂಡ ಸೂಪರ್ ಡೂಪರ್ ಹಿಟ್ ಆಗಿತ್ತು. 2007ರಲ್ಲಿ ಈ ಜೋಡಿ ಲವಕುಶ ಎನ್ನುವ ಸಿನಿಮಾ ಮಾಡಿತು. ಆ ಸಿನಿಮಾವೂ ಸೂಪರ್ ಹಿಟ್ ಆಗಿತ್ತು. ಹೀಗೆ ಒಂದೇ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಶಿವಣ್ಣ ಮತ್ತು ಉಪ್ಪಿಯ ಬೇರೆ ಬೇರೆ ಸಿನಿಮಾಗಳು ಒಂದೇ ದಿನ ರಿಲೀಸ್ ಆಗುತ್ತವೆ. ಆ ಮೂಲಕ ಅವರಿಬ್ಬರ ನಡುವೆ ಫೈಟ್ ಏರ್ಪಡುತ್ತದೆ ಎನ್ನಲಾಗಿತ್ತು. ಅದಕ್ಕೀಗ ಬ್ರೇಕ್ ಬಿದ್ದಿದೆ.
ಉಪೇಂದ್ರ ಅಭಿನಯದ ಐ ಲವ್​ ಯು ಮತ್ತು ಶಿವರಾಜ್​ಕುಮಾರ್ ಅಭಿನಯದ ರುಸ್ತುಂ ಸಿನಿಮಾ ಒಂದೇ ದಿನ ರಿಲೀಸ್ ಆಗುತ್ತವೆ. ಅವರಿಬ್ಬರು ಮುಖಾಮುಖಿ ಆಗಲಿದ್ದಾರೆ ಎಂಬ ಚರ್ಚೆಗೆ ಈಗ ಅಂತ್ಯ ಹಾಡಲಾಗಿದೆ.
ಜೂನ್​ ತಿಂಗಳಲ್ಲಿ ಐ ಲವ್ ಯು ಮತ್ತು ರುಸ್ತುವಂ ತೆರೆಗೆ ಬರುತ್ತಿವೆ. ಆದರೆ 14 ದಿನದ ಗ್ಯಾಪ್ ಇದೆ. ಉಪ್ಪಿಯ ಐ ಲವ್​ ಯು ಜೂನ್ 14ರಂದು ರಿಲೀಸ್ ಆಗುತ್ತಿದೆ. ಇದೇ ದಿನ ರುಸ್ತುಂ ರಿಲೀಸ್ ಎನ್ನಲಾಗಿತ್ತು. ಆದರೆ. ರುಸ್ತುಂ ಬಿಡುಗಡೆಯನ್ನು ಮುಂದೂಡಲಾಗಿದೆ. ಜೂನ್ 28ರಂದು ರುಸ್ತುಂ ಬಿಡುಗಡೆಯಾಗುತ್ತಿದೆ. ಉಪ್ಪಿಯ ದಾರಿಯನ್ನು ಶಿವರಾಜ್​ ಕುಮಾರ್ ಸುಲಭ ಮಾಡಿಕೊಟ್ಟಂತಾಗಿದೆ. ಸ್ಟಾರ್ ನಟರ ಸಿನಿಮಾಗಳು ಒಂದೇ ದಿನ ರಿಲೀಸ್ ಆದರೆ ಇಂಡಸ್ಟ್ರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುದನ್ನು ಎಂದೂ ಮರೆಯಬಾರದು.

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...