ಉಪ ಚುನಾವಣೆಗೆ ತಡೆ ನೀಡಲು ಕಾರಣವಾದ ಅಂಶಗಳ ಕುರಿತಾಗಿ ಚರ್ಚೆ ನಡೆದಿದೆ. ಸ್ಪೀಕರ್ ಆದೇಶದ ಬಗ್ಗೆ ತೀರ್ಪು ನೀಡಲು ಕಾಲಾವಕಾಶ ಬೇಕಿತ್ತು. ಶಾಸಕರ ವಾದ ಅನರ್ಹತೆ ಆಧರಿಸಿ ತೀರ್ಪು ನೀಡಬೇಕಿದೆ. ಸ್ಪರ್ಧೆಗೆ ಅವಕಾಶ ನೀಡಿದರೆ ಶಾಸಕರ ಹಕ್ಕಿನ ಪ್ರಶ್ನೆ ಅಪೂರ್ಣವಾಗುತ್ತಿತ್ತು. ರಾಜೀನಾಮೆ, ಅನರ್ಹತೆ ಪ್ರಶ್ನೆಯೂ ಬಾಕಿ ಉಳಿಯುತ್ತಿತ್ತು. ಈ ಕಾರಣದಿಂದ ಉಪ ಚುನಾವಣೆಗೆ ತಡೆ ನೀಡಲಾಗಿದೆ ಎನ್ನಲಾಗಿದೆ.
ಸ್ಪೀಕರ್ ಆದೇಶಕ್ಕೆ ತಡೆ ನೀಡಿದ್ದರೆ ಗೊಂದಲ ಮುಂದುವರೆಯುತ್ತಿತ್ತು. ಸ್ಪೀಕರ್ ತೀರ್ಪಿಗೆ ತಡೆ ನೀಡಿದ್ದರೆ ಚುನಾವಣೆಗೂ ತಡೆ ಬೀಳುತ್ತಿತ್ತು. ಆದರೆ, ಶಾಸಕರ ರಾಜೀನಾಮೆ ಗೊಂದಲ ಮುಂದುವರೆಯುತ್ತಿತ್ತು.