ಉಳ್ಳಾಲ ಪೊಲೀಸರ ಮಿಂಚಿನ ಕಾರ್ಯಾಚರಣೆ ; ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಗಾಂಜಾ ಸಾಗಾಟಗಾರರು!
ಮಂಗಳೂರಿನ ಉಳ್ಳಾಲ ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದ ಗಾಂಜಾಸಾಗಾಟ ಮಾಡುತ್ತಿದ್ದ ನಾಲ್ವರು ಬಲೆಗೆ ಬಿದ್ದಿದ್ದಾರೆ.
ದರೋಡೆ ಪ್ರಕರಣವೊಂದರ ತನಿಖೆ ನಡೆಸುತ್ತಿದ್ದಾಗ ಮೀನಿನ ಲಾರಿಯಲ್ಲಿ ಗಾಂಜಾಸಾಗಾಟ ಮಾಡುತ್ತಿದ್ದ ಆರೋಪಿಗಳು ಉಳ್ಳಾಲ ಪೊಲೀಸರ ಕಣ್ಣಿಗೆ ಬಿದ್ದಿದ್ದಾರೆ.
ಇನ್ಸ್ ಪೆಕ್ಟರ್ ಸಂದೀಪ್ ಮತ್ತು ತಂಡದವರು ಕೂಡಲೇ ಲಾರಿಯನ್ನು ತಡೆದು ವಿಚಾರಣೆ ನಡೆಸಿ ಗಾಂಜಾ ಸಾಗಾಟವನ್ನು ಬಯಲಿಗೆಳೆದಿದ್ದಾರೆ.
ಕಾಸರಗೋಡಿನ ಮಹಮ್ಮದ್ ಫಾರೂಕ್, ಕೊಡಗಿನ ಸೈಯದ್ ಮಹಮ್ಮದ್, ಮುಡಿಪಿನ ಮಹಮ್ಮದ್ ಅನ್ಸಾರಿ, ಮಂಜೇಶ್ವರದ ಮೊಹಿದ್ದಿನ್ ನವಾಜ್ ಬಂಧಿತ ಆರೋಪಿಗಳು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಬಂಧಿತರಿಂದ 200 ಕೆ.ಜಿ. ಗಾಂಜಾ, 3 ತಲ್ವಾರ್, 1 ಚಾಕು ವಶಪಡಿಸಿಕೊಳ್ಳಲಾಗಿದೆ.