ಚಂದನ್ ಶೆಟ್ಟಿ ಕನ್ನಡದ ಸ್ಟಾರ್ ರ್ಯಾಪರ್… ವಿಶ್ವಮಟ್ಟದಲ್ಲಿ ಕನ್ನಡದ ರ್ಯಾಪ್ ಸಾಂಗು ಸೌಂಡು ಮಾಡುವಂತೆ ಮಾಡಿರುವ ಸ್ಟಾರ್! ಬಿಗ್ ಬಾಸ್ ಮನೆಯಲ್ಲೂ ಮೋಡಿ ಮಾಡಿದ ಪ್ರತಿಭಾವಂತ. ಬಿಗ್ ಬಾಸ್ ವಿನ್ನರ್ ಆಗಿ ಕನ್ನಡಿಗರ ಮನೆಮಾತಾದ ಚೆಲುವ. ಚಂದನ್ ಭಾಗವಹಿಸಿದ್ದ ಬಿಗ್ ಬಾಸ್ ಸೀಸನ್ 5ರ ಮೂಲಕವೇ ಇಡೀ ರಾಜ್ಯಕ್ಕೆ ಗೊತ್ತಾದ ಗೊಂಬೆಯಂಥಾ ಹುಡುಗಿ ನಿವೇದಿತಾ ಗೌಡ.
ಬಿಗ್ ಬಾಸ್ ರಿಯಾಲಿಟಿ ಶೋನಲ್ಲಾದ ಪರಸ್ಪರ ಪರಿಚಯ, ಒಡನಾಟ, ಸ್ನೇಹ ಚಂದನ್ ಮತ್ತು ನಿವೇದಿತಾ ಅವರಲ್ಲಿ ಗೊತ್ತೋ ಗೊತ್ತಾಗದಂತೆ ಪ್ರೀತಿ ಹುಟ್ಟಿತ್ತು. ಅವರಿಬ್ಬರ ಪ್ರೀತಿ ಅಂತೆ-ಕಂತೆ ಸುದ್ದಿಗಳಿಗೆ ಸ್ವತಃ ಚಂದನ್ ಶೆಟ್ಟಿ ಇತ್ತೀಚೆಗಷ್ಟೇ ತೆರೆ ಎಳೆದಿದ್ದರು. ಮೈಸೂರು ಯುವ ದಸರಾ ಸಾರ್ವಜನಿಕ ವೇದಿಕೆಯಲ್ಲಿ ಚಂದನ್ ಶೆಟ್ಟಿ ಎಲ್ಲರ ಎದುರೇ ನಿವೇದಿತಾಗೆ ಉಂಗುರ ತೊಡಿಸಿ ಪ್ರಪೋಸ್ ಮಾಡಿದ್ದರು. ಅದು ತೀವ್ರ ಟೀಕೆಗೆ ಗುರಿಯಾಗಿತ್ತು. ಆದರೆ, ಕುಟುಂಬದರು ಇಬ್ಬರ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟು ಮದುವೆ ಮಾಡಲು ನಿರ್ಧರಿಸಿದ್ದಾರೆ.
ಇಂದು ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಎಂಗೇಜ್ಮೆಂಟ್ ಆಗಿದೆ. ಖುಷಿ ಖುಷಿಯಿಂದ ಎರಡೂ ಕುಟುಂಬದವರು ಸೇರಿ ಚಂದು -ನಿವಿ ನಿಶ್ಚಿತಾರ್ಥವನ್ನು ಮಾಡಿದ್ದಾರೆ. ಶೀಘ್ರದಲ್ಲೇ ಚಂದದ ಈ ಜೋಡಿ ದಾಪಂತ್ಯಕ್ಕೆ ಕಾಲಿಡಲಿದೆ.
ಎಲ್ಲಾ ಓಕೆ ಆದರೆ, ಚಂದನ್ ಮತ್ತು ನಿವೇದಿತಾ ನಡುವಿನ ವಯಸ್ಸಿನ ಅಮತರವೆಷ್ಟು ಗೊತ್ತಾ? ನಿವೇದಿತಾ ಹಾಗೂ ಚಂದನ್ ನಡುವೆ ಹೆಚ್ಚು ಕಮ್ಮಿ 11 ವರ್ಷದ ಅಂತರವಿದೆ. ಚಂದನ್ಗೀಗ 30 ವರ್ಷ. ನೀವಿ 19 ವರ್ಷ. ಪ್ರೀತಿಗೆ ವಯಸ್ಸು, ಜಾತಿ, ಆಸ್ತಿ-ಅಂತಸ್ತು ಅಡ್ಡಿಯಾಗಲ್ಲ ಎಂಬುದು ಈ ಯುವ ಜೋಡಿಯ ವಿಷಯದಲ್ಲೂ ಸಾಬೀತಾಗಿದೆ. ಎನಿವೇ… ಯುವ ಜೋಡಿಗೆ ಶುಭವಾಗಲಿ.