ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಗುಂಡು ಹಾರಿಸಿದ ವ್ಯಕ್ತಿ ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್ ಎಂದು ಸಾಬೀತು ಆಗಿದೆ. ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ನಡೆದ ಗುರುತು ಪತ್ತೆ ಕಾರ್ಯದಲ್ಲಿ ಉಮಾದೇವಿ ಅವರು ಆರೋಪಿ ಗಣೇಶ್ ಮಿಸ್ಕಿನ್ ನನ್ನು ಗುರುತಿಸಿದ್ದಾರೆ.
ಧಾರವಾಡದ ತಹಶೀಲ್ದಾರ್ ನೇತೃತ್ವದಲ್ಲಿ ನಡೆದ ಗುರುತುಪತ್ತೆ ಕಾರ್ಯದಲ್ಲಿ, ಎಸ್ ಐಟಿ ಅಧಿಕಾರಿಗಳು ಗಣೇಶ್ ಮಿಸ್ಕಿನ್ ಸೇರಿದಂತೆ 10 ಜನರನ್ನು ನಿಲ್ಲಿಸಿ ಗುರುತು ಪತ್ತೆ ಕಾರ್ಯ ನಡೆಸಿದ್ದಾರೆ. ಮೂರು ಸುತ್ತಿನಲ್ಲಿ ನಡೆದ ಗುರುತು ಪತ್ತೆಯಲ್ಲಿ ಮೂರು ಬಾರಿಯೂ ಮಿಸ್ಕಿನ್ ನನ್ನೇ ಉಮಾದೇವಿ ಗುರುತಿಸಿದ್ದಾರೆ.