ಮುಂಬೈ: ಎಗ್ ಬುರ್ಜಿಗಾಗಿ ದಂಪತಿ ಮಧ್ಯೆ ನಡೆದಿರುವ ಜಗಳ ಪೊಲೀಸ್ ಠಾಣೆ ಮೆಟ್ಟಲೇರಿರುವ ಘಟನೆ ಮಹಾಷ್ಟ್ರದ ಬುಲ್ಬಾನಾದ ಒಂದು ಗ್ರಾಮದಲ್ಲಿ ನಡೆದಿದೆ.
ದಂಪತಿ ಮುದ್ದಾದ ಹೆಣ್ಣು ಮಗುವಿನೊಂದಿಗೆ ವಾಸವಾಗಿದ್ದರು. ಒಂದು ದಿನ ಪತಿ 3 ಮೊಟ್ಟೆಯನ್ನು ತಂದು ಎಗ್‍ಬುರ್ಜಿಯನ್ನು ಮಾಡುವಂತೆ ಪತ್ನಿಗೆ ಹೇಳಿದ್ದಾನೆ. ಅಷ್ಟರಲ್ಲಾಗಲೇ ಏನೋ ಕೆಲಸ ನೆನಪಾಗಿ ಹೊರಗೆ ಹೋಗಿ ಬರುತ್ತೇನೆ. ಊಟಕ್ಕೆ ಎಗ್ ಬಿರ್ಜಿಯನ್ನು ಮಾಡಿಡುವಂತೆ ಹೇಳಿ ಹೋಗಿದ್ದಾನೆ.
ಪತ್ನಿ ಎಗ್ ಬುರ್ಜಿಯನ್ನು ಮಾಡಿಟ್ಟಿದ್ದಾಳೆ. ಆದರೆ ಅಡುಗೆ ಮನೆಯಲ್ಲಿದ್ದ ಎಗ್ ಬುರ್ಜಿಯನ್ನು ನೋಡಿದ ಮಗಳು ಹಸಿವಾಗಿದೆ ಎಂದು ಸಂಪೂರ್ಣ ತಿಂದು ಮುಗಿಸಿದ್ದಾಳೆ. ಪತಿ ಬದಲು ಮಗಳು ತಿಂದಿದ್ದಾಳೆ ಬಿಡು ಎಂದು ಪತ್ನಿ ಸುಮ್ಮನಾಗಿದ್ದಾಳೆ.
ಪತಿ ಹಸಿವಿನಿಂದ ಮನೆಗೆ ಬಂದಿದ್ದಾನೆ. ಊಟ ಬಡಿಸುವಾಗ ಎಗ್ ಬುರ್ಜಿಯನ್ನು ಹಾಕು ಎಂದು ಹೇಳಿದ್ದಾನೆ. ಆಗ ನಿಮ್ಮ ಮಗಳು ತಿಂದು ಖಾಲಿ ಮಾಡಿದ್ದಾಳೆ ಎಂದು ಹೇಳಿದ್ದಾಳೆ. ಆಗ ಸಿಟ್ಟಿನಿಂದ ಹೆಂಡತಿಯ ಮೇಲೆ ರೇಗಾಡಿದ್ದಾನೆ. ಅವರಿಬ್ಬ ಮಧ್ಯೆ ಎಗ್‍ಬುರ್ಜಿಗಾಗಿ ನಡೆದ ಜಗಳ ಪೊಲೀಸ್ ಠಾಣೆಯ ಮೆಟ್ಟಿಲು ಏರುವವರೆಗೂ ಬಂದಿದೆ.
ಜಗಳದ ಕಾರಣ ಕೇಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಬಿದ್ದು ಬಿದ್ದು ನಗಲಾರಂಭಿಸಿದ್ದಾರೆ. ನಂತರ ಸಿಬ್ಬಂದಿ ಅಂಗಡಿಗೆ ಹೋಗಿ ಮೂರು ಮೊಟ್ಟೆಯನ್ನು ತಂದು ದಂಪತಿಗೆ ಕೊಟ್ಟು ಮನೆಗೆ ಕಳುಹಿಸಿದ್ದಾರೆ.
ತಿರುವನಂತಪುರಂ: ಬಾಲಿವುಡ್ ಮಾದಕ ಚೆಲುವೆ ಸನ್ನಿ ಲಿಯೋನ್ ಕಾರ್ಯಕ್ರಮಗಳಿಗೆ ಭಾಗವಹಿಸುವುದಾಗಿ 29 ಲಕ್ಷ ಪಡೆದು ವಂಚನೆ ಮಾಡಿರುವ ಆರೋಪದಡಿ ಕೇರಳ ಪೊಲೀಸರಿಂದ ತೀವ್ರ ವಿಚಾರಣೆ ನಡೆಸಿದ್ದಾರೆ.
ದೂರುಗಳನ್ವಯ ಕೇರಳ ಪೊಲೀಸರು ಸನ್ನಿ ಲಿಯೋನ್ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಕೊರೊನಾ ಕಾರಣದಿಂದ ಭಾಗವಹಿಸಲು ಸಾಧ್ಯವಾಗಿಲ್ಲ. ನಾನು ಕಾರ್ಯಕ್ರಮಕ್ಕೆ ಭಾಗವಹಿಸಲು 12 ಲಕ್ಷ ರೂಪಾಯಿ ಮಾತ್ರ ಪಡೆದಿದ್ದೇನೆ, ಆ ಹಣವನ್ನು ಹಿಂದಿರುಗಿಸುತ್ತೇನೆ. ಅಲ್ಲದೇ 5 ಬಾರಿ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಹೀಗಾಗಿ ಎಲ್ಲದಕ್ಕೂ ಕಾರಣ ಆ ಕಾರ್ಯಕ್ರಮದ ಸಂಘಟಕರು ಎಂದು ಸನ್ನಿ ಲಿಯೋನಿ ಆರೋಪಿಸಿದ್ದಾರೆ ಎಂದು ವರದಿಯಾಗಿದೆ.
ಕೊಚ್ಚಿಯಲ್ಲಿ ಏರ್ಪಡಿಸಲಾಗಿದ್ದ 2 ಕಾರ್ಯಕ್ರಮಗಳಿಗೆ ಭಾಗವಹಿಸುವುದಾಗಿ ಹೇಳಿ ಸನ್ನಿ 29 ಲಕ್ಷ ಪಡೆದಿದ್ದಾರೆ. ಬಳಿಕ ಕಾರ್ಯಕ್ರಮಕ್ಕೆ ಬರದೆ ವಂಚಿಸಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರು ದೂರು ನೀಡಿರುವ ಹಿನ್ನೆಲೆಯಲ್ಲಿ ಸನ್ನಿ ಲಿಯೋನ್ ಅವರನ್ನು ವಿಚಾರಣೆ ಮಾಡಲಾಗಿತ್ತು.
—