ಹೊಸದಿಲ್ಲಿ: ವಿವಾದಿತ ಪ್ರೈವಸಿ ಪಾಲಿಸಿ ಅಪ್ಡೇಟ್‌ನ್ನು ಹಿಂಪಡೆಯುವಂತೆ ವಾಟ್ಸಾಪ್‌ಗೆ ಸರಕಾರ ಸೂಚಿಸಿದೆ. ಭಾರತೀಯ ಬಳಕೆದಾರರ ಮಾಹಿತಿಯ ಗೌಪ್ಯತೆ ಮತ್ತು ದತ್ತಾಂಶ ಸುರಕ್ಷತೆಯನ್ನು ಕಾಪಾಡುವಂತೆ ಸರಕಾರ ಹೇಳಿದೆ.
ಈ ನೀತಿಯನ್ನು ಫೇಸ್‌ಬುಕ್ ಒಡೆತನದ ವಾಟ್ಸಾಪ್ ಅನಾವರಣಗೊಳಿಸಿದ ಬಗ್ಗೆ ಸರಕಾರ ಅಸಮಾಧಾನ ವ್ಯಕ್ತಪಡಿಸಿದೆ. ಈ ವಿಷಯದ ಬಗ್ಗೆ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕಂಪನಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ವಾಟ್ಸಾಪ್ ಸಿಇಒ ವಿಲ್ ಕ್ಯಾಥ್‌ಕಾರ್ಟ್‌ಗೆ ಪತ್ರ ಬರೆಯಲಾಗಿದೆ. ಅಪ್ಡೇಟ್ ಮತ್ತು ಫೇಸ್‌ಬುಕ್‌ನೊಂದಿಗಿನ ಡೇಟಾ-ಹಂಚಿಕೆ ಭಾರತೀಯ ಬಳಕೆದಾರರನ್ನು ಹೆಚ್ಚಿನ ಭದ್ರತಾ ಅಪಾಯಗಳು ಮತ್ತು ದೋಷಗಳಿಗೆ ಒಡ್ಡುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಇದರ ಜತೆಗೆ, ‘ಒಂದೋ ನೀತಿಯನ್ನು ಒಪ್ಪಿಕೊಳ್ಳಿ, ಇಲ್ಲವೇ ವಾಟ್ಸಾಪ್‌ನ್ನು ತೊರೆಯಿರಿ’ ಎಂಬ ಕಂಪನಿಯ ಹಠಮಾರಿ ಧೋರಣೆಯ ಬಗ್ಗೆಯೂ ಸರಕಾರ ಅಸಮಧಾನ ವ್ಯಕ್ತಪಡಿಸಿದೆ.






