ಎಚ್ಚರ; ಈ ನಗರಗಳಲ್ಲೇ ಹೆಚ್ಚು ಕೊರೊನಾ ಕಾಟ

1
53

ಮಾಲಿನ್ಯಭರಿತ ನಗರಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚು ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ.
ಭುವನೇಶ್ವರದ ಉತ್ಕಲ್ ವಿಶ್ವವಿದ್ಯಾಲಯ, ಪುಣೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಫಿಕಲ್ ಮಿಡಿಯೊರಾಲಜಿ, ರೂರ್ಕೆಲಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಭುವನೇಶ್ವರದ ಐಐಟಿ ತಜ್ಞರು, ವಾಯುಗುಣಮಟ್ಟ ಮತ್ತು ಕೋವಿಡ್ 19 ಪ್ರಕರಣಗಳು ಮತ್ತು ಸಾವುಗಳು ಕುರಿತು ಕಳೆದ ವರ್ಷ ನವೆಂಬರ್ 5ರವರೆಗೆ ಧ್ಯಯನ ನಡೆಸಿದ ವರದಿ ಸಿದ್ಧಪಡಿಸಿದೆ.


ದೆಹಲಿ, ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ್ತಾ, ಅಹಮದಾಬಾದ್, ವಾರಾಣಸಿ, ಲಕ್ನೋ ಹಾಗೂ ಸೂರತ್ ಸೇರಿದಂತೆ 16 ನಗರಗಳಲ್ಲಿ ಹೆಚ್ಚು ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ. ಈ ನಗರಗಳಲ್ಲಿ ಪಿಎಂ.2.5 ಹೊರಸೂಸುವಿಕೆಯೂ ಹೆಚ್ಚಿದೆ.
ಪಿಎಂ.2.5 ಎಂಬುದು ಸೂಕ್ಷ್ಮ ಕಣವಾಗಿದ್ದು, ದೇಹದ ಒಳಗೆ ಸೇರಿ ಶ್ವಾಸಕೋಶಗಳಿಗೆ ಹಾನಿ ಮಾಡುತ್ತವೆ. ಇದರಿಂದ ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಜತೆಗೆ, ರೋಗ ನಿರೋಧಕ ಶಕ್ತಿಯನ್ನು ಸಹ ಕುಂದಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.


ಹೆಚ್ಚು ಕೋವಿಡ್ 19 ಪ್ರಕರಣಗಳು ಮಹಾರಾಷ್ಟ್ರ, ದೆಹಲಿ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಬಿಹಾರ, ಒಡಿಶಾ, ಕರ್ನಾಟಕ ಹಾಗೂ ಮಧ್ಯಪ್ರದೇಶದಲ್ಲಿ ಪತ್ತೆಯಾಗಿವೆ. ಈ ಪ್ರದೇಶಗಳಲ್ಲಿ ಪಿಎಂ.2.5 ಅತಿ ಹೆಚ್ಚು ಇರುವುದು ತಿಳಿದುಬಂದಿದೆ.

1 COMMENT

LEAVE A REPLY

Please enter your comment!
Please enter your name here