ಕಳೆದ ವರ್ಷವಷ್ಟೇ ರಾಧಿಕಾ ಮತ್ತು ಯಶ್ ಅವರ ಜೋಡಿಗೆ ಮೊದಲನೇ ಮಗು ಜನಿಸಿತ್ತು. ಇನ್ನು ಮೊದಲನೇ ಹೆಣ್ಣು ಮಗು ಜನಿಸಿದ ಕೆಲವೇ ತಿಂಗಳಿಗೆ ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಅವರು ಮತ್ತೆ ಗರ್ಭವತಿಯಾಗಿದ್ದಾರೆ ಎಂಬ ವಿಷಯವನ್ನು ಯಶ್ & ರಾಧಿಕಾ ಜೋಡಿ ತುಂಬಾ ವಿಭಿನ್ನವಾಗಿ ಹೇಳಿಕೊಂಡಿತ್ತು. ಇನ್ನು ಇತ್ತೀಚೆಗಷ್ಟೇ ರಾಧಿಕಾ ಅವರಿಗೆ ಎರಡನೇ ಸೀಮಂತ ಕಾರ್ಯಕ್ರಮವನ್ನೂ ಸಹ ನಡೆಸಲಾಗಿತ್ತು.
ಇಂದು ಬೆಳಗ್ಗೆ ರಾಧಿಕಾ ಯಶ್ ಅವರಿಗೆ ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು , ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ತಿಳಿದುಬಂದಿದೆ. ಮಗು & ತಾಯಿ ಇಬ್ಬರೂ ಸಹ ಆರೋಗ್ಯವಾಗಿದ್ದು ಸದ್ಯದಲ್ಲೇ ಈ ಕುರಿತು ಹೆಚ್ಚಿನ ವಿಷಯವನ್ನು ರಾಕಿಂಗ್ ಸ್ಟಾರ್ ಯಶ್ ಅವರು ಹಂಚಿಕೊಳ್ಳಲಿದ್ದಾರೆ.