ಎರಡನೇ ಮದುವೆ: ಅಣ್ಣನಿಂದಲೇ ಕೊಲೆಯಾದ ತಂಗಿ!

Date:

ವಾರದ ಹಿಂದಷ್ಟೇ ಮದುವೆ ಆಗಿದ್ದ ತಂಗಿಯನ್ನ ಅಣ್ಣನೇ ಬರ್ಬರವಾಗಿ ಕೊಂದು ಪೊಲೀಸ್​ ಠಾಣೆಗೆ ಹೋಗಿ ಶರಣಾದ ಘಟನೆ ನವಲಗುಂದ ಪಟ್ಟಣದ ಕಲ್ಮೇಶ್ವರ ಗುಡಿ ಓಣಿಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ಶಶಿಕಲಾ ನಿಂಗಪ್ಪ ಸುಣಗಾರ (31) ಹತ್ಯೇಗಿಡಾದವರು.

 

ಈಕೆಯ ಸಹೋದರ ಮಹಾಂತೇಶ ಶರಣಪ್ಪನವರ ಕೊಲೆಗೈದ ಆರೋಪಿ. ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಶಶಿಕಲಾ 8 ದಿನಗಳ ಹಿಂದೆ ರವಿ ಪಾಠಕ್​ ಎಂಬಾತನನ್ನು ಪ್ರೀತಿಸಿ ವಿವಾಹವಾಗಿದ್ದಳು. ಗಂಡನ ಮನೆಯಲ್ಲಿದ್ದ ತಂಗಿ ಬಳಿ ಮಂಗಳವಾರ ಹೋದ ಅಣ್ಣ, ಆಕೆಯ ಕಣ್ಣಿಗೆ ಖಾರದಪುಡಿ ಎರಚಿ ತಲ್ವಾರ್​ನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ಮಹಾಂತೇಶ ನೇರವಾಗಿ ನವಲಗುಂದ ಪೊಲೀಸ್​ ಠಾಣೆಗೆ ಹೋಗಿ ಶರಣಾಗಿದ್ದಾನೆ. ನಡೆದ ಘಟನೆ ಬಗ್ಗೆ ವಿವರಿಸಿದ್ದಾನೆ. ಅಷ್ಟಕ್ಕೂ ಆತ ನವವಿವಾಹಿತ ತಂಗಿಯನ್ನೇ ಕೊಂದಿದ್ದು ಏಕೆ ಗೊತ್ತಾ?

ಈ ಹಿಂದೆ ಹುಬ್ಬಳ್ಳಿ ತಾಲೂಕಿನ ಅರಳಿಕಟ್ಟಿ ಗ್ರಾಮದ ನಿಂಗಪ್ಪ ಎಂಬುವರ ಜತೆಗೆ ಶಶಿಕಲಾಗೆ ಮದುವೆ ಆಗಿತ್ತು. ಮದ್ವೆಯಾದ 6 ತಿಂಗಳಿಗೆ ನಿಂಗಪ್ಪ ನಿಧನ ಹೊಂದಿದ್ದರು. ನಂತರ ಶಶಿಕಲಾ ತವರಿಗೆ ಬಂದಿದ್ದಳು. ಇತ್ತೀಚೆಗೆ ರವಿ ಎಂಬಾತನನ್ನು ಪ್ರಿತಿಸಿ ಮದುವೆಯಾಗಲು ಮುಂದಾಗಿದ್ದಳು. ಇದಕ್ಕೆ ಸಹೋದರ ಮಹಾಂತೇಶನ ಒಪ್ಪಿಗೆ ಇರಲಿಲ್ಲ. ಆದರೂ ಶಶಿಕಲಾ, ಕಳೆದ ವಾರ ರವಿಯನ್ನು ಮದುವೆಯಾಗಿ ಆತನ ಮನೆಗೆ ಹೋಗಿದ್ದಳು.

ಇದೇ ವಿಚಾರವಾಗಿ ಸಹೋದರ ಮಹಾಂತೇಶ ಹಾಗೂ ಶಶಿಕಲಾ ನಡುವೆ ಹಲವು ಬಾರಿ ಜಗಳ ನಡೆದಿತ್ತು. ಮಂಗಳವಾರ ಮಧ್ಯಾಹ್ನ ತಂಗಿ ಮನೆಗೆ ಹೋಗಿದ್ದ ಮಹಾಂತೇಶ ಸಹೋದರಿ ಜತೆ ಜಗಳ ತೆಗೆದಿದ್ದ. ಬಳಿಕ ಏಕಾಏಕಿ ಆಕೆಯ ಕಣ್ಣಿಗೆ ಖಾರದ ಪುಡಿ ಎರಚಿ, ಹರಿತವಾದ ತಲ್ವಾರ್​ನಿಂದ ಕೊಚ್ಚಿ ಕೊಲೆಗೈದಿದ್ದಾನೆ. ಕೂಡಲೇ ಸ್ಥಳಕ್ಕೆ ಧಾವಿಸಿದ ನವಲಗುಂದ ಠಾಣೆ ಪೊಲೀಸರು ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೊದಲ ಗಂಡ ಸತ್ತ ಬಳಿಕ ಆಕೆ ಮತ್ತೊಂದು ಮದ್ವೆ ಆಗಿದ್ದೇ ತಪ್ಪಾ? ಅಣ್ಣನಿಗೆ ಏಕೆ ತಂಗಿ ಮೇಲೆ ಇಷ್ಟೊಂದು ಕೋಪ? ಎಂಬ ಪ್ರಶ್ನೆಗಳನ್ನ ಹುಟ್ಟುಹಾಕುತ್ತೆ ಈ ಘಟನೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...