No menu items!
15 C
Munich
Saturday, June 13, 2026

ಪೊಲೀಸ್ ತಪಾಸಣೆ ವೇಳೆ ಅಪಘಾತ; ಹಾರಿಹೋಯ್ತು ಪ್ರಾಣ

Must read

ಪೊಲೀಸರು ವಾಹನ ತಪಾಸಣೆ ಮಾಡುವ ವೇಳೆ ಅಪಘಾತ ಭೀಕರ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ನಾಗರಾಜು (60) ಹಾಗೂ ಚಿದಾನಂದ (45) ಮೃತ ದುರ್ದೈವಿಗಳು.

ತಿಪಟೂರು ತಾಲೂಕಿನ ಬಳುವನೇರಳು ಗೇಟ್ ಬಳಿ ಹೊನ್ನವಳ್ಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು.

ಈ ವೇಳೆ ಬೈಕ್‌ನಲ್ಲಿ ತಿಪಟೂರು ಕಡೆಗೆ ತೆರಳುತ್ತಿದ್ದ ನಾಗರಾಜು ಮತ್ತು ಚಿದಾನಂದ ಎಂಬುವವರು ಪೊಲೀಸರು ಇರೋದನ್ನು ನೋಡಿ ಹೆದರಿ ಬೈಕ್ ಬೇರೆಡೆಗೆ ತಿರುಗಿಸಿದ್ದಾರೆ. ಈ ವೇಳೆ ಎದುರು ಬರುತ್ತಿದ್ದ ಬುಲೆರೋ ಜೀಪ್‌ಗೆ ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಈ ಅಪಘಾತಕ್ಕೆ ಪೊಲೀಸರೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಸಂಬಂಧ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article