ರಾಜ್ಯ ಅಲ್ಲದೆ ದೇಶ ಪ್ರಪಂಚದಾದ್ಯಂತ ಒಂದು ಸೊಂಕು ಜನರ ನೆಮ್ಮದಿ ಹಾಳು ಮಾಡಿದೆ ಇದರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ, ಆದ್ರೆ ಜನರು ಮಾತು ಕೇಳುತ್ತಿಲ್ಲ ಮನೆ ಇದ ಆಚೆ ಬರಬೇಡಿಎಂದರು ಸಹ ಮಾತು ಕೇಳದ ಕೆಲವರು ಬೀದಿಗೆ ಬರುತ್ತಿದ್ದಾರೆ ಹಾಗೆ ಮನೆಯಿಂದ ಹೊರಡುವ ಮೊದಲು ಮಾಸ್ಕ್ ಧರಿಸಬೇಕು ಎಂದು ಸರ್ಕಾರ ಆದೇಶ ಮಾಡಿತ್ತು ಹಾಗು ಯಾರು ಮಾಸ್ಕ್ ದರಿಸಿಲ್ಲ ಅವರು ಪೊಲೀಸರಿಂದ ಹೊಡಸಿಕೊಂಡು ಬರುತ್ತಿದ್ದರು, ಬಹುತೇಕ ಅಂಗಡಿಗಳಲ್ಲಿ,
ಮಾರ್ಕೆಟ್ ಗಳಲ್ಲಿ ಮಾಸ್ಕ್ ಧರಿಸಿಕೊಂಡು ಬರುವಂತೆ ಹೇಳಲಾಗುತ್ತಿದೆ. ಮಾಸ್ಕ್ ಇಲ್ಲದವರಿಗೆ ಪ್ರವೇಶ ನಿರಾಕರಿಸಲಾಗುತ್ತದೆ. ಪೊಲೀಸರು ಕೂಡ ಮಾಸ್ಕ್ ಧರಿಸಲು ಸೂಚನೆ ನೀಡಿದ್ದಾರೆ. ಆದರೆ ಜನರಿಗೆ ಮಾಸ್ಕ್ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ.
ಇದಕ್ಕೆ ಇದೀಗ ಒಂದು ಸೂಚನೆ ಬಂದಿದ್ದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಸ್ಪಷ್ಟನೆ ನೀಡಿದೆ. ಎಲ್ಲರೂ ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ. ಶೀತ, ಕೆಮ್ಮು, ಜ್ವರ ಅಥವಾ ಉಸಿರಾಟದ ತೊಂದರೆ ಇರುವವರು, ಕೋರೋನಾ ಸೋಂಕಿತರು, ಅವರನ್ನು ಉಪಚರಿಸುತ್ತಿರುವ ಆರೋಗ್ಯ ಸಿಬ್ಬಂದಿ ಮಾತ್ರ ಮಾಸ್ಕ್ ಧರಿಸಿದರೆ ಸಾಕು ಎಂದು ಹೇಳಲಾಗಿದೆ.