ನಿನ್ನೆ ಸಂಕ್ರಾಂತಿ ಹಬ್ಬವನ್ನು ಎಲ್ಲರೂ ಆಚರಿಸಿ ಈ ವರ್ಷದಲ್ಲಾದರೂ ಕೊರೋನಾ ದಿಂದ ಮುಕ್ತಿ ಸಿಗುವಂತಾಗಲಿ ಎಂದು ಪ್ರಾರ್ಥನೆ ಮಾಡಿದರು. ಎಳ್ಳುಬೆಲ್ಲ ತಿಂದು ಸಂಕ್ರಾಂತಿ ಹಬ್ಬವನ್ನು ಕರ್ನಾಟಕದಾದ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಇನ್ನು ಸಂಕ್ರಾಂತಿ ಹಬ್ಬದ ಬಹುಮುಖ್ಯ ಭಾಗ ಹಸುಗಳನ್ನು ಕಿಚ್ಚಾಯಿಸುವುದು.. ಹೌದು ಬೆಂಕಿಯ ಮೇಲೆ ಹಸುಗಳನ್ನು ಹಾರಿಸಿ ಜನರು ಸಂಭ್ರಮಿಸುತ್ತಾರೆ.
ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫಾರ್ಮ್ ಹೌಸ್ ನಲ್ಲಿಯೂ ಸಹ ಸಂಕ್ರಾಂತಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಬೆಂಕಿಯಿಂದ ಹೊತ್ತಿಸಿ ಅದರ ಮೇಲೆ ಹಸುಗಳನ್ನು ಹಾರಿಸಲಾಯಿತು.. ವಿಶೇಷವೆಂದರೆ ದರ್ಶನ್ ಅವರು ತಮ್ಮ ಪ್ರೀತಿಯ ಕುದುರೆಯನ್ನು ಕಿಚ್ಚು ಹಾಯಿಸಿದರು.. ಹೌದು ಎಲ್ಲರೂ ಸಾಮಾನ್ಯವಾಗಿ ಹಸುಗಳನ್ನು ಹೆಚ್ಚು ಹಾಯಿಸಿದರೆ ದರ್ಶನ್ ಅವರು ಮಾತ್ರ ವಿಶೇಷವಾಗಿ ಕುದುರೆಯನ್ನು ಕಿಚಾಯಿಸಿದರು.
ದರ್ಶನ್ ಅವರ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಖತ್ ಸದ್ದು ಮಾಡುತ್ತಿವೆ.. ಈ ಮೂಲಕ ದರ್ಶನ್ ಅವರ ಪ್ರಾಣಿ-ಪ್ರೀತಿ ಮತ್ತೊಮ್ಮೆ ಜನರಿಗೆ ಸಖತ್ ಇಷ್ಟ ಆಗಿದೆ..