ಮಾಜಿ ಸಂಸದ ವಿ.ಎಸ್. ಉಗ್ರಪ್ಪನವರು ಕೆಪಿಸಿಸಿ ಕಚೇರಿಯಲ್ಲಿ ಮಾತನಾಡುತ್ತಾ ಯಡಿಯೂರಪ್ಪನವರ ಸ್ಥಿತಿ ನೋಡಿದರೆ ಗಾಬರಿಯಾಗುತ್ತದೆ. ಯಡಿಯೂರಪ್ಪನವರ ಸ್ವಾಭಿಮಾನ ಶೂನ್ಯವಾಗಿದೆ. ಏನಾದರೂ ಪರವಾಗಿಲ್ಲ ಅಧಿಕಾರ ಸಾಕು ಎನ್ನುವಂತೆ ಇದ್ದಾರೆ ಎಂದು ಹೇಳಿದರು .
ರಾಜ್ಯದಲ್ಲಿ ಪ್ರವಾಹದಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ಪರಿಹಾರ ಕೇಳಿದರೆ ನೋಟ್ ಪ್ರಿಂಟ್ ಮಷಿನ್ ಇಲ್ಲ ಎಂದು ಹೇಳುತ್ತಾರೆ. ಆದರೆ, ನೋಟ್ ಎಣಿಸುವ ಮಷಿನ್ ಅವರ ಮನೆಯಲ್ಲಿ ಇದೆ. ಸಂತ್ರಸ್ತರಿಗೆ ಸಮರೋಪಾದಿಯಲ್ಲಿ ಪರಿಹಾರ ನೀಡಬೇಕಿತ್ತು. ಆದರೆ, ಅದರ ಬಗ್ಗೆ ಗಮನವನ್ನೇ ಹರಿಸಿಲ್ಲ ಎಂದು ಉಗ್ರಪ್ಪ ಟೀಕಿಸಿದ್ದಾರೆ.