ಏನಿದು ವೈಟಲ್ ವೇಸ್ಟ್..? ಮಿಸ್ ಮಾಡ್ದೇ ಓದಲೇ ಬೇಕಾದ ಸ್ಟೋರಿ…ಯಾಕಂದ್ರೆ?

Date:

ಏನಿದು ವೈಟಲ್ ವೇಸ್ಟ್..? ಮಿಸ್ ಮಾಡ್ದೇ ಓದಲೇ ಬೇಕಾದ ಸ್ಟೋರಿ…ಯಾಕಂದ್ರೆ?

ಇವರು ತುಷಾರ್ ಹಿಮತ್ಸಿಂಗ್ಕ. ಇವರಿಗಿನ್ನು 35 ವರ್ಷ. ಇಂದು ದೇಶದೆಲ್ಲೆಡೆ ಮನೆಮಾತನಾಗಿರುವ ‘ವೈಟಲ್ ವೇಸ್ಟ್ ’ ಅನ್ನುವ ಸಂಸ್ಥೆಯ ಸಂಸ್ಥಾಪಕರು. ತುಷಾರ್ ಮತ್ತು ಪ್ರಶಾಂತ್ ಬೋತ್ರಾ ಗೆಳೆಯರು. ಲಂಡನ್ ಸ್ಕೂಲ್ ಆಫ್ ಕಾಮರ್ಸ್ನಿಂದ ಎಂಬಿಎ ಪದವಿ ಪಡೆದಿದ್ದರು. ವಿಶೇಷ ಎಂದರೆ, ಇವರಿಬ್ಬರೂ ಕಾರ್ಪೋರೇಟ್ ಸಂಸ್ಥೆಯಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಪಡೆಯುತ್ತಿದ್ದರು. ಆದ್ರೆ ಸಿಟಿ ಆಫ್ ಜಾಯ್ ಅಂತಾನೇ ಖ್ಯಾತಿ ಪಡೆದಿರುವ ಕೊಲ್ಕತ್ತಾದ ಜನರಿಗೆ ಕಸದಿಂದ ಮುಕ್ತಿ ನೀಡಬೇಕು ಅಂತ ಯೋಚನೆ ಮಾಡಿದ್ದರು. 2016ರ ಮೇ ತಿಂಗಳಿನಲ್ಲಿ “ವೈಟಲ್ ವೇಸ್ಟ್” ಅನ್ನುವ ಕಂಪನಿಯನ್ನು ಹುಟ್ಟುಹಾಕಿ ಕೊಲ್ಕತ್ತಾದ ಜನರಿಗೆ ಕಸದಿಂದ ಮುಕ್ತಿ ನೀಡಿ, ಅದರಿಂದ ಮರುಬಳಕೆಯ ವಸ್ತುಗಳನ್ನು ತಯಾರು ಮಾಡಬೇಕು ಅನ್ನುವ ಯೋಚನೆ ಮಾಡಿದ್ರು.
ಈಗ, ವೈಟಲ್ ವೇಸ್ಟ್ ಕೊಲ್ಕತ್ತಾದ ಕಾರ್ಪೋರೇಟ್ ಕಚೇರಿ, ಶಾಲೆ ಹಾಗೂ ವಸತಿ ಪ್ರದೇಶಗಳಿಂದ ಕಸವನ್ನು ಸಂಗ್ರಹಿಸಿ ಅದನ್ನು ಮರುಬಳಕೆ ಮಾಡುವ ಬಗ್ಗೆ ತಿಳಿಸಿಕೊಡುತ್ತಿದೆ. ‘ ವೈಟಲ್ ವೇಸ್ಟ್ ’ಸ್ಟಾರ್ಟ್ ಅಪ್ ಕಸವನ್ನು ಸಂಗ್ರಹಿಸುವಲ್ಲಿಂದ ಹಿಡಿದು, ಅದರಿಂದ ಮರುಬಳಕೆಯಾಗುವ ವಸ್ತುಗಳ ತನಕ ಆ ಕಸವನ್ನು ವಿಂಗಡಣೆ ಮಾಡುತ್ತದೆ. ಕಸರಹಿತ ಪರಿಸರವನ್ನು ಸೃಷ್ಟಿಸಲು ಈ ಸ್ಟಾರ್ಟ್ ಅಪ್ ಸಂಸ್ಥೆ ಇನ್ನಿಲ್ಲದಂತೆ ಶ್ರಮಿಸುತ್ತಿದೆ.


ತುಷಾರ್ ಅವರು ದಶಕಗಳ ಕಾಲ ಬ್ಯಾಂಕಿಂಗ್, ಇನ್ಶೂರೆನ್ಸ್, ರಿಯಲ್ ಎಸ್ಟೇಟ್ ಮತ್ತು ಲಾಜಿಸ್ಟಿಕ್ ಸರ್ವೀಸ್ ವಲಯಗಳಲ್ಲಿ ಕೆಲಸ ಮಾಡಿದ್ದರು. ಪ್ರಶಾಂತ್ 19 ವರ್ಷಗಳ ಕಾಲ ಚಿಲ್ಲರೆ ವ್ಯಾಪಾರ ಮತ್ತು ಉತ್ಪಾದನಾ ವಯಲದಲ್ಲಿ ಅನುಭವ ಪಡೆದಿದ್ದರು. ಕಳೆದ ಎರಡು ವರ್ಷದಲ್ಲಿ “ವೈಟಲ್ ವೇಸ್ಟ್” 50ಟನ್ ಕಸವನ್ನು ಸಂಗ್ರಹಿಸಿದೆ. 10 ಶಾಲೆಗಳು, ಮತ್ತು 20 ಸಾವಿರ ವಿಭಿನ್ನ ವಲಯದಿಂದ ಕಸವನ್ನು ಸಂಗ್ರಹಿಸಿದೆ.
ಕೊಲ್ಕತ್ತಾ ಕ್ರಿಕೆಟ್ ಮತ್ತು ಫುಟ್ಬಾಲ್ ಕ್ಲಬ್, ಐರನ್ ಮೌಂಟೇನ್, ಹೆಚ್ಡಿಎಫ್ಸಿ ಹೋಮ್ಲೋನ್ ಸೇರಿದಂತೆ ಹಲವು ಸಂಸ್ಥೆಗಳಿಂದ ಕಸವನ್ನು ಸಂಗ್ರಹಿಸಿದೆ. ಕಳೆದ ಒಂದು ವರ್ಷದಿಂದ “ವೈಟಲ್ ವೇಸ್ಟ್” ಕಸವನ್ನು ಸಂಗ್ರಹಿಸುತ್ತಿದೆ. ಆದ್ರೆ ಈವರೆಗೆ ಜನರಿಗೆ ಕಸವನ್ನು ವಿಂಗಡಿಸುವ ಬಗೆಯಾಗಲಿ ಅಥವಾ ಮರುಬಳಕೆಯ ಬಗ್ಗೆ ಜಾಗೃತಿ ಹೆಚ್ಚಿಲ್ಲ. ಅಷ್ಟೇ ಅಲ್ಲ ಕಸವನ್ನು ಮನಸ್ಸು ಬಂದ ಕಡೆ ಎಸೆಯುವುದು ಕಡಿಮೆಯೂ ಆಗಿಲ್ಲ.
ಕೊಲ್ಕತ್ತಾದ ವಿವಿಧದೆಡೆಯಿಂದ ಕಸ ಸಂಗ್ರಹಿಸಿರುವ “ವೈಟಲ್ ವೇಸ್ಟ್”, ಜನರಿಗೆ ಕಸವಿಂಗಡಣೆ, ಮರುಬಳಕೆ ಮಾಡುವ ಬಗ್ಗೆ ತಿಳಿಸಿಕೊಡುತ್ತಿದೆ. ಅಷ್ಟೇ ಅಲ್ಲ ತನ್ನ ಜೊತೆ ಒಪ್ಪಂದ ಮಾಡಿಕೊಂಡ ಸಂಸ್ಥೆಗಳಿಗೆ ವೇಸ್ಟ್ ಆಡಿಟ್ ರಿಪೋರ್ಟ್ ಕೂಡ ನೀಡಲಿದೆ. ಸಂಸ್ಥೆಯಿಂದ ಸಂಗ್ರಹಿಸಿದ ಒಟ್ಟಾರೆ ಕಸ ಮತ್ತು ಅದರಿಂದ ಉತ್ಪತ್ತಿಯಾದ ಮರುಬಳಕೆ ವಸ್ತುಗಳ ಬಗ್ಗೆ ಆಡಿಟ್ ರಿಪೋರ್ಟ್ನಲ್ಲಿ ಅಂಕಿಅಂಶ ನೀಡಲಾಗುತ್ತದೆ. ಈ ಮೂಲಕ ಕಸ ವಿಂಗಡಣೆಯಿಂದ ಆಗುವ ಲಾಭದ ಬಗ್ಗೆ ತಿಳುವಳಿಕೆ ನೀಡುವ ಉದ್ದೇಶ ಇಟ್ಟುಕೊಳ್ಳಲಾಗಿದೆ.


“ವೈಟಲ್ ವೇಸ್ಟ್” ಇತ್ತೀಚೆಗೆ ಕಸ ವಿಂಗಡಣೆ ಹಾಗೂ ಮರುಬಳಕೆ ಬಗ್ಗೆ ಸಕಷ್ಟು ಜ್ಞಾನವನ್ನು ನೀಡುತ್ತಿದೆ. ಶಾಲಾ ಕಾಲೇಜುಗಳಿಗೆ ತೆರಳಿ ಈ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ. “ವೈಟಲ್ ವೇಸ್ಟ್” ಶಾಲಾ ಕಾಲೇಜುಗಳಿಂದ ಕಸವನ್ನು ಸಂಗ್ರಹಿಸಿ, ಅದರಿಂದ ಪಡೆದ ಹಣದಿಂದ ಮತ್ತೊಂದು ಶಾಲೆಗೆ ಹಣಕಾಸಿನ ನೆರವು ನೀಡುತ್ತಿದೆ. ಸದ್ಯಕ್ಕೆ “ವೈಟಲ್ ವೇಸ್ಟ್” ಆರಂಭಿಕ ಹೆಜ್ಜೆ ಇಡುತ್ತಿದ್ದು, ಮುಂದಿನ ದಿನಗಳಲ್ಲಿ ತನ್ನ ಸಮಾಜಮುಖಿ ಕಾರ್ಯದ ಮೂಲಕ ಜನರ ಮನಗೆದ್ದು, ಲಾಭದ ಹೆಜ್ಜೆ ಇಡುವ ಯೋಚನೆ ಮಾಡುತ್ತಿದೆ. ಸಮಾಜಕ್ಕೆ ಮಾದರಿಯಾಗಲು ಹವಣಿಸುತ್ತಿದೆ.

Share post:

Subscribe

spot_imgspot_img

Popular

More like this
Related

ಧರ್ಮಸ್ಥಳ ಕೇಸ್: ತರಾತುರಿಯಲ್ಲಿ ಎಸ್‌ಐಟಿ ರಚಿಸಿ ಶ್ರೀ ಕ್ಷೇತ್ರಕ್ಕೆ ಧಕ್ಕೆ – ನಿಖಿಲ್ ಕುಮಾರಸ್ವಾಮಿ

ಧರ್ಮಸ್ಥಳ ಕೇಸ್: ತರಾತುರಿಯಲ್ಲಿ ಎಸ್‌ಐಟಿ ರಚಿಸಿ ಶ್ರೀ ಕ್ಷೇತ್ರಕ್ಕೆ ಧಕ್ಕೆ -...

ಧರ್ಮಸ್ಥಳ ಪ್ರಕರಣ: ಜನರಿಗೆ ವಾಸ್ತವಾಂಶ ತಿಳಿಸುವುದಷ್ಟೇ ಸರ್ಕಾರದ ಉದ್ದೇಶ – ಡಿ.ಕೆ. ಶಿವಕುಮಾರ್

ಧರ್ಮಸ್ಥಳ ಪ್ರಕರಣ: ಜನರಿಗೆ ವಾಸ್ತವಾಂಶ ತಿಳಿಸುವುದಷ್ಟೇ ಸರ್ಕಾರದ ಉದ್ದೇಶ - ಡಿ.ಕೆ....

ಮತ್ತೆ ಏರಿಕೆ ಕಂಡ ಬಂಗಾರ: ಇಂದು ಚಿನ್ನದ ಬೆಲೆ ಎಷ್ಟು ಏರಿಕೆ ಆಗಿದೆ ಗೊತ್ತಾ?

ಮತ್ತೆ ಏರಿಕೆ ಕಂಡ ಬಂಗಾರ: ಇಂದು ಚಿನ್ನದ ಬೆಲೆ ಎಷ್ಟು ಏರಿಕೆ...

ನವರಾತ್ರಿಯ ಆರನೇ ದಿನ (ಷಷ್ಠೀ ತಿಥಿ) ಪೂಜಿಸಲ್ಪಡುವ ದೇವಿ ಮಾ ಕಾತ್ಯಾಯನಿ ಕಥೆ !

ನವರಾತ್ರಿಯ ಆರನೇ ದಿನ (ಷಷ್ಠೀ ತಿಥಿ) ಪೂಜಿಸಲ್ಪಡುವ ದೇವಿ ಮಾ ಕಾತ್ಯಾಯನಿ...