ಏನು ಹೆದರಿಸುತ್ತಾ ಇದ್ದಾರಾ..? ಏನ್ಮಾಡ್ತಾರೆ ಜೆಡಿಎಸ್ ಕಾರ್ಯಕರ್ತರು..!?

Date:

ಜೆಡಿಎಸ್​ ಅನ್ನು ಕಳ್ಳರ ಪಕ್ಷ ಎಂದು ಯಶ್​ ಹೇಳಿದ್ದಾಗಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದ ಕುಮಾರಸ್ವಾಮಿಯವರ ಮಾತುಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅವರ ಪಕ್ಷದಲ್ಲಿಯೂ ನನಗೆ ತುಂಬ ಜನರು ಸ್ನೇಹಿತರಿದ್ದಾರೆ. ಕಳೆದ ಬಾರಿ ಅವರ ಪರವಾಗಿಯೂ ಹೋಗಿ ಪ್ರಚಾರ ನಡೆಸಿದ್ದೆ. ಅದು ಕಳ್ಳರ ಪಕ್ಷವೆಂದಾದರೆ ನಾನ್ಯಾಕೆ ಅವರ ಪರ ಪ್ರಚಾರಕ್ಕೆ ಹೋಗುತ್ತಿದ್ದೆ ಎಂದರು.

cm vs yash

ನಾನು ಜೆಡಿಎಸ್​ ಪಕ್ಷವನ್ನು ಕಳ್ಳರ ಪಕ್ಷ ಎಂದು ಯಾವತ್ತೂ ಹೇಳಿಲ್ಲ. ನಾನು ಹಾಗೆ ಹೇಳಿದ್ದೇನೆಂದು ಯಾರಾದರೂ ತೋರಿಸಿಬಿಡಲಿ, ಅವರು ಹೇಳಿದಂತೆ ಕೇಳುತ್ತೇನೆ ಎಂದು ನಟ ಯಶ್​ ಹೇಳಿದ್ದಾರೆ.

ಅವರು ರಾಜ್ಯದ ಸಿಎಂ. ತುಂಬ ಬಿಜಿಯಾಗಿರುತ್ತಾರೆ. ಈ ವಿಚಾರದಲ್ಲಿ ಯಾರೋ ಚಾಡಿ ಹೇಳಿರಬೇಕು. ಮಿಸ್​ ಗೈಡ್​ ಮಾಡಿರಬೇಕು. ನಾನ್ಯಾವತ್ತೂ ಹಾಗೆ ಹೇಳಿಲ್ಲ. ಸುಮ್ಮನೆ ಆಡದ ಮಾತಿಗೆಲ್ಲ ನಾನು ಆರೋಪ ಹೊತ್ತುಕೊಳ್ಳುವುದಿಲ್ಲ. ಅವರ ಪಕ್ಷದಲ್ಲೇ ಹಲವು ಜನರು ಏನೇನೋ ಕೆಟ್ಟದಾಗಿ ಮಾತುಗಳನ್ನಾಡುತ್ತಿದ್ದಾರೆ. ನಮಗೂ ಸಿನಿಮಾದವರು ಎಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ತೀರ ಪರ್ಸನಲ್​ ಆಗಿ ವಾಗ್ದಾಳಿ ನಡೆಸಿದಾಗ ತಿರುಗಿ ಮಾತಾಡಿದ್ದೇವೆ ಎಂದು ಹೇಳಿದರು. ಇದು ರೌಡಿ ರಾಜ್ಯವಲ್ಲ. ಪ್ರಜಾಪ್ರಭುತ್ವ. ನಮ್ಮ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ. ಮಾತನಾಡಬೇಕಾಗುತ್ತದೆ. ಆರೂವರೆ ಕೋಟಿ ಜನ ಒಪ್ಪಿಕೊಂಡ ಮುಖ್ಯಮಂತ್ರಿ ಹೀಗೆ ಹೇಳಬಹುದಾ? ಅಂಬರೀಷಣ್ಣ ಇದ್ದಾಗಲೂ, ಈಗಲೂ ಅವರ ಮನೆಯ ಮಕ್ಕಳಂತೆ ಇದ್ದೇವೆ. ನಮ್ಮ ಅಭ್ಯರ್ಥಿ ಪರ ನಾವು ಮಾತನಾಡುತ್ತ, ಪ್ರಚಾರ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

 

Share post:

Subscribe

spot_imgspot_img

Popular

More like this
Related

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...