ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(ಎಎಐ) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ 2021-22ನೇ ಸಾಲಿನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಕುರಿತಂತೆ ಅಧಿಕೃತ ವೆಬ್‌ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ವಿವಿಧ ಹಿರಿಯ ಸಹಾಯಕ ಹುದ್ದೆಗಳಿಗೆ ಆಯ್ಕೆಯಾಗ ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಆಗಸ್ಟ್ 31, 2021 ರೊಳಗೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.
ಸಂಸ್ಥೆಯ ಹೆಸರು: ಏರ್ ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಎಐ)
ಹುದ್ದೆ: Senior Assistant
ಒಟ್ಟು ಹುದ್ದೆ: ವಿವಿಧ
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 31, 2021
ಹುದ್ದೆಗಳ ವಿವರ:
ಹಿರಿಯ ಸಹಾಯಕ (ಆಪರೇಷನ್ಸ್): 14 ಹುದ್ದೆ
ಹಿರಿಯ ಸಹಾಯಕ (ಫೈನಾನ್ಸ್): 06 ಹುದ್ದೆ
ಹಿರಿಯ ಸಹಾಯಕ (ಎಲೆಕ್ಟ್ರಾನಿಕ್ಸ್): 09 ಹುದ್ದೆ
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಡಿಪ್ಲೋಮಾ ಪಡೆದಿರಬೇಕು.
ಹಿರಿಯ ಸಹಾಯಕ (ಆಪರೇಷನ್ಸ್): ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಮ್ಯಾನೇಜ್ಮೆಂಟ್ ವಿಷಯದಲ್ಲಿ ಡಿಪ್ಲೋಮಾ ಹಾಗೂ ಲಘು ವಾಹನದ ಲೈಸನ್ಸ್.
ಹಿರಿಯ ಸಹಾಯಕ (ಫೈನಾನ್ಸ್): ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿ, ಕಂಪ್ಯೂಟರ್ ಸೈನ್ಸ್ ಕೋರ್ಸ್ (3 ರಿಂದ 6 ತಿಂಗಳ) ಪ್ರಮಾಣ ಪತ್ರ.
ಹಿರಿಯ ಸಹಾಯಕ (ಎಲೆಕ್ಟ್ರಾನಿಕ್ಸ್): ಸರ್ಕಾರದಿಂದ ಮಾನ್ಯತೆ ಪಡೆದ ತಾಂತ್ರಿಕ ವಿಶ್ವವಿದ್ಯಾಲಯದಿಂದ ಡಿಪ್ಲೋಮಾ ಇನ್ ಎಲೆಕ್ಟ್ರಾನಿಕ್ಟ್ರ್ಸ್/ ಟೆಲಿ ಕಮ್ಯೂನಿಕೇಷನ್/ ರೇಡಿಯೋ ಇಂಜಿನಿಯರಿಂಗ್.
ವಯೋಮಿತಿ:
ಹಿರಿಯ ಸಹಾಯಕ (ಆಪರೇಷನ್ಸ್), ಹಿರಿಯ ಸಹಾಯಕ (ಫೈನಾನ್ಸ್) ಹಾಗೂ ಹಿರಿಯ ಸಹಾಯಕ (ಎಲೆಕ್ಟ್ರಾನಿಕ್ಸ್) ಮೂರು ಹುದ್ದೆಗಳಿಗೆ ಜೂನ್ 30, 2021ರ ಅನ್ವಯ ಅಭ್ಯರ್ಥಿಗಳ ವಯೋಮಿತಿ ಗರಿಷ್ಠ 50 ವರ್ಷ ಮೀರಬಾರದು.