ಐಪಿಎಲ್‍ನಲ್ಲಿ ಪಾಕ್ ಆಟಗಾರರಿಗೆ ಅವಕಾಶ ನೀಡಿ ಎಂದು ಮನವಿ ಮಾಡಿ ಪಿಸಿಬಿ ನಿರ್ದೇಶಕ ವಾಸೀಂ ಖಾನ್
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು, ಪಾಕ್ ಆಟಗಾರರಿಗೆ ಕೂಡ ಐಪಿಎಲ್ ನಲ್ಲಿ ಅವಕಾಶ ನೀಡಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನೂತನ ನಿರ್ದೇಶಕರಾಗಿ ಆಯ್ಕೆ ಆಗಿರುವ ವಾಸೀಂ ಖಾನ್ ಹೇಳಿದ್ದಾರೆ.
ಎರಡು ದೇಶಗಳ ನಡುವಿನ ವಿವಾದಗಳು ಕ್ರಿಕೆಟ್ ಮೇಲೆ ಪ್ರಭಾವ ಬೀರಿದೆ. ವಿವಾದಗಳನ್ನು ಬಿಟ್ಟು ಕ್ರಿಕೆಟ್ ಗೆ ಹೆಚ್ಚಿನ ಅಧ್ಯತೆ ನೀಡಿ ಎಂದಿದ್ದಾರೆ. ಈ ಹಿಂದೆ 2008 ರಲ್ಲಿ ಪಾಕಿಸ್ತಾನದ ಆಟಗಾರರನ್ನು ಐಪಿಎಲ್ ನಲ್ಲಿ ಆಯ್ಕೆ ಮಾಡಲಾಗಿತ್ತು. ಆದರೆ ಮುಂಬೈ ದಾಳಿ ನಂತರ ಸಂಪೂರ್ಣವಾಗಿ ಪಾಕ್ ಆಟಗಾರರನ್ನು ಐಪಿಎಲ್ ನಿಂದ ದೂರ ಇಡಲು ಭಾರತ ಸರ್ಕಾರ ನಿರ್ದೇಶಿಸಿತ್ತು.
ಇದರಿಂದಾಗಿ ಅಂದಿನಿಂದ ಐಪಿಎಲ್ ನಲ್ಲಿ ಪಾಕ್ ಆಟಗಾರರನ್ನು ಕೈ ಬಿಡಲಾಗಿದೆ. ಆದರೆ ಈ ಬಾರಿ ಪಾಕ್ ಆಟಗಾರರಾಗಿಗೆ ಐಪಿಎಲ್ ನಲ್ಲಿ ಆಡಲು ಅವಕಾಶ ನೀಡಬೇಕು ಎಂದು ವಾಸೀಂ ಖಾನ್ ಮನವಿ ಮಾಡಿದ್ದಾರೆ.