ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಏಪ್ರಿಲ್ ತಿಂಗಳಲ್ಲಿ ಭಾರತದಲ್ಲಿ ಆರಂಭವಾಗಿತ್ತು. ಆದರೆ ವಿವಿಧ ತಂಡಗಳ ಆಟಗಾರರಲ್ಲಿ ಕೊರೋನಾವೈರಸ್ ಸೋಂಕು ಕಾಣಿಸಿಕೊಂಡ ಕಾರಣ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ದುಬೈಗೆ ಸ್ಥಳಾಂತರಿಸಲಾಗಿದೆ.
ಮುಂಬರಲಿರುವ ಸೆಪ್ಟೆಂಬರ್ 19ರಿಂದ ಉಳಿದ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯ ಪಂದ್ಯಗಳು ನಡೆಯಲಿದ್ದು ಇದೀಗ ಬಿಸಿಸಿಐ ಯುಎಇ ಪ್ರವಾಸ ಕೈಗೊಳ್ಳಲಿರುವ ಆಟಗಾರರಿಗೆ ಹೊಸ ಷರತ್ತೊಂದನ್ನು ವಿಧಿಸಿದೆ. ಬಿಸಿಸಿಐ ವಿಧಿಸಿರುವ ನೂತನ ಷರತ್ತನ್ನು ಎಲ್ಲಾ ತಂಡಗಳ ಆಟಗಾರರೂ ಸಹ ತಪ್ಪದೆ ಪಾಲಿಸಬೇಕಾಗಿದೆ.
ಯುಎಇ ಪ್ರವಾಸ ಕೈಗೊಳ್ಳಲಿರುವ ಎಲ್ಲಾ ತಂಡದ ಆಟಗಾರರು ಸಹ ಕಡ್ಡಾಯವಾಗಿ 2 ಡೋಸ್ ಕೊರೊನಾ ವ್ಯಾಕ್ಸಿನ್ ಪಡೆಯಲೇ ಬೇಕಾಗಿದೆ. ಕಡ್ಡಾಯವಾಗಿ 2ಡೋಸ್ ಲಸಿಕೆ ಪಡೆದ ನಂತರವಷ್ಟೇ ಇವೆ ಈ ಪ್ರವಾಸವನ್ನು ಕೈಗೊಳ್ಳಬಹುದು ಎಂದು ಬಿಸಿಸಿಐ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದೆ. ಹೀಗಾಗಿ ಯುಎಇ ಪ್ರವಾಸ ಕೈಗೊಳ್ಳಲು ತಯಾರಾಗಿರುವ ಎಲ್ಲ ಆಟಗಾರರೂ ತಪ್ಪದೇ 2ಡೋಸ್ ಕೊರೊನಾ ವ್ಯಾಕ್ಸಿನ್ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ.