ಐಪಿಎಲ್ : ಧೋನಿಯ ಈ ದಾಖಲೆ ಮುರಿಯುವುದು ಸುಲಭದ ಮಾತಲ್ಲ!

Date:

ಕೇವಲ ಕಳೆದ ಬಾರಿಯ ಒಂದು ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ತೋರಿದ ಎಂಎಸ್ ಧೋನಿ ಅವರ ನಾಯಕತ್ವದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು ಎದುರಾದವು. ಬಹುಷಃ ಧೋನಿ ಅವರು ಐಪಿಎಲ್ ಇತಿಹಾಸದಲ್ಲಿ ಸ್ಥಾಪಿಸಿರುವ ದಾಖಲೆಗಳನ್ನು ಟೀಕಾಕಾರರು ಮರೆತಿರಬಹುದು. ಧೋನಿ ನಿರ್ಮಿಸಿರುವ ಈ ಒಂದು ರೆಕಾರ್ಡ್ ಮುರಿಯುವುದು ಸುಲಭದ ಮಾತಲ್ಲ. ಇದುವರೆಗೂ ನಡೆದಿರುವ ಐಪಿಎಲ್ ಟೂರ್ನಿಯಲ್ಲಿ ಅತಿಹೆಚ್ಚು ಗೆಲುವು ಸಾಧಿಸಿರುವ ನಾಯಕ ಎಂಬ ಹೆಗ್ಗಳಿಕೆಯನ್ನು ಧೋನಿ ಹೊಂದಿದ್ದಾರೆ. ಧೋನಿ ನಾಯಕತ್ವದಲ್ಲಿ 110 ಐಪಿಎಲ್ ಪಂದ್ಯಗಳನ್ನು ಗೆಲ್ಲಿಸಿದ್ದಾರೆ , ಇದು ಐಪಿಎಲ್ ಇತಿಹಾಸದಲ್ಲಿಯೇ ನಾಯಕನೊಬ್ಬ ಗೆಲ್ಲಿಸಿರುವ ಅತಿ ಹೆಚ್ಚು ಪಂದ್ಯ. ಇಷ್ಟು ಪಂದ್ಯಗಳನ್ನು ಗೆಲ್ಲಿಸುವ ಸಾಹಸವನ್ನು ಇದುವರೆಗೂ ಬೇರೆ ಯಾವ ನಾಯಕನೂ ಮಾಡಿಲ್ಲ , ಈ ದಾಖಲೆಯನ್ನು ಮುರಿಯುವುದಿರಲಿ ಇದರ ಹತ್ತಿರಕ್ಕೂ ಸಹ ಯಾರೂ ಬಂದಿಲ್ಲ.

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ನಾಯಕನಾಗಿ ಇದುವರೆಗೂ 188 ಪಂದ್ಯಗಳನ್ನು ಆಡಿದ್ದಾರೆ , ಇದರಲ್ಲಿ 110 ಪಂದ್ಯಗಳಲ್ಲಿ ಧೋನಿ ತಂಡ ಜಯಗಳಿಸಿದ್ದು 77 ಪಂದ್ಯಗಳಲ್ಲಿ ಸೋಲುಂಡಿದೆ ಮತ್ತು ಫಲಿತಾಂಶ ದೊರಕದ ಪಂದ್ಯದ ಸಂಖ್ಯೆ 1. ಐಪಿಎಲ್ ತಂಡವೊಂದರ ನಾಯಕನಾಗಿ ಧೋನಿ ಮಾಡಿರುವ ಈ ಸಾಧನೆಯನ್ನು ಬೇರೆ ಯಾವ ನಾಯಕರೂ ಸಹ ಮಾಡಲಾಗಿಲ್ಲ. ಹೀಗಾಗಿ ಎಂಎಸ್ ಧೋನಿ ಐಪಿಎಲ್ ಬೆಸ್ಟ್ ಕ್ಯಾಪ್ಟನ್ ಎನಿಸಿಕೊಂಡಿದ್ದಾರೆ.

 

 

ನಾಯಕನಾಗಿ ಅತಿಹೆಚ್ಚು ಪಂದ್ಯಗಳಲ್ಲಿ ಜಯ ಸಾಧಿಸಿರುವ ಟಾಪ್ 4 ಆಟಗಾರರ ಪಟ್ಟಿ ಈ ಕೆಳಕಂಡಂತಿದೆ ನೋಡಿ

1. ಎಂಎಸ್ ಧೋನಿ :

ಎಂ ಎಸ್ ಧೋನಿ ನಾಯಕನಾಗಿ 188 ಪಂದ್ಯಗಳನ್ನಾಡಿದ್ದು ಇದರಲ್ಲಿ 110 ಜಯ & 77 ಸೋಲುಗಳಿವೆ. ಒಂದು ಪಂದ್ಯ ಫಲಿತಾಂಶ ರಹಿತವಾಗಿದೆ.

2. ಗೌತಮ್ ಗಂಭೀರ್ :

ಧೋನಿ ಬಿಟ್ಟರೆ ಗೌತಮ್ ಗಂಭೀರ್ ನಾಯಕನಾಗಿ ಅತಿಹೆಚ್ಚು ಐಪಿಎಲ್ ಪಂದ್ಯಗಳನ್ನು ಗೆದ್ದಿದ್ದಾರೆ. 129 ಪಂದ್ಯಗಳನ್ನು ನಾಯಕನಾಗಿ ಆಡಿರುವ ಗಂಭೀರ್ 71 ಪಂದ್ಯಗಳಲ್ಲಿ ಗೆದ್ದು 57 ಪಂದ್ಯಗಳಲ್ಲಿ ಸೋಲನುಭವಿಸಿದ್ದಾರೆ ಮತ್ತು ಒಂದು ಪಂದ್ಯ ಡ್ರಾ ಆಗಿದೆ.

3. ರೋಹಿತ್ ಶರ್ಮಾ :

5 ಐಪಿಎಲ್ ಟ್ರೋಫಿಗಳನ್ನು ಹೊಂದಿರುವ ಏಕೈಕ ನಾಯಕ ಎಂಬ ಹೆಗ್ಗಳಿಕೆ ಹೊಂದಿರುವ ರೋಹಿತ್ ಶರ್ಮಾ 116 ಪಂದ್ಯಗಳನ್ನು ನಾಯಕನಾಗಿ ಆಡಿದ್ದಾರೆ. ಇದರಲ್ಲಿ 68 ಪಂದ್ಯಗಳಲ್ಲಿ ಜಯಿಸಿ , 44 ಪಂದ್ಯಗಳಲ್ಲಿ ಸೋಲನ್ನುಂಡಿದ್ದಾರೆ ಮತ್ತು 4 ಪಂದ್ಯಗಳು ಡ್ರಾ ಆಗಿವೆ.

4. ವಿರಾಟ್ ಕೊಹ್ಲಿ :

ನಾಯಕನಾಗಿ ಅತಿಹೆಚ್ಚು ಐಪಿಎಲ್ ಪಂದ್ಯ ಗೆದ್ದಿರುವ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿ ನಿಲ್ಲುತ್ತಾರೆ. ಇದುವರೆಗೂ 125 ಐಪಿಎಲ್ ಪಂದ್ಯಗಳನ್ನಾಡಿರುವ ಕೊಹ್ಲಿ 55 ಪಂದ್ಯಗಳಲ್ಲಿ ಜಯಗಳಿಸಿ, 63 ಪಂದ್ಯಗಳಲ್ಲಿ ಸೋಲನ್ನುಂಡಿದ್ದಾರೆ ಹಾಗೂ 3 ಪಂದ್ಯಗಳು ಡ್ರಾ ಆಗಿದ್ದು 4 ಪಂದ್ಯಗಳಲ್ಲಿ ಫಲಿತಾಂಶ ಸಿಕ್ಕಿಲ್ಲ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...