ಐಪಿಎಲ್ ನಡೆದಿದ್ರೂ ಆಡುತ್ತಿರಲಿಲ್ಲ : ಚಾಹಲ್

Date:

ಏಪ್ರಿಲ್ 9ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಉದ್ಘಾಟನಾ ಪಂದ್ಯದ ಮೂಲಕ ಆರಂಭವಾಗಿದ್ದ ಈ ಬಾರಿಯ ಐಪಿಎಲ್ ಟೂರ್ನಿ 29 ಪಂದ್ಯಗಳು ಯಶಸ್ವಿಯಾಗಿ ಮುಗಿದ ನಂತರ ಕೊರೊನಾವೈರಸ್ ಕಾರಣದಿಂದ ಮುಂದೂಡಲ್ಪಟ್ಟಿದೆ. ಐಪಿಎಲ್ ಬಯೋಬಬಲ್ ಒಳಗೆ ಕೊರೊನಾವೈರಸ್ ಪ್ರವೇಶಿಸಿ ವಿವಿಧ ತಂಡಗಳ ಕೆಲ ಆಟಗಾರರಿಗೆ ಮತ್ತು ತರಬೇತುದಾರರಿಗೆ ಸೋಂಕು ತಗುಲಿದ ಕಾರಣ ಐಪಿಎಲ್ ಟೂರ್ನಿಯನ್ನು ಮುಂದೂಡಲಾಯಿತು.

ಇದೀಗ ಐಪಿಎಲ್ ಮುಂದೂಡಲ್ಪಟ್ಟ ವಿಷಯದ ಕುರಿತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಬೌಲರ್ ಯುಜುವೇಂದ್ರ ಚಾಹಲ್ ಮಾತನಾಡಿದ್ದು ಗಂಭೀರ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಿದ್ದ ಚಾಹಲ್ ಒಂದುವೇಳೆ ಐಪಿಎಲ್ ಮುಂದೂಡಲ್ಪಡದೇ ಮುಂದುವರೆದಿದ್ದರೂ ಕೂಡ ತಾನು ಸಂಪೂರ್ಣ ಟೂರ್ನಿಯನ್ನು ಆಡುತ್ತಿರಲಿಲ್ಲ ಎಂಬ ವಿಚಾರವನ್ನು ಚಾಹಲ್ ಬಹಿರಂಗಪಡಿಸಿದ್ದಾರೆ.

ಹೌದು ಚಾಹಲ್ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಮನೆಯಲ್ಲಿದ್ದ ಚಾಹಲ್ ತಂದೆ ಮತ್ತು ತಾಯಿ ಇಬ್ಬರಿಗೂ ಸಹ ಕೊರೊನಾ ಸೋಂಕು ತಗುಲಿತ್ತು. ಚಾಹಲ್ ತಾಯಿಗೆ ಕೊರೊನಾಸೋಂಕಿನ ಲಕ್ಷಣಗಳು ಕಡಿಮೆ ಇದ್ದ ಕಾರಣ ಮನೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದರು, ಆದರೆ ಚಾಹಲ್ ತಂದೆಗೆ ಸೋಂಕು ತೀವ್ರ ಪ್ರಮಾಣದಲ್ಲಿದ್ದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ಟೂರ್ನಿಯಲ್ಲಿ ಆಟದ ಕಡೆ ಹೆಚ್ಚಿನ ಗಮನಹರಿಸಲು ಆಗುತ್ತಿರಲಿಲ್ಲ ಮತ್ತು ಅಂತಹ ಸಂದರ್ಭದಲ್ಲಿ ಪೋಷಕರ ಜೊತೆ ಇರುವುದು ಅಗತ್ಯವಾಗಿತ್ತು ಎಂದು ಹೇಳಿಕೊಂಡಿರುವ ಚಾಹಲ್ ಒಂದುವೇಳೆ ಐಪಿಎಲ್ ಮುಂದುವರೆದಿದ್ದರೂ ಸಹ ತಾನು ಟೂರ್ನಿಯಿಂದ ಹೊರಗುಳಿಯುತ್ತಿದ್ದೆ ಎಂದಿದ್ದಾರೆ.

 

Share post:

Subscribe

spot_imgspot_img

Popular

More like this
Related

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...

ತುಳಸಿ ಗಿಡದಲ್ಲಿನ ಈ ಬದಲಾವಣೆಗಳು ನೀಡುವ ಸೂಚನೆಗಳೇನು..?

ತುಳಸಿ ಗಿಡದಲ್ಲಿನ ಈ ಬದಲಾವಣೆಗಳು ನೀಡುವ ಸೂಚನೆಗಳೇನು..? ಮನೆಯ ಅಂಗಳದಲ್ಲಿ ಬೆಳೆದ ತುಳಸಿ...

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...