ಐಪಿಎಲ್ ನಡೆಸುವುದು ಅಕ್ರಮ ಎಂದ ಇಂಗ್ಲೆಂಡ್!

Date:

ಪ್ರಸ್ತುತ ಐಪಿಎಲ್ ಟೂರ್ನಿ ಏಪ್ರಿಲ್ 9ರಂದು ಆರಂಭವಾಗಿ ಯಶಸ್ವಿಯಾಗಿ ಮೇ 4ರವರೆಗೂ ಯಾವುದೇ ಅಡಚಣೆಯಿಲ್ಲದೆ ನಡೆದಿತ್ತು. ನಂತರ ವಿವಿಧ ತಂಡಗಳ ಕೆಲ ಆಟಗಾರರಿಗೆ ಕೊರೊನಾ ಸೊಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಸ್ತುತ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಮುಂದೂಡಿದೆ. ಹೀಗಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಹೇಗಾದರೂ ಮಾಡಿ ಮೊಟಕುಗೊಂಡಿರುವ ಐಪಿಎಲ್ ಟೂರ್ನಿಯನ್ನು ಪೂರ್ಣಗೊಳಿಸಬೇಕೆಂದು ಬಿಸಿಸಿಐ ಚಿಂತನೆ ನಡೆಸಿದೆ.

 

ಭಾರತದಲ್ಲಿ ಐಪಿಎಲ್ ಪಂದ್ಯಗಳನ್ನು ನಿಲುಗಡೆ ಮಾಡಿದ ಬೆನ್ನಲ್ಲೇ ಇಂಗ್ಲೆಂಡ್ ಮತ್ತು ವೇಲ್ಸ್ ಕೌಂಟಿ ಕ್ರಿಕೆಟ್ ಕ್ಲಬ್‌ಗಳು 2021ರ ಐಪಿಎಲ್ ಟೂರ್ನಿಯ ಆತಿಥ್ಯವನ್ನು ವಹಿಸಲು ಪ್ರಸ್ತಾಪಿಸಿದ್ದವು. ಐಪಿಎಲ್ ಟೂರ್ನಿಯನ್ನು ಇಂಗ್ಲೆಂಡ್‌ನಲ್ಲಿಯೇ ನಡೆಸಲಿ ಎಂದು ಎಂಸಿಸಿ, ಸರ್ರೆ, ವಾರ್ವಿಕ್‌ಷೈರ್ ಮತ್ತು ಲಂಕಾಷೈರ್ ಕೌಂಟಿಗಳು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್‌ಗೆ ಪತ್ರದ ಮೂಲಕ ತಿಳಿಸಿದ್ದವು. ಇಂಗ್ಲೆಂಡ್ ಕೌಂಟಿಗಳ ಈ ಪ್ರಸ್ತಾಪದ ಸುದ್ದಿಯನ್ನು ಕೇಳಿ ಕ್ರೀಡಾಭಿಮಾನಿಗಳಲ್ಲಿ ಐಪಿಎಲ್ ಟೂರ್ನಿ ಮುಂದುವರಿಯುತ್ತದೆಂಬ ಸಂತಸ ಮೂಡಿತ್ತು. ಆದರೆ ಕೇವಲ ಒಂದೇ ದಿನದಲ್ಲಿ ಆ ಖುಷಿಗೆ ಹ್ಯಾಂಪ್‌ಶೈರ್ ಕೌಂಟಿ ತಣ್ಣೀರನ್ನು ಎರಚಿದೆ.

 

 

‘ಇಂಗ್ಲೆಂಡ್‌ನಲ್ಲಿ ಐಪಿಎಲ್ ಟೂರ್ನಿಯ ಆತಿಥ್ಯ ವಹಿಸಲು ವಿವಿಧ ಕೌಂಟಿಗಳು ಹೇಗೆ ಪ್ರಸ್ತಾಪಿಸಿದವೋ ಅರ್ಥವಾಗುತ್ತಿಲ್ಲ, ಇಲ್ಲಿ ಐಪಿಎಲ್ ನಡೆಸುವ ಪ್ರಸ್ತಾಪ ನಡೆದಿದೆ ಎಂಬ ಸುದ್ದಿ ನನ್ನ ಕಿವಿಗೆ ಬಿತ್ತು, ಆದರೆ ಇದು ಹೇಗೆ ಸಾಧ್ಯವಾಗುತ್ತದೆ ಎಂಬುದು ನನಗಂತೂ ತಿಳಿದಿಲ್ಲ ಯಾಕೆಂದರೆ ಒಪ್ಪಂದವೊಂದರ ಪ್ರಕಾರ ಐಪಿಎಲ್ ಟೂರ್ನಿಯ ಆತಿಥ್ಯವನ್ನು ಇಂಗ್ಲೆಂಡ್‌ನಲ್ಲಿ ವಹಿಸುವುದು ಅಕ್ರಮ’ ಎಂದು ಹ್ಯಾಂಪ್‌ಶೈರ್ ಕೌಂಟಿ ಬಾಸ್ ತಿಳಿಸಿದರು. ಈ ಮೂಲಕ ಇಂಗ್ಲೆಂಡ್‌ನಲ್ಲಿ ಐಪಿಎಲ್ ಟೂರ್ನಿ ಮುಂದುವರಿಯುತ್ತದೆ ಎಂದು ಖುಷಿಪಟ್ಟಿದ್ದ ಕ್ರೀಡಾಭಿಮಾನಿಗಳಿಗೆ ಭಾರೀ ನಿರಾಸೆಯುಂಟಾಗಿದೆ.

 

Share post:

Subscribe

spot_imgspot_img

Popular

More like this
Related

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...