ಪ್ರಸ್ತುತ ಐಪಿಎಲ್ ಟೂರ್ನಿಯ ವೇಳೆ ಸಾಮಾಜಿಕ ಜಾಲತಾಣದಲ್ಲಿ ಆಟಗಾರರಷ್ಟೇ ಚರ್ಚೆಗೀಡಾಗಿದ್ದು ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲೀಕ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯ ಮಾರನ್. ಪ್ರಸ್ತುತ ಐಪಿಎಲ್ ಟೂರ್ನಿಯ ಪಂದ್ಯವೊಂದರಲ್ಲಿ ಮನೀಶ್ ಪಾಂಡೆ ಔಟ್ ಆದ ಬಳಿಕ ಸಪ್ಪೆ ಮುಖ ಹೊತ್ತು ಬೇಸರಕ್ಕೊಳಗಾದ ಕಾವ್ಯ ಮಾರನ್ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು.
ಹೀಗೆ ಸನ್ ರೈಸರ್ಸ್ ಹೈದರಾಬಾದ್ ತಂಡ ಪ್ರತಿ ಬಾರಿ ಸೋತಾಗಲೂ ಕಾವ್ಯ ಮಾರನ್ ಬೇಸರಕ್ಕೊಳಗಾಗುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ರೂಪದಲ್ಲಿ ಹರಿದಾಡುತ್ತಿದ್ದವು. ಇದೀಗ ಪ್ರಸ್ತುತ ಐಪಿಎಲ್ ಟೂರ್ನಿಯನ್ನು ಕೊರೊನಾವೈರಸ್ ಕಾರಣದಿಂದ ರದ್ದು ಮಾಡಲಾಗಿದೆ. ಐಪಿಎಲ್ ರದ್ದು ಮಾಡಲಾಗಿರುವ ವೇಳೆಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿದ್ದು, ಟೂರ್ನಿಯಲ್ಲಿ 7 ಪಂದ್ಯಗಳನ್ನಾಡಿರುವ ಸನ್ ರೈಸರ್ಸ್ ಹೈದರಾಬಾದ್ 6 ಪಂದ್ಯಗಳಲ್ಲಿ ಸೋತು ಕೇವಲ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಜಯಗಳಿಸಿದೆ.
ಹೀಗೆ ಐಪಿಎಲ್ ರದ್ದಿನ ವೇಳೆ ಅಂಕಪಟ್ಟಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಕೊನೆಯ ಸ್ಥಾನದಲ್ಲಿರುವ ವಿಷಯವನ್ನಿಟ್ಟುಕೊಂಡು ಮತ್ತೆ ಕಾವ್ಯ ಮಾರನ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಐಪಿಎಲ್ ರದ್ದಾಗಿರುವ ವಿಷಯ ಕ್ರೀಡಾಭಿಮಾನಿಗಳಿಗೆ ಬೇಸರವನ್ನುಂಟುಮಾಡಿದ್ದರೆ ಕಾವ್ಯ ಮಾರನ್ ಅವರಿಗೆ ಮಾತ್ರ ಖುಷಿ ನೀಡಿರುತ್ತದೆ ಎಂದು ಟ್ರೋಲ್ ಮಾಡಲಾಗಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡ ಹೇಗಿದ್ದರೂ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡು ಬಹುತೇಕ ಟೂರ್ನಿಯಿಂದ ಹೊರಬಿದ್ದಿತ್ತು, ಹೀಗಾಗಿ ಇಂತಹ ಸಮಯದಲ್ಲಿ ಟೂರ್ನಿ ರದ್ದಾಗಿರುವುದು ಹೈದರಾಬಾದ್ ತಂಡದ ಕಾವ್ಯ ಮಾರನ್ ಅವರಿಗೆ ಖಚಿತವಾಗಿ ಖುಷಿ ನೀಡಿರುತ್ತದೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.