ಇದು ಐಪಿಎಲ್ ಹರಾಜು ಪ್ರಕ್ರಿಯೆ ನಡೆದಿದೆ. ಈ ಬಾರಿ ಸಚಿನ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಹೆಸರು ಐಪಿಎಲ್ ಹರಾಜಿಗೆ ಬರಲಿದೆ ಎಂದ ಕೂಡಲೇ ಕುತೂಹಲ ಹೆಚ್ಚಿತ್ತು. ಸಚಿನ್ ಅವರ ಪುತ್ರನಿಗೆ ಎಷ್ಟು ಮೊತ್ತ ಕೊಟ್ಟು ಯಾವ ತಂಡ ಖರೀದಿಸಲಿದೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು.
ಆದರೆ ನಡೆದದ್ದೇ ಬೇರೆ ಯಾಕೆಂದರೆ ಅರ್ಜುನ್ ತೆಂಡೂಲ್ಕರ್ ಹೆಸರು ಬಂದಾಗ ಯಾವೊಂದು ತಂಡವೂ ಸಹ ಅವರನ್ನು ಖರೀದಿಸಲು ಮುಂದಾಗಲಿಲ್ಲ. ಮುಂಬೈ ಇಂಡಿಯನ್ಸ್ ತಂಡ ಮಾತ್ರ ಇಪ್ಪತ್ತು ಲಕ್ಷ ರೂಪಾಯಿಗಳನ್ನು ಘೋಷಿಸಿ ಅರ್ಜುನ್ ತೆಂಡೂಲ್ಕರ್ ಅವರನ್ನು ಖರೀದಿಸಿತು.
ಅರ್ಜುನ್ ತೆಂಡೂಲ್ಕರ್ ಮೂಲ ಬೆಲೆ ಇಪ್ಪತ್ತು ಲಕ್ಷ ರೂಪಾಯಿಗಳಾಗಿತ್ತು ಆದರೆ ಯಾವೊಂದು ತಂಡವೂ ಸಹ ಇದಕ್ಕಿಂತ ಹೆಚ್ಚನ್ನು ಹೋಗಲಿಲ್ಲ ಕೊನೆಗೆ ಮುಂಬೈ ಇಂಡಿಯನ್ಸ್ ತಂಡವು ಇಪ್ಪತ್ತು ಲಕ್ಷ ಕೊಟ್ಟು ಅರ್ಜುನ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತು.