ಈ ಬಾರಿಯ ಐಪಿಎಲ್ ನ ಹರಾಜು ಪ್ರಕ್ರಿಯೆ ಇಂದು ನಡೆಯಿತು. ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಆಟಗಾರರ ಮೇಲೆ ದುಡ್ಡಿನ ಹೊಳೆಯನ್ನೇ ಪ್ರಾಂಚೈಸಿಗಳು ಹರಿಸಿದವು. ಹೆಚ್ಚು ಮೊತ್ತಕ್ಕೆ ಸೇಲ್ ಆದ ಆಟಗಾರರ ಮೇಲೆ ಟ್ರೋಲ್ ಮತ್ತು ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಆಗುತ್ತಿವೆ.
ಹಾಗೆಯೇ ಇನ್ನೊಬ್ಬ ಆಟಗಾರ ತನ್ನನ್ನ ಐಪಿಎಲ್ ನಲ್ಲಿ ಖರೀದಿ ಮಾಡದೇ ಇದ್ದಿದ್ದಕ್ಕೆ ಟ್ವಿಟ್ಟರ್ ಮೂಲಕ ತನ್ನ ನೋವನ್ನು ಹಂಚಿಕೊಂಡಿದ್ದಾರೆ. ಐಪಿಎಲ್ ಆಕ್ಷನ್ ನಲ್ಲಿ ಆಟಗಾರ ಹನುಮವಿಹಾರಿ ಅವರು ಆಗಿ ಉಳಿದರು. ಇನ್ನೂ ಬಿಡ್ಡಿಂಗ್ ಮುಗಿಯುತ್ತಿದ್ದಂತೆ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಲಾಲ್ ಎಂದು ನಗುವ ಇಮೋಜಿಯನ್ನು ಹಾಕಿಕೊಳ್ಳುವ ಮೂಲಕ ಬಿಡ್ಡಿಂಗ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಹನುಮವಿಹಾರಿ ಅವರು ವ್ಯಕ್ತಪಡಿಸಿದರು.
ತಾವು ಯಾವುದೇ ಫ್ರಾಂಚೈಸಿಗಳಿಗೆ ಮಾರಾಟವಾಗದೆ ಉಳಿದ ವಿಷಯಕ್ಕೆ ಈ ರೀತಿ ನಗುವ ಟ್ವೀಟ್ ಅನ್ನು ಹನುಮ ವಿಹಾರಿ ಯವರು ಮಾಡಿದ್ದರು. ಆದರೆ ಈ ಟ್ವೀಟ್ ಹಿಂದೆ ದೊಡ್ಡ ಮಟ್ಟದ ದುಃಖ ಅಡಗಿರುವುದಂತೂ ನಿಜ. ಉತ್ತಮ ಪ್ರತಿಭೆ ಇದ್ದರೂ ಸಹ ಯಾವುದೇ ಫ್ರಾಂಚೈಸಿ ಸೆಲೆಕ್ಟ್ ಮಾಡದೆ ಇರುವ ಕಾರಣ ಹನುಮ ವಿಹಾರಿ ಯವರು ನೋವಿನಿಂದ ಈ ಟ್ವೀಟ್ ಮಾಡಿದ್ದಾರೆ ಎಂದು ಎಂಥವರಿಗೂ ಅರ್ಥವಾಗುತ್ತದೆ..