ಐಪಿಎಲ್ ಹೆಸರಿನಲ್ಲಿ ಪಾಕ್ ಕ್ರಿಕೆಟಿಗನ ಬ್ಲ್ಯಾಕ್ ಮೇಲ್

Date:

ಕಳೆದ ವರ್ಷ ಡಿಸೆಂಬರ್ ವೇಳೆಯಲ್ಲಿ ಪಾಕಿಸ್ತಾನದ ವೇಗಿ ಮೊಹಮ್ಮದ್ ಅಮೀರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವುದರ ಮೂಲಕ ಎಲ್ಲರಲ್ಲಿಯೂ ಆಶ್ಚರ್ಯ ಮೂಡಿಸಿದ್ದರು. ಮೊಹಮ್ಮದ್ ಆಮಿರ್ ನಿವೃತ್ತಿಯನ್ನು ಘೋಷಿಸಿದ ಸಂದರ್ಭದಲ್ಲಿ ಆತನಿಗೆ ಕೇವಲ 28ರ ಹರೆಯ. ಪಾಕಿಸ್ತಾನದ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾಗಿದ್ದ ಮೊಹಮ್ಮದ್ ಆಮಿರ್ ಇದ್ದಕ್ಕಿದ್ದಂತೆ ಈ ರೀತಿಯ ನಿರ್ಧಾರವನ್ನು ಯಾಕೆ ಕೈಗೊಂಡರು ಎಂಬುದು ಎಲ್ಲರಲ್ಲಿಯೂ ಪ್ರಶ್ನೆಯಾಗಿ ಉಳಿದುಕೊಂಡಿತ್ತು.

 

ಇದೀಗ ಇತ್ತೀಚಿನ ದಿನಗಳಲ್ಲಿ ತನ್ನ ನಿವೃತ್ತಿಯ ಕುರಿತು ಮೊಹಮ್ಮದ್ ಆಮೀರ್ ಮನಬಿಚ್ಚಿ ಮಾತನಾಡಿದ್ದಾರೆ. ತಂಡದಲ್ಲಿನ ಒತ್ತಡದಿಂದ ನಿವೃತ್ತಿಯನ್ನು ತೆಗೆದುಕೊಂಡೆ ಎಂದು ಮೊಹಮ್ಮದ್ ಆಮಿರ್ ಹೇಳಿದ್ದಾರೆ ಮತ್ತು ನಿವೃತ್ತಿಯ ನಂತರ ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಮೊಹಮ್ಮದ್ ಆಮೀರ್ ಬ್ರಿಟಿಷ್ ಪೌರತ್ವದೊಂದಿಗೆ ಐಪಿಎಲ್ ಆಡುವ ಕುರಿತು ಸಹ ಚರ್ಚೆಯನ್ನು ನಡೆಸಿದ್ದರು.

 

ಇನ್ನು ಮೊಹಮ್ಮದ್ ಆಮೀರ್ ಅವರ ಈ ಹೇಳಿಕೆಗಳ ಕುರಿತು ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದನೀಶ್ ಕನೇರಿಯಾ ಪ್ರತಿಕ್ರಿಯೆಯನ್ನು ನೀಡಿದ್ದು ಮೊಹಮ್ಮದ್ ಅಮೀರ್ ಮತ್ತೆ ಪಾಕಿಸ್ತಾನ ತಂಡವನ್ನು ಸೇರಿಕೊಳ್ಳಲು ಈ ರೀತಿಯ ಹೇಳಿಕೆಗಳನ್ನು ನೀಡಿ ಬ್ಲಾಕ್‌ಮೇಲ್ ಮಾಡುತ್ತಿದ್ದಾನೆ ಎಂದಿದ್ದಾರೆ. ‘ಮೊಹಮ್ಮದ್ ಅಮೀರ್ ಪಾಕಿಸ್ತಾನ ತಂಡವನ್ನು ಸೇರಿಕೊಳ್ಳಲು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾನೆ, ಬ್ರಿಟಿಷ್ ಪೌರತ್ವ ಬಂದರೆ ಐಪಿಎಲ್ ಆಡುವ ಕುರಿತು ಚರ್ಚಿಸಿದ್ದನ್ನು ಗಮನಿಸಿದರೆ ಆತ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ್ನು ಹೆದರಿಸುತ್ತಿರುವುದು ತಿಳಿಯುತ್ತದೆ’ ಎಂದು ದನೀಶ್ ಕನೇರಿಯಾ ಮೊಹಮ್ಮದ್ ಆಮಿರ್ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ.

Share post:

Subscribe

spot_imgspot_img

Popular

More like this
Related

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...