ಐಸಿಯುನಲ್ಲಿದ್ದ ಸೋನು ನಿಗಮ್..!! ಅಷ್ಟಕ್ಕೂ ಸೋನು ನಿಗಮ್ ಗೆ ಆಗಿದ್ದಾದ್ರು ಏನು..?
ಖ್ಯಾತ ಗಾಯಕ ಸೋನು ನಿಗಮ್ ಮುಂಬೈನ ಖಾಸಗಿ ಆಸ್ಪತ್ರೆಯಾದ ನಾನಾವತಿಯಲ್ಲಿ ಅಡ್ಮಿಟ್ ಆಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.. ಜೊತೆಗೆ ತಾವು ಐಸಿಯುನಲ್ಲಿದ್ದ ಫೋಟೊವನ್ನ ಸಹ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ… ಅನಾರೋಗ್ಯಕ್ಕೆ ತುತ್ತಾದ ಸೋನು ನಿಗಮ್ ತಮ್ಮ ಅಭಿಮಾನಿಗಳಿಗು ಸಲಹೆ ನೀಡಿದ್ದಾರೆ..
ಸೋನು ನಿಗಮ್ ಗೆ ಆಗಿದ್ದೇನು..?
ಕೆಲ ದಿನಗಳ ಹಿಂದೆ ಸೀ ಫುಡ್ ಸೇವಿಸಿದ್ದ ಸೋನು ನಿಗಮ್ ಗೆ ತೀರ್ವ ಸ್ವರೂಪದಲ್ಲಿ ಅಲರ್ಜಿಯಾಗಿ ಬಿಟ್ಟಿದೆ.. ಇದರಿಂದ ಅವರ ಕಣ್ಣಿನ ಭಾಗ ಊದಿಕೊಂಡಿತ್ತು.. ಹೀಗಾಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದುಕೊಂಡ ಸೋನು ನಿಗಮ್ ಸದ್ಯ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿ ಮನೆಗೆ ವಾಪಸ್ಸಾಗಿದ್ದಾರೆ…
ಇನ್ನು ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಾವು ಐಸಿಯುನಲ್ಲಿದ್ದ ಫೋಟೊವನ್ನ ಹಾಗು ಗಾಯಗೊಂಡ ಫೋಟೊವನ್ನ ಅಪ್ ಲೋಡ್ ಮಾಡಿ ನಿಮ್ಮೆಲ್ಲರ ಪ್ರೀತಿ ಹಾರೈಕೆಯಿಂದ ನಾನು ಕ್ಷೇಮವಾಗಿದ್ದೇನೆ.. ಇನ್ನು ಮುಂದೆ ಅಲರ್ಜಿಯನ್ನ ಉಂಟು ಮಾಡಬಲ್ಲ ಯಾವುದೇ ಆಹಾರವನ್ನ ಸೇವಿಸೋದಿಲ್ಲ ಎಂದಿದ್ದಾರೆ.. ಜೊತೆಗೆ ಅಭಿಮಾನಿಗಳಿಗು ಇಂತಹ ಆಹಾರದಿಂದ ದೂರ ಇರುವಂತೆ ತಿಳಿಸಿದ್ದು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಮನವಿ ಮಾಡಿದ್ದಾರೆ..