ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೋದಿಯನ್ನು ಪ್ರೀತಿಸುತ್ತೇನೆ ಎಂದಿದ್ದಾರೆ. ಮೋದಿ ಐ ಲವ್ ಯು ಎಂದು ಬಿಟ್ಟಿದ್ದಾರೆ ರಾಹುಲ್ ಗಾಂಧಿ.
ಪುಣೆಯಲ್ಲಿ ವಿದ್ಯಾರ್ಥಿಗಳ ಜತೆ ರಾಹುಲ್ ಗಾಂಧಿ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ರಾಹುಲ್ ಎದುರೇ ಮೋದಿ ಮೋದಿ ಎಂದು ಘೋಷಣೆ ಕೂಗಿದರು. ಆದರೆ, ಅದಕ್ಕೆ ಕೋಪಗೊಳ್ಳದ ರಾಹುಲ್ ಗಾಂಧಿ ನಾನೂ ಮೋದಿಯನ್ನು ಪ್ರೀತಿಸುತ್ತೇನೆ ಎಂದರು.
ಪ್ರಾಮಾಣಿಕವಾಗಿ ನಾನು ಪ್ರಧಾನಿ ಮೋದಿಯನ್ನು ಪ್ರೀತಿಸುತ್ತೇನೆ. ಅವರ ವಿರುದ್ಧ ಯಾವುದೇ ರೀತಿಯ ದ್ವೇಷ ಭಾವ ನನಗಿಲ್ಲ . ಆದರೆ ಅವರಿಗೆ ನನ್ನ ಮೇಲೆ ಅಂತಹ ಪ್ರೀತಿಯ ಭಾವವಿಲ್ಲ, ಬದಲಾಗಿ ಕೋಪವಿದೆ ಎಂದು ಅಚ್ಚರಿಯ ನುಡಿಗಳನ್ನಾಡಿದರು.
ಬೆಳವಣಿಗೆಗೆ ವಿದ್ಯಾರ್ಥಿಗಳಾದಿಯಾಗಿ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ತನ್ನ ಸಹೋದರಿ ಪ್ರಿಯಾಂಕ ಮತ್ತು ನಾನು ಒಳ್ಳೆಯ ಸ್ನೇಹಿತರೂ ಎಂದೂ ರಾಹುಲ್ ಗಾಂಧಿ ಹೇಳಿದ್ದಾರೆ.