No menu items!
9.2 C
Munich
Friday, May 1, 2026

ಯುಪಿಎಸ್​​ಸಿಯಲ್ಲಿ ಫಸ್ಟ್​ ರ್ಯಾಂಕ್ ಬರಲು ಗರ್ಲ್​​ ಫ್ರೆಂಡ್​ ಕಾರಣ..!

Must read

ಯುಪಿಎಸ್​​ಸಿಯಲ್ಲಿ ಮೊದಲ ರ್ಯಾಂಕ್ ಬರಲು ತನ್ನ ಗರ್ಲ್​​ಫ್ರೆಂಡ್ ಕಾರಣ ಎಂದು ಈ ಬಾರಿ ಮೊದಲ ರ್ಯಾಂಕ್ ಪಡೆದಿರುವ ಕನಿಶಿಕ ಕಟಾರಿಯಾ ಹೇಳಿದ್ದಾರೆ.

ರಾಜಸ್ಥಾನದ ಕಟಾರಿಯಾ ಅವರು ತಾನು ಮೊದಲು ರ್ಯಾಂಕ್ ಬರುತ್ತೇನೆ ಎಂದುಕೊಂಡಿರಲಿಲ್ಲ. ಆದರೆ, ಪರಿಶ್ರಮಕ್ಕೆ ಬೆಲೆ ಸಿಕ್ಕಿದೆ. ತನ್ನ ಯಶಸ್ಸಿನ ಹಿಂದೆ ತನ್ನ ಗರ್ಲ್​​ಫ್ರೆಂಡ್​ ಇದ್ದಾರೆ ಎಂದಿದ್ದಾರೆ.
ಫಸ್ಟ್​ ರ್ಯಾಂಕ್ ಬಂದಿದ್ದೇನೆ ಎಂದು ತಿಳಿದು ಆಶ್ಚರ್ಯವಾಯಿತು. ನಿರೀಕ್ಷೆ ಇರಲಿಲ್ಲ. ಪ್ರೋತ್ಸಾಹಿಸಿದ ಪೋಷಕರಿಗೆ, ಓದಲು ಸಹಾಯ ಮಾಡಿದ ಸಹೋದರಿಗೆ ಹಾಗೂ ಬೆಂಬಲವಾಗಿ ನಿಂತ ಪ್ರೇಯಸಿಗೆ ಧನ್ಯವಾದ ಎಂದು ಹೇಳಿದ್ದಾರೆ. ಯುಪಿಎಸ್​​ಸಿ ಯಲ್ಲಿ ಮೊದಲ ರ್ಯಾಂಕ್ ಬಂದ ಯಾವ ಒಬ್ಬ ವಿದ್ಯಾರ್ಥಿಯೂ ಇಲ್ಲಿಯವರೆಗೆ ತನ್ನ ಸಾಧನೆಗೆ ಕಾರಣ ಗರ್ಲ್​ಫ್ರೆಂಡ್​ ಎಂದು ಹೇಳಿರಲಿಲ್ಲ. ತನ್ನ ಗರ್ಲ್​ಫ್ರೆಂಡೇ ತನ್ನ ಸಾಧನೆಗೆ ಕಾರಣ ಎಂದವರಲ್ಲಿ ಕನಿಶಿಕ ಮೊದಲನೇಯವರಾಗಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article