ಐ ಲವ್ ಯು ರಚ್ಚು ಅಂದ ಸ್ಟಾರ್ ನಟ

Date:

ಡಿಂಪಲ್‌ ಕ್ವೀನ್‌’ ರಚಿತಾ ರಾಮ್ ಸದ್ಯ ಸ್ಯಾಂಡಲ್‌ವುಡ್‌ನ ಬ್ಯುಸಿ ನಟಿ. ಅವರ ಕೈಯಲ್ಲಿ ಈಗ ಸಾಕಷ್ಟು ಸಿನಿಮಾಗಳಿವೆ. ಸದಾ ಶೂಟಿಂಗ್ ಅಂತ ಅವರು ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ಆದರೆ, ಈ ಮಧ್ಯೆ ಅವರು ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುವುದನ್ನು ಮಾತ್ರ ನಿಲ್ಲಿಸಿಲ್ಲ! ಇದೀಗ ನಟ ಅಜಯ್ ರಾವ್ ಜೊತೆಗೆ ಒಂದು ಚಿತ್ರವನ್ನು ಅವರು ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಆ ಸಿನಿಮಾಕ್ಕೆ ‘ಐ ಲವ್ ಯೂ ರಚ್ಚು’ ಅಂತಲೇ ಶೀರ್ಷಿಕೆ ಇಡಲಾಗಿದೆಯಂತೆ!

‘ಐ ಲವ್ ಯೂ ರಚ್ಚು’ ಎಂದಿದ್ದು ಯಾರು?
ನಟಿ ರಚಿತಾ ರಾಮ್‌ ಅವರನ್ನು ಎಲ್ಲರೂ ಪ್ರೀತಿಯಿಂದ ‘ರಚ್ಚು’ ಅಂತಲೇ ಕರೆಯುತ್ತಾರೆ. ಇದೀಗ ಅದನ್ನೇ ಶೀರ್ಷಿಕೆ ಮಾಡಿರುವುದು ವಿಶೇಷ. ಇನ್ನು, ನಟ ಅಜಯ್‌ ರಾವ್‌ ಜೊತೆ ರಚಿತಾಗೆ ಇದು ಮೊದಲ ಸಿನಿಮಾ. ಹೊಸ ಪ್ರತಿಭೆ ಶಶಾಂಕ್ ರಾಜ್ ಇದರ ನಿರ್ದೇಶಕರು. ಇನ್ನು, ಇದನ್ನು ನಿರ್ಮಾಣ ಮಾಡುತ್ತಿರುವುದು ಗುರು ದೇಶಪಾಂಡೆ. ಜಿ ಸಿನಿಮಾಸ್ ಪ್ರೊಡಕ್ಷನ್‌ ಮೂಲಕ ‘ಐ ಲವ್ ಯೂ ರಚ್ಚು’ ನಿರ್ಮಾಣ ಆಗಲಿದೆ. ಉಳಿದಂತೆ ತಾಂತ್ರಿಕ ಬಳಗದಲ್ಲಿ ಯಾರೆಲ್ಲ ಇದ್ದಾರೆ? ಕಲಾವಿದರು ಯಾರು ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ!

ಇದು ನಿರ್ದೇಶಕ ಶಶಾಂಕ್ ಬರೆದ ಕಥೆಯೇ?
ಕೆಲ ದಿನಗಳ ಹಿಂದಷ್ಟೇ ಒಂದು ನ್ಯೂಸ್ ಬಹಿರಂಗವಾಗಿತ್ತು. ಅದೇನೆಂದರೆ, ‘ಕೃಷ್ಣನ್ ಲವ್‌ ಸ್ಟೋರಿ’ ಖ್ಯಾತಿಯ ಶಶಾಂಕ್ ಒಂದು ಕಥೆ ಬರೆದಿದ್ದು, ಅದರಲ್ಲಿ ಅಜಯ್ ರಾವ್ ಹೀರೋ ಆಗಿರಲಿದ್ದಾರೆ. ಗುರು ದೇಶಪಾಂಡೆ ನಿರ್ಮಾಣ ಮಾಡಲಿದ್ದಾರೆ ಎನ್ನಲಾಗಿತ್ತು. ‘ಈ ಸಿನಿಮಾದ ಕಥೆಯೇ ವಿಶೇಷವಾಗಿದೆ. ಈ ಹೊತ್ತಿಗೆ ಹೇಳಿ ಮಾಡಿಸಿದ ಸ್ಟೋರಿ ಇದು. ಹಾಗಾಗಿ, ನನ್ನ ಮತ್ತು ಅಜಯ್ ರಾವ್ ಕಾಂಬಿನೇಷನ್‌ನ ‘ರೆನ್ ಬೋ’ ಚಿತ್ರವನ್ನು ಮುಂದಕ್ಕೆ ಹಾಕಿ, ಈ ಸಿನಿಮಾವನ್ನು ಶುರು ಮಾಡಿದ್ದೇವೆ. ಇದರ ಮತ್ತೊಂದು ವಿಶೇಷವೆಂದರೆ, ಶಶಾಂಕ್ ಅವರು ಕಥೆ ಬರೆದಿರುವುದು. ಅಜಯ್ ರಾವ್ ಮತ್ತು ಶಶಾಂಕ್ ಅವರದ್ದು ಯಶಸ್ವಿ ಜೋಡಿ. ‘ಕೃಷ್ಣ’ ಸರಣಿ ಇಲ್ಲಿಯೂ ಮುಂದುವರೆದಿದೆ. ಈ ಸಿನಿಮಾದ ಮೂಲಕ ಹೊಸ ನಿರ್ದೇಶಕರು ಸಿನಿಮಾರಂಗಕ್ಕೆ ಪರಿಚಯ ಆಗುತ್ತಿದ್ದಾರೆ’ ಎಂದಿದ್ದರು ಗುರು. ಈಗ ಕೇಳಿಬರುತ್ತಿರುವ ‘ಐ ಲವ್ ಯೂ ರಚ್ಚು’, ಅದೇ ಸಿನಿಮಾ ಇರಬಹುದಾ ಎಂಬ ಚರ್ಚೆ ಶುರುವಾಗಿದೆ.

ಪ್ರಸ್ತುತ ಅಜಯ್ ರಾವ್ ‘ಕೃಷ್ಣ ಟಾಕೀಸ್’, ‘ಶೋಕಿವಾಲಾ’ ಸಿನಿಮಾಗಳನ್ನು ಮುಗಿಸಿದ್ದಾರೆ. ಇನ್ನು ರಚಿತಾ ಸಾಲು ಸಾಲು ಸಿನಿಮಾಗಳನ್ನು ಕೈಯಲ್ಲಿಟ್ಟುಕೊಂಡಿದ್ದಾರೆ. ಅವರ ನಟನೆಯ ‘100’, ‘ಏಕ್‌ ಲವ್ ಯಾ’ ಸಿನಿಮಾಗಳು ತೆರೆಗೆ ಸಿದ್ಧವಾಗಿವೆ. ಅದರ ಜೊತೆಗೆ ಪ್ರಜ್ವಲ್ ದೇವರಾಜ್‌ ಜೊತೆ ‘ವೀರಂ’, ಡಾಲಿ ಧನಂಜಯ್ ಜೊತೆ ‘ಮಾನ್ಸೂನ್ ರಾಗ’, ‘ಲಿಲ್ಲಿ’, ‘ಏಪ್ರಿಲ್’, ‘ಪಂಕಜ ಕಸ್ತೂರಿ’, ತೆಲುಗಿನಲ್ಲಿ ‘ಸೂಪರ್ ಮಚ್ಚಿ’, ನಟ ಸತೀಶ್ ನೀನಾಸಂ ಜೊತೆಗೆ ‘ಮ್ಯಾಟ್ನಿ’ ಹಾಗೂ ‘ಡಾರ್ಲಿಂಗ್‌’ ಕೃಷ್ಣ ಜೊತೆಗೂ ಒಂದು ಸಿನಿಮಾವನ್ನು ಅವರು ಒಪ್ಪಿಕೊಂಡಿದ್ದಾರೆ.

 

 

Share post:

Subscribe

spot_imgspot_img

Popular

More like this
Related

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ಬಿಜೆಪಿಯವರಿಗೆ...

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...