ನವದೆಹಲಿ : ದೇಶದ ಅತಿ ದೊಡ್ಡ ಕಾರು ತಯಾರಕಾ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ ತನ್ನ ಜನಪ್ರಿಯ ಸಿಯಾಜ್, ಎರ್ಟಿಗಾ ಮತ್ತು ಎಕ್ಸ್ ಎಲ್ 6 ಶ್ರೇಣಿಯ ಕಾರುಗಳನ್ನು ವಾಪಸ್ ಪಡೆಯುತ್ತಿದೆ.
ಕಾರಿನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಮೋಟಾರ್ ಜನರೇಟರ್ ಘಟಕದಲ್ಲಿ ದೋಷಯುಕ್ತ ಭಾಗ ಸರಿಪಡಿಸಲು ಈ ಮಾದರಿಯ 63,493 ಕಾರುಗಳನ್ನು ಹಿಂದಕ್ಕೆ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಸಿಯಾಜ್, ಎರ್ಟಿಗಾ ಮತ್ತು ಎಕ್ಸ್‍ಎಲ್ 6 ಶ್ರೇಣಿಯ ಪೆಟ್ರೋಲ್ ಎಸ್‍ಎಚ್‍ವಿಎಸ್‍ನ 63,493 ವಾಹನಗಳನ್ನು ಪರಿಶೀಲಿಸಲಾಗುವುದು. ಗ್ರಾಹಕರ ಹಿತದೃಷ್ಠಿಯಿಂದ 2019ರ ಜನವರಿ ಹಾಗೂ ನವೆಂಬರ್ 21ರ ಅವಧಿಯ ನಡುವೆ ತಯಾರಿಸಲಾದ ಕಾರುಗಳನ್ನು ಪರಿಶೀಲನೆಗೆ ಒಳಪಡಿಸುತ್ತಿರುವುದಾಗಿ ತಿಳಿಸಿದ್ದು, ಮಾಲೀಕರು ವಿತರಕರನ್ನು ಸಂಪರ್ಕಿಸಲು ಹೇಳಿದೆ.