ಬೆಂಗಳೂರು: ಮಹಾರಾಷ್ಟ್ರದಲ್ಲಿ 30 ರಿಂದ 40 ಶಾಸಕರು ನಮ್ಮ ಕಡೆ ಬರ್ತಾರೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ 30 ರಿಂದ 40 ಶಾಸಕರು ನಮ್ಮ ಕಡೆ ಬರ್ತಾರೆ. ಶರತ್ ಪವಾರ್ ಇದ್ದಾರೆ, ಉದ್ಧವ್ ಠಾಕ್ರೆ ಇದ್ದಾರೆ. ಅವರನ್ನು ಇಲ್ಲಿಗೆ ನಾವ್ಯಾಕೆ ಕರೆತರೋಣ. ಅಲ್ಲಿ ಅಜಿತ್ ಪವಾರ್ ಅವರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ.
ಹಾಗಾಗಿ ಅವರೂ ಬೇಜಾರುಗೊಂಡಿದ್ದಾರೆ. ವಾಪಸ್ ಶಿವಸೇನೆ ಶಾಸಕರು ಉದ್ಧವ್ ಬಳಿ ಹೋಗ್ತಾರೆ. ಮಹಾ ಘಟಬಂಧನ್ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದರು. ಇನ್ನೂ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹಿಂದೆ ಹೋದವರು ವಾಪಸ್ ಆಗ್ತಾರೆ. ಎಲ್ಲರೂ ಉದ್ಧವ್ ಠಾಕ್ರೆ ಬಳಿ ಹೋಗ್ತಾರೆ. ಎನ್ ಸಿಪಿ ಕಡೆಯೂ ಹೋಗ್ತಾರೆ. ಚುನಾವಣೆ ಮುಗಿದ ಒಂದು ತಿಂಗಳ ನಂತರ ಸರ್ಕಾರ ಬೀಳಲಿದೆ ಎಂದು ಭವಿಷ್ಯ ನುಡಿದರು.
ಒಂದು ತಿಂಗಳ ನಂತರ ಮಹಾರಾಷ್ಟ್ರ ಸರ್ಕಾರ ಬೀಳಲಿದೆ: ಎಂಬಿ ಪಾಟೀಲ್
Date:






