ಒಂದು ಬಿರಿಯಾನಿ ತಿನ್ನಲು ಹೋಗಿ 2 ಲಕ್ಷ ಕಳೆದುಕೊಂಡ ಆಟೋಚಾಲಕ!

Date:

ಆರ್ಥಿಕ ಮುಗ್ಗಟ್ಟಿನಲ್ಲಿದ್ದ ಈ ಆಟೋಚಾಲಕನಿಗೆ ಬಿರಿಯಾನಿ ತಿನ್ನುವ ಆಸೆಯೇ ದುಃಖಕ್ಕೆ ಮೂಲವಾಗಿ ಪರಿಣಮಿಸಿದೆ. ಬಿರಿಯಾನಿ ತಿನ್ನಲೆಂದು ಹೋದ ಈ ಆಟೋಚಾಲಕ 2 ಲಕ್ಷ ರೂಪಾಯಿ ಕಳೆದುಕೊಳ್ಳುವಂತಾಗಿದೆ. ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಇಂಥದ್ದೊಂದು ಘಟನೆ ಸಂಭವಿಸಿದೆ.

 

ಹನುಮಂತರಾಯ ಎಂಬ ಎಂಬ ಆಟೋಚಾಲಕ ಹಣ ಕಳೆದುಕೊಂಡವ. ಸಾಲದ ಹೊರೆ ಎದುರಿಸುತ್ತಿದ್ದ ಈತ ಆ ಭಾರ ಇಳಿಸಿಕೊಳ್ಳಲು ಚಿನ್ನವನ್ನು ಅಡವಿಟ್ಟಿದ್ದ. ಬ್ಯಾಂಕ್​ವೊಂದರಲ್ಲಿ ಚಿನ್ನ ಅಡವಿಟ್ಟು 2 ಲಕ್ಷ ರೂಪಾಯಿ ಸಾಲ ಪಡೆದಿದ್ದ ಈ ಚಾಲಕ, ಆ ಹಣ ಹಿಡಿದುಕೊಂಡು ಬರುತ್ತಿದ್ದಾಗ ಬಿರಿಯಾನಿ ತಿನ್ನಲು ಹೋಗಿದ್ದ.

ಹಣ ಬೈಕ್​ನಲ್ಲಿನ ಸೈಡ್​ ಲಾಕರ್​ನಲ್ಲಿಟ್ಟುಕೊಂಡು ಬಾಮೈದನ ಜೊತೆಗೆ ಮರಳುತ್ತಿದ್ದ ಹನುಮಂತರಾಯ, ಮಾರ್ಗಮಧ್ಯೆ ಬಿರಿಯಾನಿ ತಿನ್ನಲು ದ್ವಿಚಕ್ರವಾಹನ ನಿಲ್ಲಿಸಿದ್ದಾನೆ. ಈತನ ಬೈಕ್​ ಬಳಿ ಸುಳಿದಾಡುತ್ತಿದ್ದ ಕಳ್ಳರು ಆ ಹಣವನ್ನು ಎಗರಿಸಿ ಇನ್ನೊಂದು ಬೈಕ್​ನಲ್ಲಿ ಪರಾರಿ ಆಗಿರುವುದು ಸಿಸಿಟಿವಿ ಕ್ಯಾಮರಾವೊಂದರಲ್ಲಿ ಸೆರೆಯಾಗಿದೆ. ಇತ್ತೀಚೆಗೆ ನಡೆದ ಈ ಕಳ್ಳತನ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಗಳ ಪತ್ತೆಗಾಗಿ ಬ್ಯಾಡರಹಳ್ಳಿ ಠಾಣೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಕಾಂಗ್ರೆಸ್​​​​​ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ

ಕಾಂಗ್ರೆಸ್​​​​​ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದ...

ನಮ್ಮ ಹೋರಾಟಕ್ಕೆ ಗಾಬರಿಗೊಂಡು ದೆಹಲಿಗೆ ವಾಹನ ಪ್ರವೇಶ ತಡೆಯುತ್ತಿರುವ ಬಿಜೆಪಿ ಸರ್ಕಾರ: ಡಿ.ಕೆ. ಶಿವಕುಮಾರ್

ನಮ್ಮ ಹೋರಾಟಕ್ಕೆ ಗಾಬರಿಗೊಂಡು ದೆಹಲಿಗೆ ವಾಹನ ಪ್ರವೇಶ ತಡೆಯುತ್ತಿರುವ ಬಿಜೆಪಿ ಸರ್ಕಾರ:...

ಹೊರಟ್ಟಿಯವರ ಸೇವೆ ಸದಾಕಾಲ ಮುಂದುವರೆಯಲಿ: ಬಸವರಾಜ ಬೊಮ್ಮಾಯಿ

ಹೊರಟ್ಟಿಯವರ ಸೇವೆ ಸದಾಕಾಲ ಮುಂದುವರೆಯಲಿ: ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ: ಹ್ಯಾಂಡಸಮ್ ಟೀಚರ್ ಅಂಡ್...

ರಾಜ್ಯದಲ್ಲಿ ಮೈಕೊರೆಯುವ ಚಳಿ ಹೆಚ್ಚಳ: 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ರಾಜ್ಯದಲ್ಲಿ ಮೈಕೊರೆಯುವ ಚಳಿ ಹೆಚ್ಚಳ: 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಬೆಂಗಳೂರು: ಬೆಂಗಳೂರು...