ಇತ್ತೀಚೆಗೆ ವಿಶ್ವದಾದ್ಯಂತ ಸೆಲ್ಫಿ ಕ್ಲಿಕ್ಕಿಸಿ ಕೊಳ್ಳುವುದರ ಕ್ರೇಜ್ ಮಿತಿ ಮೀರುತ್ತಿದೆ. ಜನರು ಅಪಾಯ ಇರುವ ಸ್ಥಳಗಳಲ್ಲಿಯೂ ಸಹ ಸೆಲ್ಫಿ ತೆಗೆದುಕೊಳ್ಳಲು ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿವೆ. ಸೆಲ್ಫಿ ಕ್ರೇಜ ನಿಂದಾಗಿ ಕೇವಲ ಒಂದು ಫೋಟೋ ಗೋಸ್ಕರ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇನ್ನು ಇಂತಹದ್ದೇ ಘಟನೆ ಇದೀಗ ತಮಿಳುನಾಡಿನ ಗಡಿ ಭಾಗದಲ್ಲಿ ನಡೆದಿದೆ.
ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ನಾಲ್ಕು ಜನ ಸಾವನ್ನಪ್ಪಿರುವ ಘಟನೆ ಪಂಬರ್ ಅಣೆಕಟ್ಟೆಯಲ್ಲಿ ನಡೆದಿದೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ನಿವಾಸಿಗಳಾದ ಸಂತೋಷ್ , ಕನೋಧಾ , ಸ್ನೇಹ & ನಿವೀತಾ ಸೆಲ್ಫೀ ಹುಚ್ಚಿಗೆ ಬಲಿಯಾದ ಒಂದೇ ಕುಟುಂಬದ ನಾಲ್ವರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ನಿವಿತಾ ದಸರಾ ಹಬ್ಬದ ಹಿನ್ನೆಲೆ ತನ್ನ ಊರಿಗೆ ತೆರಳಿದ್ದು ಈ ವೇಳೆ ಕುಟುಂಬಸ್ಥರ ಜೊತೆ ಪಂಬರ್ ಅಣೆಕಟ್ಟೆ ವೀಕ್ಷಿಸಲು ತೆರಳಿದ್ದಾಳೆ ಈ ವೇಳೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಆಯ ತಪ್ಪಿ ಹಿನ್ನೀರಿಗೆ ಬಿದ್ದು ನಾಲ್ವರೂ ಸಹ ದುರ್ಮರಣ ಹೊಂದಿದ್ದಾರೆ.