ಐಸಿಸಿ ಏಕದಿನ ವಿಶ್ವಕಪ್ ಗೆ ದಿನಗಣನೆ ಶುರುವಾಗಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ಮೇ.30 ರಿಂದ ವಿಶ್ವಕಪ್ ಶುರುವಾಗಲಿದೆ.
ಈ ಸಮಯದಲ್ಲಿ ವಿಶ್ವಕಪ್ ಇತಿಹಾಸದ ಪುಟಗಳನ್ನು ಒಮ್ಮೆ ತಿರುವಿ ಹಾಕಬೇಕು. ಇದು ರೂಢಿ.
ಹೀಗೆ ವಿಶ್ವಕಪ್ ಇತಿಹಾಸವನ್ನು ತಿರುವಿ ಹಾಕಿದಾಗ ಹಲವಾರು ಕುತೂಹಲಕಾರಿ ಘಟನೆಗಳು, ಸನ್ನಿವೇಶಗಳು ನೆನಪಾಗುತ್ತವೆ. ಅಂತಹವುಗಳಲ್ಲಿ ಒಬ್ಬ ಕ್ರಿಕೆಟರ್ ಒಂದೇ ಒಂದು ಪಂದ್ಯ ಆಡದೆ ವಿಶ್ವಕಪ್ ಗೆದ್ದು ಸಂಭ್ರಮಿಸಿದ್ದೂ ಇದೆ.
ಆ ಕ್ರಿಕೆಟರ್ ಹೆಸರು ಸುನೀಲ್ ವಲ್ಸನ್ ಎಂದು. ಅವರು 1983 ರ ವಿಶ್ವ ವಿಜೇತ ಟೀಮ್ ಇಂಡಿಯಾದ ಸದಸ್ಯರಾಗಿದ್ದರು. ಆದರೆ, ಅವರು ಒಂದೇ ಒಂದು ಪಂದ್ಯ ಕೂಡ ಆಡಿಲ್ಲ ಎನ್ನುವುದು ವಿಶೇಷ. ಟೂರ್ನಿಯಲ್ಲಿ ಭಾರತ ಒಂದೇ ಒಂದು ಪಂದ್ಯ ಕೂಡ ಆಡಿಲ್ಲ. ಆದರೆ, ಆ ಎಂಟೂ ಪಂದ್ಯಗಳಲ್ಲೂ ಸುನೀಲ್ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಇನ್ನೂ ವಿಶೇಷ ಅಂದರೆ ವರ್ಲ್ಡ್ ಕಪ್ ಗೆದ್ದ ಟೀಮ್ ನ ಭಾಗವಾಗಿದ್ದರೂ ಸುನೀಲ್ ಒಂದೇ ಒಂದು ಅಂತರಾಷ್ಟ್ರೀಯ ಪಂದ್ಯ ಆಡದ ಏಕೈಕ ಆಟಗಾರ ಕೂಡ ಹೌದು. 1977 ರಿಂದ 1998ರ ವರೆಗೆ 75 ಪ್ರಥಮ ದರ್ಜೆ ಪಂದ್ಯಗಳನ್ನು ಸುನೀಲ್ ಆಡಿದ್ದರು. ಒಟ್ಟು 212 ವಿಕೆಟ್ ಗೆದ್ದಿದ್ದರು. ಆದರೆ ಒಂದೇ ಒಂದು ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ.