ಒಂದೇ ದಿನ596 ಸಾವು/ ಸಕ್ರಿಯ ಪ್ರಕರಣದಲ್ಲಿ ಕರ್ನಾಟಕ ನಂ 1

Date:

ಸೋಮವಾರ ರಾಜ್ಯದಲ್ಲಿ ಕೊರೊನಾ ಪರೀಕ್ಷೆಗಳ ಸಂಖ್ಯೆಯನ್ನೇ ಕಡಿತಗೊಳಿಸಲಾಗಿದ್ದು, ಹೊಸ ಸೋಂಕಿನ ಪ್ರಕರಣಗಳ ಸಂಖ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿವೆ.

ಕಳೆದ 24 ಗಂಟೆಯಲ್ಲಿ 39,305 ಹೊಸ ಕೋವಿಡ್‌-19 ಪ್ರಕರಣಗಳು ವರದಿಯಾಗಿವೆ. ಪಾಸಿಟಿವಿಟಿ ದರ ಶೇ. 31.66ರಷ್ಟಿದೆ.

ಕರ್ನಾಟಕದಲ್ಲಿ ಸೋಮವಾರ ಒಂದೇ ದಿನ ಬರೋಬ್ಬರಿ 596 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ.ಇದು ರಾಜ್ಯದಲ್ಲಿ ದಿನವೊಂದರಲ್ಲಿ ಕೋವಿಡ್‌-19ನಿಂದ ಸಂಭವಿಸಿದ ಗರಿಷ್ಠ ಸಾವಿನ ಪ್ರಮಾಣವಾಗಿದೆ..

ಸಕ್ರಿಯ ಪ್ರಕರಣಗಳಲ್ಲಿ ಕರ್ನಾಟಕ (5,71,006) ಈಗ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ 5,56,896 ಆಕ್ಟೀವ್‌ ಕೇಸ್‌ಗಳಿವೆ.

ಇದರೊಂದಿಗೆ ರಾಜ್ಯದಲ್ಲಿ ಇಲ್ಲಿಯವರೆಗೆ ಕೋವಿಡ್‌-19ನಿಂದ ಅಸುನೀಗಿದವರ ಸಂಖ್ಯೆ 19,372ಕ್ಕೆ ತಲುಪಿದ್ದು, 20 ಸಾವಿರದತ್ತ ಮುನ್ನುಗ್ಗುತ್ತಿದೆ. ಬೆಂಗಳೂರು ನಗರವೊಂದರಲ್ಲೇ ಸೋಮವಾರ 374 ಸೋಂಕಿತರು ಸಾವನ್ನಪ್ಪಿದ್ದಾರೆ. ಬಳ್ಳಾರಿಯಲ್ಲಿ 26, ಹಾಸನದಲ್ಲಿ 22, ಬಾಗಲಕೋಟೆಯಲ್ಲಿ 15, ತುಮಕೂರಿನಲ್ಲಿ 15, ಹಾವೇರಿಯಲ್ಲಿ 12, ಮಂಡ್ಯದಲ್ಲಿ 12, ಶಿವಮೊಗ್ಗದಲ್ಲಿ 11, ಉತ್ತರ ಕನ್ನಡದಲ್ಲಿ 11 ಜನರು ಒಂದೇ ದಿನ ಕೊರೊನಾದಿಂದ ಅಸುನೀಗಿದ್ದಾರೆ.

ಉಳಿದೆಲ್ಲಾ ಜಿಲ್ಲೆಗಳಲ್ಲಿ 10ಕ್ಕಿಂತ ಕಡಿಮೆ ಸೋಂಕಿತರು ಸಾವನ್ನಪ್ಪಿದ್ದಾರೆ. ಆದರೆ ಕೊರೊನಾದಿಂದ ಸಾವೇ ಸಂಭವಿಸದ ಜಿಲ್ಲೆ ಕೊಪ್ಪಳ ಮಾತ್ರ. ಜಿಲ್ಲೆಗಳಲ್ಲಿ ಸೋಂಕು ವೇಗವಾಗಿ ಪಸರಿಸುತ್ತಿರುವುದು ಮತ್ತು ಇದರಿಂದ ಸಾವು ಸಂಭವಿಸುತ್ತಿರುವುದನ್ನು ಇದು ಹೇಳುತ್ತಿದೆ.

ಉಳಿದೆಲ್ಲಾ ಜಿಲ್ಲೆಗಳಲ್ಲಿ 10ಕ್ಕಿಂತ ಕಡಿಮೆ ಸೋಂಕಿತರು ಸಾವನ್ನಪ್ಪಿದ್ದಾರೆ. ಆದರೆ ಕೊರೊನಾದಿಂದ ಸಾವೇ ಸಂಭವಿಸದ ಜಿಲ್ಲೆ ಕೊಪ್ಪಳ ಮಾತ್ರ. ಜಿಲ್ಲೆಗಳಲ್ಲಿ ಸೋಂಕು ವೇಗವಾಗಿ ಪಸರಿಸುತ್ತಿರುವುದು ಮತ್ತು ಇದರಿಂದ ಸಾವು ಸಂಭವಿಸುತ್ತಿರುವುದನ್ನು ಇದು ಹೇಳುತ್ತಿದೆ.

ಸೋಮವಾರ ರಾಜ್ಯದಲ್ಲಿ ಹೊಸ ಸೋಂಕಿನ ಪ್ರಕರಣಗಳ ಸಂಖ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. 39,305 ಹೊಸ ಪ್ರಕರಣಗಳು ಕಳೆದ 24 ಗಂಟೆಯಲ್ಲಿ ವರದಿಯಾಗಿವೆ. ಆದರೆ ಇದೇನು ಶುಭ ಸುದ್ದಿಯಂತೂ ಅಲ್ಲ. ಕಾರಣ ಪರೀಕ್ಷೆಗಳ ಸಂಖ್ಯೆಯನ್ನೂ ಕಡಿಮೆ ಮಾಡಲಾಗಿದೆ.

ಕಳೆದ 24 ಗಂಟೆಯಲ್ಲಿ ಕರ್ನಾಟಕದಲ್ಲಿ 1,24,110 ಸ್ಯಾಂಪಲ್‌ಗಳನ್ನಷ್ಟೆ ಪರೀಕ್ಷೆಗೊಳಪಡಿಸಲಾಗಿದೆ. ಪರಿಣಾಮ ಕಡಿಮೆ ಸಂಖ್ಯೆಯ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿವೆ. ಸ್ಯಾಂಪಲ್‌ಗಳಿಗೆ ಹೋಲಿಸಿದರೆ ಪಾಸಿಟಿವಿ ದರ ಇನ್ನೂ ಶೇ. 30ಕ್ಕಿಂತ (31.66%) ಹೆಚ್ಚೇ ಇದೆ. ಹೀಗಾಗಿ ಸೋಂಕು ಕಡಿಮೆಯಾಗಿದೆ ಎನ್ನುವಂತಿಲ್ಲ. ಆದರೆ ಇನ್ನೂ ಆತಂಕದ ಸಂಗತಿಯೆಂದರೆ ಪಾಸಿಟಿವ್‌ ಪ್ರಕರಣಗಳಿಗೆ ಹೋಲಿಸಿದರೆ ಸಾವಿನ ಪ್ರಮಾಣ ಶೇ. 1.51ರಷ್ಟಿದೆ. ಇದು ಬಹುಶಃ ಈವರೆಗಿನ ಗರಿಷ್ಠ ಪ್ರಮಾಣವಾಗಿದೆ.

ಬೆಂಗಳೂರಿನಲ್ಲಿ 16,747 ಹೊಸ ಪ್ರಕರಣಗಳು ವರದಿಯಾಗಿವೆ. ತುಮಕೂರಿನಲ್ಲಿ 2,168, ಹಾಸನದಲ್ಲಿ 1800, ಮೈಸೂರಿನಲ್ಲಿ 1537, ದಕ್ಷಿಣ ಕನ್ನಡದಲ್ಲಿ 1175, ಮಂಡ್ಯದಲ್ಲಿ 1133, ಧಾರವಾಡದಲ್ಲಿ 1006 ಹೊಸ ಕೇಸ್‌ಗಳು ದೃಢಪಟ್ಟಿವೆ. ಉಳಿದ ಜಿಲ್ಲೆಗಳಲ್ಲಿ ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ಪತ್ತೆಯಾಗಿವೆ. ಪರೀಕ್ಷೆಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಿದ್ದರೂ, 500ಕ್ಕಿಂತ ಕಡಿಮೆ ಪ್ರಕರಣಗಳು ದೃಢಪಟ್ಟ ಜಿಲ್ಲೆಗಳು 8 ಮಾತ್ರ.

ಶುಭ ಸುದ್ದಿಯೆಂದರೆ ಕೊರೊನಾದಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಸೋಮವಾರ 32,188 ಸೋಂಕಿತರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ ಕೊರೊನಾದಿಂದ ಗುಣಮುಖರಾದವ ಸಂಖ್ಯೆ 13,83,285ಕ್ಕೆ ಹೆಚ್ಚಳವಾಗಿದೆ.

ಹೀಗಿದ್ದೂ ಕೊರೊನಾದಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೊಸ ಪ್ರಕರಣಗಳ ಸಂಖ್ಯೆಯನ್ನು ಮೀರಿಲ್ಲ. ಹೀಗಾಗಿ ಆಕ್ಟಿವ್‌ ಕೇಸ್‌ಗಳ ಸಂಖ್ಯೆ 5,71,006ಕ್ಕೆ ಏರಿಕೆಯಾಗಿದೆ. ಈಗಾಗಲೇ ಮಹಾರಾಷ್ಟ್ರ, ಕೇರಳದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆಯಾಗಲು ಆರಂಭವಾಗಿವೆ. ಆದರೆ ಕರ್ನಾಟಕದಲ್ಲಿ ಮಾತ್ರ ಇನ್ನೂ ಸಕ್ರಿಯ ಪ್ರಕರಣಗಳು ಏರುತ್ತಲೇ ಇವೆ. ಪರಿಣಾಮ ಸಕ್ರಿಯ ಪ್ರಕರಣಗಳಲ್ಲಿ ಕರ್ನಾಟಕ ಈಗ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ 5,56,896 ಆಕ್ಟೀವ್‌ ಕೇಸ್‌ಗಳಿವೆ.

ಇನ್ನು ಲಸಿಕೆ ಅಭಿಯಾನವೂ ಸ್ವಲ್ಪ ಮಟ್ಟಿಗೆ ಚುರುಕು ಪಡೆದುಕೊಂಡಿದೆ. ಸೋಮವಾರ 80,823 ಡೋಸ್‌ ಲಸಿಕೆ ನೀಡಲಾಗಿದೆ. ಇವರಲ್ಲಿ ಎರಡನೇ ಡೋಸ್‌ ಲಸಿಕೆ ಪಡೆದವರೇ ಹೆಚ್ಚು (65,353). 18 ವರ್ಷ ಮೇಲ್ಪಟ್ಟ 44 ವರ್ಷ ಒಳಗಿನ 6,737 ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಕರ್ನಾಟಕದಲ್ಲಿ ಒಟ್ಟು 1,06,08,,539 ಡೋಸ್‌ ಲಸಿಕೆ ನೀಡಲಾಗಿದೆ.

 

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...