ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಾಮಾಜಿಕ ಕಳಕಳಿ ಇರುವ ವ್ಯಕ್ತಿ. ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ಅಕ್ಷಯ್ ಗುರುತಿಸಿಕೊಂಡಿದ್ದಾರೆ. ಅಕ್ಷಯ್ ಅವರ ಮತ್ತೊಂದು ಮಹತ್ತರ ಕಾರ್ಯವೀಗ ಬೆಳಕಿಗೆ ಬಂದಿದೆ. ಅಕ್ಷಯ್ ಸಿನಿಮಾ ಬ್ಯುಸಿ ಶೆಡ್ಯೂಲ್ ನಡುವೆ ಯುವತಿಯರಿಗೆ ಆತ್ಮರಕ್ಷಣೆ ತರಬೇತಿ ನೀಡುತ್ತಿದ್ದಾರೆ. ಇದುವರೆಗೆ ಒಬ್ಬಿಬ್ಬರಲ್ಲ ಬರೋಬ್ಬರಿ 40 ಸಾವಿರ ಮಂದಿ ಹುಡುಗಿಯರಿಗೆ ಅಕ್ಷಯ್ ಕುಮಾರ್ ಸ್ವಯಂ ರಕ್ಷಣಾ ತರಬೇತಿ ನೀಡಿದ್ದಾರೆ.
ಅಚ್ಚರಿಯಾದ್ರೂ ಇದು ಸತ್ಯ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಮುಂಬೈನಲ್ಲಿ ನನ್ನ ಹಲವು ಶಾಲೆಗಳಿವೆ. ಆ ಎಲ್ಲಾ ಶಾಲೆಗಳಲ್ಲಿ ಮಾರ್ಷಲ್ ಆರ್ಟ್ ತರಬೇತಿ ನೀಡುತ್ತೇನೆ. ನಾನು ಹಾಗೂ ನನ್ನ ಶಾಲೆ ಕಡೆಯಿಂದ ಇದುವರೆಗೆ ಒಟ್ಟು 40 ಸಾವಿರ ಹುಡುಗಿಯರಿಗೆ ಉಚಿತವಾಗಿ ಸ್ವಯಂ ರಕ್ಷಣಾ ತರಬೇತಿ ನೀಡಿದ್ದೇವೆ. ಈ ಸ್ವಯಂ ರಕ್ಷಣಾ ತರಬೇತಿ ಪಡೆಯಲು ಕಂಪನಿಗಳ ಸಿ ಇ ಒಗಳು, ಗೃಹಿಣಿಯರು ಸೇರಿದಂತೆ ಅನೇಕರು ಬರುತ್ತಾರೆಂದು ತಿಳಿಸಿದ್ದಾರೆ.
ಅಕ್ಷಯ್ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಸ್ಟಾರ್ ನಟ – ನಟಿಯರು ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ ಮಾದರಿ ಆಗುವುದು ಗಮನಾರ್ಹ ಹಾಗೂ ಅವಶ್ಯಕ ಕೂಡ.