ಈ ಬಾರಿಯ ಐಪಿಎಲ್ ಟೂರ್ನಿ ಆರಂಭವಾದಾಗಿನಿಂದ ಸತತ 4 ಪಂದ್ಯಗಳನ್ನು ಗೆದ್ದು ಗೆಲುವಿನ ಉತ್ತುಂಗದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನ ಓಟಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬ್ರೇಕ್ ಹಾಕಿದೆ. ನಿನ್ನೆ ನಡೆದ ಪಂದ್ಯದಲ್ಲಿ 69 ರನ್‌ಗಳ ಜಯ ಸಾಧಿಸುವುದರ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಂಕಪಟ್ಟಿಯಲ್ಲಿ ಆರ್ ಸಿಬಿಯನ್ನು ಕೆಳತಳ್ಳಿ ಅಗ್ರಸ್ಥಾನಕ್ಕೇರಿದೆ.
ಇನ್ನು ಪಂದ್ಯದಲ್ಲಿ ಸೋತ ಬಳಿಕ ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಪಂದ್ಯವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಸಿಎಸ್ ಕೆ ಪರ ಅತ್ಯದ್ಭುತ ಪ್ರದರ್ಶನವನ್ನು ತೋರಿದ ಜಡೇಜಾ ಅವರನ್ನು ವಿರಾಟ್ ಕೊಹ್ಲಿ ಅವರು ಹೊಗಳಿದ್ದಾರೆ. ಜಡೇಜಾ ಅವರು ಏಕಾಂಗಿಯಾಗಿ ಇಡೀ ಆರ್ ಸಿಬಿಯನ್ನು ಸೋಲಿಸಿದ್ದಾರೆ, ಬ್ಯಾಟಿಂಗ್ ಮಾಡುವಾಗ ಅವರು ಆಡಿದ ಕೊನೆಯ ಓವರ್ ಅತ್ಯದ್ಭುತ , ಬೌಲಿಂಗ್ ನಲ್ಲಿಯೂ ಜಡೇಜಾ ಅತ್ಯುತ್ತಮ ಪ್ರದರ್ಶನ ತೋರಿದರು ಹಾಗೂ ಫೀಲ್ಡಿಂಗ್ ನಲ್ಲಿ ಕೂಡ ಜಡೇಜಾ ಮಿಂಚಿದರು. ಜಡೇಜಾ ಅವರ ಈ ಅತ್ಯದ್ಭುತ ಪ್ರಕಾಶನದಿಂದಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋತಿತು ಎಂದು ವಿರಾಟ್ ಕೊಹ್ಲಿ ಹೇಳಿದರು.
ನಮ್ಮ ತಂಡದ ವಿರುದ್ಧ ಜಡೇಜಾ ಅವರು ಇಷ್ಟು ಒಳ್ಳೆಯ ಪ್ರದರ್ಶನ ನೀಡಿದ್ದನ್ನು ನೋಡಿ ದುಃಖ ಪಡುವುದಕ್ಕಿಂತ ನನಗೆ ಖುಷಿ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.ವಿರಾಟ್ ಕೊಹ್ಲಿ ಅವರು ಇಷ್ಟು ಸಂತೋಷ ಪಡಲು ಕಾರಣ ಜಡೇಜಾ ಅವರ ಆಟ ಏಕೆಂದರೆ ಜಡೇಜಾ ಅವರ ಈ ಆಟ ಮುಂಬರುವ ಇಂಟರ್ ನ್ಯಾಷನಲ್ ಟಿ ಟ್ವೆಂಟಿ ವಿಶ್ವಕಪ್ ಗೆ ತುಂಬಾ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಜಡೇಜಾ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವುದು ಮುಂದಿನ ವಿಶ್ವಕಪ್ ಗೆ ಸಹಕಾರಿಯಾಗಲಿದೆ ಅಲ್ಲಿಯೂ ಸಹ ಜಡೇಜಾ ಅವರು ಇದೇ ರೀತಿ ಪ್ರದರ್ಶನ ತೋರುವುದರಿಂದ ನಮ್ಮ ಟೀಮ್ ಇಂಡಿಯಾಗೆ ಉಪಯೋಗ ಆಗಲಿದೆ ಎಂದು ವಿರಾಟ್ ತಿಳಿಸಿದರು.