ಒಲಿಂಪಿಕ್ಸ್: ನಾಳಿನ ಪಂದ್ಯಗಳ ಪಟ್ಟಿ

0
37

ಟೋಕಿಯೋ ಒಲಿಂಪಿಕ್ಸ್ ಆರಂಭವಾಗಿ ಈಗಾಲೇ 8 ದಿನಗಳು ಕಳೆದಿವೆ. ಭಾರತದ ಖಾತೆಯಲ್ಲಿ ಕೇವಲ 1 ಪದಕ ಮಾತ್ರ ಉಳಿದುಕೊಂಡಿದೆ. 49 ಕೆಜಿ ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಭಾರತದ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದು ಬಿಟ್ಟರೆ ಉಳಿದ ಯಾವುದೇ ಪದಕ ಭಾರತಕ್ಕೆ ಲಭಿಸಿಲ್ಲ. ಆದರೆ ಬಾಕ್ಸಿಂಗ್ ವಿಭಾಗದಲ್ಲಿ ಈಗಾಗಲೇ ಒಂದು ಪದಕ ಖಾತ್ರಿಯಾಗಿದೆ. ಲವ್ಲಿನಾ ಬರ್ಗಹೈನ್ ಅವರು ಭಾರತಕ್ಕೆ ಪದಕ ಖಾತ್ರಿ ಪಡಿಸಿದ್ದಾರೆ.

ಒಟ್ಟು 127 ಅಥ್ಲೀಟ್‌ಗಳಿದ್ದ ಭಾರತೀಯ ತಂಡ ಟೋಕಿಯೋ ಒಲಿಂಪಿಕ್ಸ್‌ಗಾಗಿ ತೆರಳಿತ್ತು. ಒಟ್ಟಿಗೆ 18 ವಿವಿಧ ಸ್ಪರ್ಧೆಗಳಲ್ಲಿ ಭಾರತ ಸ್ಪರ್ಧಿಸುತ್ತಿದೆ. ಈ ತಂಡದಲ್ಲಿ ಪುರುಷ ಮತ್ತು ಮಹಿಳಾ ಹಾಕಿಗಾಗಿ ಹೆಚ್ಚುವರಿ ಗೋಲ್ ಕೀಪರ್ ಗಳು ಸೇರಿದ್ದಾರೆ. ಅಧಿಕಾರಿಗಳು, ಸಿಬ್ಬಂದಿಗಳನ್ನು ಸೇರಿಸಿದರೆ ಒಟ್ಟಾರೆ 228 ಮಂದಿಯ ತಂಡ ಟೋಕಿಯೋಗೆ ತೆರಳಿತ್ತು.
ಸದ್ಯಕ್ಕೆ ಭಾರತ ತಂಡದ ಪರ ಇರುವ ಪದಕದ ಭರವಸೆಯೆಂದರೆ ಬಾಕ್ಸಿಂಗ್‌ನಲ್ಲಿ ಲವ್ಲಿನಾ ಬರ್ಗಹೈನ್, ಬ್ಯಾಟ್ಮಿಂಟನ್‌ನಲ್ಲಿ ಪಿವಿ ಸಿಂಧು, ಆರ್ಚರಿಯಲ್ಲಿ ಅತನು ದಾಸ್, ಹಾಕಿಯಲ್ಲಿ ಪುರುಷರ ತಂಡ. ಇನ್ನುಳಿದ ಸ್ಪರ್ಧೆಗಳಲ್ಲಿ ಅನಿರೀಕ್ಷಿತ ಪದಕಗಳು ಸಿಗುವ ಸಾಧ್ಯತೆಯೂ ಇದೆ.

ಜುಲೈ 31ರಂದು ಭಾರತಕ್ಕೆ ಒಂದಿಷ್ಟು ಸ್ಪರ್ಧೆಗಳಿವೆ. ಇದರಲ್ಲೂ ಪದಕದ ನಿರೀಕ್ಷೆಯುಳ್ಳ ಆಟಗಾರರಿದ್ದಾರೆ. ಭಾರತೀಯ ಸ್ಪರ್ಧಿಗಳಿಗೆ ಜುಲೈ 31ರ ಶನಿವಾರ ಇರುವ ಸ್ಪರ್ಧೆಗಳ ವೇಳಾಪಟ್ಟಿ ಕೆಳಗಿದೆ.
ಬಾಕ್ಸಿಂಗ್
ಬಾಕ್ಸಿಂಗ್‌ನಲ್ಲಿ ಭಾರತದ ಬಾಕ್ಸರ್ ಅಮಿತ್ ಪಂಗಲ್ ಬಗ್ಗೆ ಕೊಂಚ ನಿರೀಕ್ಷೆಯಿದೆ. ಮಹಿಳಾ ವಿಭಾಗದಲ್ಲಿ ಪೂಜಾ ರಾಣಿ ಕೂಡ ಪದಕದ ನಿರೀಕ್ಷೆ ಮೂಡಿಸಿದ್ದಾರೆ. ಈ ಪಂದ್ಯ ಬೆಳಗ್ಗೆ ನಡೆಯಲಿದೆ.
* ಕೊನೇ 16ನೇ ಸುತ್ತು (ಪ್ರಿ-ಕ್ವಾರ್ಟರ್ ಫೈನಲ್): ಅಮಿತ್ ಪಂಗಲ್ vs ವೈ. ಮಾರ್ಟಿನೆಜ್ (ಕೊಲಂಬಿಯಾ) – ಬೆಳಿಗ್ಗೆ 7:30 AM
* ಕ್ವಾರ್ಟರ್ ಫೈನಲ್: ಪೂಜಾ ರಾಣಿ vs ಲಿ ಕಿಯಾನ್ (ಚೀನಾ) – ಮಧ್ಯಾಹ್ನ 3:36 PM
ಶೂಟಿಂಗ್
ಶೂಟಿಂಗ್‌ನಲ್ಲಿ ತೇಜಸ್ವಿನಿ ಸಾವಂತ್, ಅಂಜುಮ್ ಮೌದ್ಗಿಲ್ ಸ್ಪರ್ಧಿಸಲಿದ್ದಾರೆ.
* ಶೂಟಿಂಗ್ ಅರ್ಹತೆ – 50 ಮೀ ರೈಫಲ್ 3 – ತೇಜಸ್ವಿನಿ ಸಾವಂತ್, ಅಂಜುಮ್ ಮೌದ್ಗಿಲ್ – ಬೆಳಿಗ್ಗೆ 8:30 AM
* ಫೈನಲ್ – ಮಧ್ಯಾಹ್ನ 12:30 PM
ಅಥ್ಲೆಟಿಕ್ಸ್
ಅಥ್ಲಿಟಿಕ್ಸ್‌ನಲ್ಲಿ ಜುಲೈ 31ಕ್ಕೆ ಒಂದಿಷ್ಟು ಸ್ಪರ್ಧೆಗಳಿವೆ. ಇದರಲ್ಲಿ ಡಿಸ್ಕಸ್ ಥ್ರೋನಲ್ಲಿ ಭಾರತಕ್ಕೆ ಪದಕದ ನಿರೀಕ್ಷೆಯಿದೆ.
* ಮಹಿಳಾ ಡಿಸ್ಕಸ್ ಥ್ರೋ ಗುಂಪು ಎ – ಸೀಮಾ ಪುನಿಯಾ – ಬೆಳಿಗ್ಗೆ 6:00 AM
* ಮಹಿಳಾ ಡಿಸ್ಕಸ್ ಥ್ರೋ ಗುಂಪು B – ಕಮಲ್‌ಪ್ರೀತ್ ಕೌರ್ – ಬೆಳಿಗ್ಗೆ 7:25 AM
* ಪುರುಷರ ಲಾಂಗ್ ಜಂಪ್ – ಎಂ.ಶ್ರೀಶಂಕರ್ – ಮಧ್ಯಾಹ್ನ 3:40 PM
* ನೌಕಾಯಾನ – 49er ರೇಸ್ 10 – ಗಣಪತಿ ಕೆಲಪಾಂಡ, ವರುಣ್ ಠಕ್ಕರ್ – ಬೆಳಿಗ್ಗೆ 8:35 AM
ಬಿಲ್ಲುಗಾರಿಕೆ
ಬಿಲ್ಲುಗಾರಿಕೆಯಲ್ಲಿ ಅತನು ದಾಸ್ ಮತ್ತು ಜಪಾನ್ ಸ್ಪರ್ಧಿ ಟಿ. ಫುರುಕಾವಾ ನಡುವಿನ ಪಂದ್ಯ ಕುತೂಹಲ ಮೂಡಿಸಿದೆ.
* ಬಿಲ್ಲುಗಾರಿಕೆ ಪುರುಷರ ವೈಯಕ್ತಿಕ ಪ್ರಿ ಕ್ವಾರ್ಟರ್ ಫೈನಲ್ – ಅತನು ದಾಸ್ vs ಟಿ. ಫುರುಕಾವಾ (ಜಪಾನ್) – ಬೆಳಿಗ್ಗೆ 7:16 AM
* ಸೆಮಿಫೈನಲ್ – ಬೆಳಿಗ್ಗೆ 11:15 ರಿಂದ AM
* ಪದಕ ಸುತ್ತುಗಳು – ಮಧ್ಯಾಹ್ನ 1:00 ರಿಂದ PM
ಬ್ಯಾಡ್ಮಿಂಟನ್
ಬ್ಯಾಡ್ಮಿಂಟನ್‌ನಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಸ್ಪರ್ಧಿಸುತ್ತಿದ್ದಾರೆ. ಸೆಮಿಫೈನಲ್‌ ಈ ಪಂದ್ಯ ಕುತೂಹಲ ಮೂಡಿಸಿದೆ.
* ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ಸೆಮಿಫೈನಲ್ಸ್ – ಪಿ.ವಿ ಸಿಂಧು vs ತೈ ತ್ಸು ಯಿಂಗ್ (ಚೈನೀಸ್ ತೈಪೆ) – ಮಧ್ಯಾಹ್ನ 2:30 ರಿಂದ PM
ಹಾಕಿ
ಹಾಕಿಯಲ್ಲಿ ಭಾರತೀಯ ವನಿತಾ ತಂಡ ಕ್ವಾರ್ಟರ್ ಫೈನಲ್ ಕನಸು ಜೀವಂತವಾಗಿರಿಸಿಕೊಂಡಿದ್ದು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲೂ ಗೆಲ್ಲುವ ನಿರೀಕ್ಷೆಯಿದೆ.
* ಹಾಕಿ – ಭಾರತ ಮಹಿಳೆಯರು vs ದಕ್ಷಿಣ ಆಫ್ರಿಕಾ – ಬೆಳಿಗ್ಗೆ 8:45 AM

LEAVE A REPLY

Please enter your comment!
Please enter your name here