ಒಳ್ಳೆಯ ನಿದ್ದೆ ಮಾಡೋದ್ರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ…?

Date:

ಎಷ್ಟೇ ಸುಸ್ತು, ಆಯಾಸ ಆಗಿದ್ದರೂ ಒಳ್ಳೆ ನಿದ್ದೆ ಮಾಡಿ ನೋಡಿ ಫುಲ್ ರಿಫ್ರೆಶ್ ಆಗ್ತೀರಿ, ಹೌದು ಮನುಷ್ಯನಿಗೆ ಒಳ್ಳೆಯ ನಿದ್ದೆ ಆರೋಗ್ಯಕ್ಕೆ ಬಹಳ ಮುಖ್ಯ, ನಿದ್ದೆಯಲ್ಲಿ ನಿಮ್ಮ ಸೌಂದರ್ಯ ಅಡಗಿದೆ ಅನ್ನೋದು ಸುಳ್ಳಲ್ಲ, ಯಾರು ರಾತ್ರಿ ಸರಿಯಾಗಿ ನಿದ್ದೆ ಮಾಡುವುದಿಲ್ವೋ ಅವರು ಹೆಚ್ಚು ಚಟುವಟಿಕೆಯಿಂದಿರುವುದಿಲ್ಲ. ಸಂಶೋಧಕರ ಪ್ರಕಾರ ಎರಡು ರಾತ್ರಿ ನಿಮಗೆ ಸರಿಯಾಗಿ ನಿದ್ದೆ ಬಂದಿಲ್ಲ ಅಂದ್ರೆ ನಿಮ್ಮ ಪರ್ಸನಾಲಿಟಿಯೇ ಬದಲಾಗುತ್ತದೆ.

25 ಜನರನ್ನು ಸಂಶೋಧನೆಗೆ ಒಳಪಡಿಸಲಾಗಿದೆ. ಒಂದು ಗ್ರೂಪ್ ನವರಿಗೆ ರಾತ್ರಿ ಚೆನ್ನಾಗಿ ನಿದ್ದೆ ಮಾಡುವಂತೆ ಸೂಚಿಸಲಾಯ್ತು, ಇನ್ನೊಂದು ಗುಂಪಿನವರಿಗೆ ಕೇವಲ 4 ಗಂಟೆ ಮಾತ್ರ ನಿದ್ದೆ ಮಾಡಲು ಅವಕಾಶ ನೀಡಲಾಯ್ತು. ಎರಡೂ ಗ್ರೂಪ್ ನ ಸದಸ್ಯರಿಗೆ ಮೇಕಪ್ ಮಾಡದೆ ಫೋಟೋ ತೆಗೆಯಲಾಯ್ತು.

ಎರಡೂ ಫೋಟೋಗಳಲ್ಲಿ ಯಾರು ಹೆಚ್ಚು ಆ್ಯಕ್ಟಿವ್, ಹೆಲ್ದಿ, ಎನರ್ಜೆಟಿಕ್ ಹಾಗೂ ಆತ್ಮವಿಶ್ವಾಸಿಗಳಾಗಿ ಕಾಣಿಸ್ತಾರೆ ಅಂತಾ 122 ಜನರ ಬಳಿ ಕೇಳಲಾಯ್ತು. ಕೇವಲ ನಾಲ್ಕು ಗಂಟೆ ನಿದ್ದೆ ಮಾಡಿದವರ ಬಗ್ಗೆ ಎಲ್ಲರೂ ನೆಗೆಟಿವ್ ಕಮೆಂಟ್ಸ್ ನೀಡಿದ್ದರು. ಯಾರೂ ಕಣ್ತುಂಬಾ ನಿದ್ರೆ ಮಾಡಿದ್ದಾರೋ ಅವರು ಹೆಚ್ಚು ಚಟುವಟಿಕೆಯಿಂದ, ಆರೋಗ್ಯಕರವಾಗಿ, ಆತ್ಮವಿಶ್ವಾಸದಿಂದ ಇದ್ದಾರೆ ಅಂತಾ ಎಲ್ಲರೂ ಅಭಿಪ್ರಾಯಪಟ್ರು.

ಚೆನ್ನಾಗಿ ನಿದ್ರೆ ಮಾಡಿದ್ರೆ ನೀವು ಹೆಲ್ದಿ ಮಾತ್ರವಲ್ಲ ಆಕರ್ಷಕವಾಗಿಯೂ ಕಾಣಿಸುತ್ತೀರಾ. ಜನರು ನಿಮ್ಮನ್ನು ಇಷ್ಟಪಡ್ತಾರೆ. ನಿಮ್ಮ ಇಡೀ ವ್ಯಕ್ತಿತ್ವ ಅದ್ಭುತವಾಗಿ ಕಾಣಿಸಬೇಕೆಂದ್ರೆ ಕಡಿಮೆ ಅಂದ್ರೂ ದಿನಕ್ಕೆ 8 ಗಂಟೆ ನಿದ್ದೆ ಮಾಡಿ.

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...