ಒಳ್ಳೆಯ ಸರ್ಕಾರ ಕೊಡ್ತೀನಿ ಎಂದು ಹೇಳಿ ಅಭದ್ರ ಸರ್ಕಾರ ಕೊಟ್ಟಿದ್ದಾರೆ: ಆರ್.ಅಶೋಕ್
ಬೆಂಗಳೂರು: ಒಳ್ಳೆಯ ಸರ್ಕಾರ ಕೊಡ್ತೀನಿ ಎಂದು ಹೇಳಿ ಅಭದ್ರ ಸರ್ಕಾರ ಕೊಟ್ಟಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಚಿವ ರಾಜಣ್ಣ, ಪರಮೇಶ್ವರ್ ಎಲ್ಲರೂ ಡಿಕೆಶಿ ವಿರುದ್ದ ಮಾತಾಡ್ತಿದ್ದಾರೆ.
ಮಾಗಡಿ ಬಾಲಕೃಷ್ಣ, ಶಾಸಕ ಶಿವಗಂಗಾ ಡಿಕೆಶಿ ಸಿಎಂ ಎಂದು ಘೋಷಣೆ ಮಾಡಿದ್ದಾರೆ. ಡಿಕೆಶಿಗೆ ಬೆಳೆಯೂ ಇಲ್ಲ. ಬೆಳೆ ಪರಿಹಾರವೂ ಇಲ್ಲದಂತೆ ಆಗಿದೆ. ಜನರ ಮುಂದೆ ಇವರು ಹೇಳಿದ್ದು ಏನು? ಒಳ್ಳೆಯ ಸರ್ಕಾರ ಕೊಡ್ತೀನಿ ಎಂದು ಹೇಳಿ ಅಭದ್ರ ಸರ್ಕಾರ ಕೊಟ್ಟಿದ್ದಾರೆ. ನಿತ್ಯ ಕುರ್ಚಿ ಕಿತ್ತಾಟ ನೋಡ್ತಿದ್ದೇವೆ ಎಂದು ವ್ಯಂಗ್ಯವಾಡಿದ್ದಾರೆ.
ಈ ಸರ್ಕಾರದಲ್ಲಿ ಈಗಾಗಲೇ ಎಲ್ಲಾ ಬೆಲೆ ಏರಿಕೆ ಆಗಿದೆ. ಬಜೆಟ್‌ನಲ್ಲಿ ಇನ್ನೂ ಏನೇನು ಕಾದಿದೆಯೋ ಗೊತ್ತಿಲ್ಲ. ಇಂತಹ ಪಾಪಿ ಸರ್ಕಾರ ಯಾಕೆ ಬಂತು ಎಂದು ಜನ ಹೇಳ್ತಿದ್ದಾರೆ. ಇದನ್ನ ಸರಿ ಮಾಡದೇ ಹೋದ್ರೆ ಇಡೀ ದೇಶದಲ್ಲಿ ಜನ ಕಾಂಗ್ರೆಸ್ ಓಡಿಸಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಕಾಂಗ್ರೆಸ್ ಓಡಿಸೋ ಕಾಲ ಬರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.