ಔಷಧೀಯ ಗುಣಗಳ ಆಗರ ಬೇವು.. ಬೇವಿನ ಉಪಯೋಗ ಎಷ್ಟಿದೆ ಗೊತ್ತಾ..?

Date:

ನಮ್ಮಲ್ಲಿ ಬೇವಿನ ಗಿಡಕ್ಕೆ ವಿಶಿಷ್ಟ ಸ್ಥಾನವಿದ್ದು, ಬೇವಿನ ಮರವನ್ನು ಪೂಜಿಸುತ್ತಾರೆ. ಬೇಸಿಗೆಯ ದಿನಗಳಲ್ಲಿ ಹೆಚ್ಚು ತಂಪು ಹಾಗೂ ತಣ್ಣನೆಯ ಗಾಳಿ ವಾತಾವರಣ‌‌‌ ಸಿಗಬೇಕಾದರೆ ಬೇವಿನ ಮರ ಮನೆ ಮುಂದೆ ಇದ್ದರೆ ಒಳಿತು. ಇದೆಲ್ಲದರ ಜೊತೆಗೆ ಬೇವಿನಗಿಡದಲ್ಲಿ ಆರೋಗ್ಯದ ಗುಟ್ಟು ಅಡಗಿದೆ.

ಅನಾದಿಕಾಲದಿಂದಲೂ ಕೂಡ ಅರೋಗ್ಯ ಕ್ಷೇತ್ರದಲ್ಲಿ ಬೇವಿನಗಿಡ ಉತ್ತಮ ಪ್ರಯೋಜನಕಾರಿ ಮರವಾಗಿ ಬೆಳೆದುಕೊಂಡು ಬಂದಿದೆ. ಹಿಂದೂ ಧರ್ಮದಲ್ಲಿ ಬೇವಿನ ಮರವನ್ನು ಪೂಜೆ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಜೀವನದಲ್ಲಿ ಕಷ್ಟ ಸುಖವನ್ನು ಒಟ್ಟಿಗೆ ಸ್ವೀಕರಿಸಬೇಕೆಂದು ಸಂದೇಶ ಸಾರುವ ಸಲುವಾಗಿ ಯುಗಾದಿ ಹಬ್ಬದಂದು ಬೇವು ಬೆಲ್ಲವನ್ನು ಸೇವಿಸುತ್ತಾರೆ.

ನಮ್ಮ ಆರೋಗ್ಯವನ್ನು ಸಮತೋಲನದಲ್ಲಿ ಇಡುವುದರಲ್ಲಿ ಬೇವಿನ ಪಾತ್ರ ಹೆಚ್ಚಿಸಿದೆ. ಬೇವು ಸರ್ವರೋಗ ನಿವಾರಕ ಅನ್ನೋದನ್ನ ಹೇಳಲಾಗುತ್ತದೆ.

ನಮ್ಮಲ್ಲಿ ಹೆಚ್ಚಾಗಿ ಹಲ್ಲು ಉಜ್ಜಲು ಬೇವಿನ ಕಡ್ಡಿ ಬಳಸುತ್ತಾರೆ.‌ ಬೇವಿನ ಮರದ ಕಡ್ಡಿಯನ್ನು ಹಲ್ಲು ಉಜ್ಜಲು ಬಳಸಿದರೆ ಹಲ್ಲುಗಳ ಅರೋಗ್ಯ ಉತ್ತಮವಾಗಿರುತ್ತದೆ ಹಾಗೂ ಹಲ್ಲುಗಳು ಗಟ್ಟಿಯಾಗಿ ಬೆಳೆಯುತ್ತವೆ ಅನ್ನೋದನ್ನ ಹಿಂದಿನ ಕಾಲದಿಂದಲೂ ಕೂಡ ಹಿರಿಯರು ಹೇಳುತ್ತಲೇ ಬರುತ್ತಿದ್ದಾರೆ. ಇದೀಗ ಹೆಚ್ಚಿನ ಟೂತ್ ಪೇಸ್ಟ್ ಗಳಲ್ಲಿ ಬೇವು ಬಳಸುತ್ತಾರೆ.

ಬೇವಿನ ಹೂವನ್ನು ತಿನ್ನುವುದರಿಂದ ದೇಹ ಗಟ್ಟಿಯಾಗುತ್ತದೆ. ಇನ್ನೂ ಸ್ನಾನ ಮಾಡುವ ನೀರಿನಲ್ಲಿ ಒಂದು ಹಿಡಿಯಷ್ಟು ಬೇವಿನ ಎಲೆಯನ್ನು ಹಾಕಿ ಸ್ನಾನ ಮಾಡಿದರೆ ಯಾವುದೇ ಚರ್ಮ ರೋಗಗಳು ಅಂಟುವುದಿಲ್ಲ. ಹಾಗೂ ದೇಹಕ್ಕೆ ಯಾವುದೇ ಬ್ಯಾಕ್ಟಿರಿಯಾಗಳು ಬರದಂತೆ ತಡೆಯುತ್ತದೆ. ಬೇವಿನ ಎಲೆಯನ್ನು ಅರಿಶಿನದ ಜೊತೆಗೆ ನುಣ್ಣಗೆ ‌ಹರೆದು ಲೇಪನ‌ ಮಾಡಿ ಬಳಿಕ ಸ್ನಾನ ಮಾಡುವುದರಿಂದ ತ್ವಚೆಯು ಕೋಮಲವಾಗಿ, ಮೃದುವಾಗುತ್ತದೆ.

ಇನ್ನೂ ಡೆಂಗ್ಯೂ, ಮಲೇರಿಯಾ ಸಮಸ್ಯೆ ಇರೋರಿಗೆ ಬೇವಿನ ಎಲೆ ಉತ್ತಮ ಔಷಧವಾಗಿ ಕೆಲಸ ಮಾಡುತ್ತದೆ. ಪ್ರತಿದಿನ ೩ ಎಲೆಗಳನ್ನು ತೆಗೆದುಕೊಳ್ಳುವುದರಿಂದ ಮಲೇರಿಯಾದಿಂದ ಮುಕ್ತಿ ಹೊಂದಬಹುದು.

ಸೊಳ್ಳೆ ಕಾಟದಿಂದ ಮುಕ್ತಿ ಕೊಡುತ್ತೆ ಬೇವಿನ ಎಲೆ..

ಮಳೆಗಾಲದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿರುತ್ತದೆ ಹಾಗೂ ಎಷ್ಟೇ ಮುಂಜಾಗ್ರತೆವಹಿಸಿದರು ಸೊಳ್ಳೆಗಳ ಕಾಟ ತಪ್ಪುತ್ತಿಲ್ಲ ಅನ್ನೋರಿಗೆ ಬೇವಿನ ಎಲೆ ಉಪಯೋಗಕಾರಿ.

ಒಂದು ಹಿಡಿಯಷ್ಟು ಬೇವಿನ ಎಲೆಗಳನ್ನು ತಂದು ಅದನ್ನು ಮಿಕ್ಸಿಯಲ್ಲೂ ಅಥವಾ ರುಬ್ಬೊ ಕಲ್ಲಿನ ಮೂಲಕ ರುಬ್ಬಿ ಪೇಸ್ಟ್ ರೀತಿ ಮಾಡಿಕೊಳ್ಳಿ ಜಾಸ್ತಿ ನೀರು ಹಾಕದೆ ಸ್ವಲ್ಪ ಗಟ್ಟಿಯಾಗಿ ರುಬ್ಬಿ ನಂತರ ಅದನ್ನು ಒಂದು ಬೋಲ್ ನಲ್ಲಿ ಹಾಕಿಕೊಂಡು ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿಕೊಂಡು ಒಂದು ದಿನ ಸಂಪೂರ್ಣವಾಗಿ ಒಣಗಿಸಿ.‌ ಒಣಗಿಸಿದ ಬೇವಿನ ಆ ಟ್ಯಾಬ್ಲೆಟ್ ಗಳನ್ನು ರೀತಿ ಉರಿಸಿದರೆ ಸೊಳ್ಳೆಗಳು ಬರೋದಿಲ್ಲ.

ಅಷ್ಟೇ ಅಲ್ಲದೆ ನೀವು ಈ ರೀತಿಯ ವಿಧಾನವನ್ನು ಮಾಡಲಿಕೆ ಆಗೋದಿಲ್ಲ ಅನ್ನೋದರೆ ಮಾರುಕಟ್ಟೆಯಲ್ಲಿ ಸಿಗುವಂತ ಬೇವಿನ ಎಣ್ಣೆಯನ್ನು ತಂದು ದೀಪದಲ್ಲಿ ಹಾಕಿ ಉರಿಸಬಹುದು.

ಹೀಗೆ ನಾನಾ ಉಪಯೋಗಗಳನ್ನು ಬೇವಿನ ಎಲೆಗಳಿಂದ ಹಾಗೂ ಬೇವಿನ ಮರದಿಂದ ಉಪಯೋಗಗಳನ್ನು ಮನುಷ್ಯ ಪಡೆದುಕೊಳ್ಳಬಹುದಾಗಿದೆ.

 

 

Share post:

Subscribe

spot_imgspot_img

Popular

More like this
Related

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ ಬೆಳಗಾವಿ ಜಿಲ್ಲೆಯ ಖಾನಾಪುರ...

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ ಮೈಸೂರು: ಬಿಹಾರ...

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..?

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..? ಬೆಂಗಳೂರು:...

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ ಬೇಕು

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ...