ಪಕ್ಷಿಗಳ ಪೈಕಿ ಗಿಣಿ ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಕೆಲವು ಗಿಣಿಗಳು ಮಾತನಾಡುವುದನ್ನು ಕಲಿತರೆ, ಇಲ್ಲೊಂದು ಬುದ್ದಿವಂತ ಗಿಣಿ ಕಳ್ಳರನ್ನು ತಪ್ಪಿಸಲು ಸಹಾಯ ಮಾಡಿದೆ. ಗಿಣಿಗೆ ಉತ್ತಮ ತರಬೇತಿ ನೀಡಿದರೆ ಅದು ಮನುಷ್ಯನಿಗಿಂತ ಚುರುಕ್ಕಾಗಿ ಕಾರ್ಯ ಮಾಡುತ್ತೆ. ಆದ್ರೆ, ಬ್ರೆಜಿಲ್ನಲ್ಲಿ ಹೀಗೆ ಒಳ್ಳೆ ಟ್ರೇನಿಂಗ್ ಪಡೆದಿದ್ದ ಗಿಣಿ, ತನ್ನ ಮಾಲೀಕರಿಗೆ ನಿಷ್ಠೆಯಿಂದ ಇರೋಕೆ ಹೋಗಿ ಇದೀಗ ಕಂಬಿ ಎಣಿಸುತ್ತಿದೆ.
ಹೌದು, ತನ್ನ ಮಾಲೀಕರು ನಿಷ್ಠೆಯಿಂದ ಇರಬೇಕೆಂದು ಬಯಸಿದ ಗಿಣಿ ಇದೀಗ ತಾನೇ ಕಂಬಿ ಎಣಿಸುತ್ತಿದೆ. ಡ್ರಗ್ಸ್ ಕೋಕೆನ್ ಕಳ್ಳಸಾಗಣೆ, ಮಾಡುತ್ತಿದ್ದ ಇಬ್ಬರು ಶಂಕಿತರನ್ನು ಬಂಧಿಸಲು ಪೊಲೀಸರು ಆಗಮಿಸಿದ್ದಾರೆ. ಬ್ರೆಜಿಲ್ನ ಪಿಯಾಯಿ ಪ್ರದೇಶದ ಗಿಳಿಯೊಂದು ಈ ವೇಳೆ ಮನೆಯ ಸಣ್ಣ ಕಿಟಕಿಯಿಂದ ಪೊಲೀಸರನ್ನು ನೋಡಿದ ಗಿಣಿ ಮಮ್ಮಿ ಪೊಲೀಸಿಯಾ.. ಮಮ್ಮಿ ಪೊಲೀಸಿಯಾ… ಅಂತ ಕೂಗಿಕೊಂಡಿದೆ. ಆದ್ರೆ, ಗಿಣಿ ಹಿಂಟ್ ಕೊಟ್ರೂ ಖದೀಮರಿಗೆ ತಪ್ಪಿಸಿಕೊಳ್ಳೋಕೆ ಸಾಧ್ಯವಾಗಿಲ್ಲ.
ಮನೆಯಿಂದ ಎಸ್ಕೇಪ್ ಆಗ್ತಿದ್ದ ಒರ್ವ ವ್ಯಕ್ತಿ,ಮತ್ತೊಬ್ಬ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ತಮ್ಮ ರೇಡ್ಗೆ ಡಿಸ್ಟರ್ಬ್ ಮಾಡಿದ ಗಿಣಿಯನ್ನೂ ಎತ್ತಾಕಿಕೊಂಡು ಹೋಗಿದ್ದಾರೆ. ಬ್ರೆಜಿಲ್ ಪೊಲೀಸ್ರು ಗಿಣಿಯನ್ನೂ ವಿಚಾರಣೆ ನಡೆಸುತ್ತಿದ್ದಾರೆ. ಗಿಣಿ ಮಾತ್ರ ತುಟಿಪಿಟಿಕ್ ಅಂದಿಲ್ಲವಂತೆ.