ಕಡಿಮೆ ಬೆಲೆಗೆ ರಿಯಲ್ ಮಿ 8 5 ಜಿ ಮತ್ತೊಂದು ಆವೃತ್ತಿ

Date:

ಮಧ್ಯಮ ಬೆಲೆಗೆ ಆಕರ್ಷಕ ಫೀಚರ್ ಗಳುಳ್ಳ ಸ್ಮಾರ್ಟ್ ಫೋನುಗಳನ್ನು ಬಿಡುಗಡೆ ಮಾಡಿ ಸೈ ಎನಿಸಿಕೊಂಡಿರುವ ಜನಪ್ರಿಯ ರಿಯಲ್ ಮಿ ಕಂಪೆನಿ ಇತ್ತೀಚೆಗಷ್ಟೆ ರಿಯಲ್ ಮಿ 8 ಹಾಗೂ 8 ಪ್ರೊ ಮೊಬೈಲ್ ಅನ್ನು ಬಿಡುಗಡೆ ಮಾಡಿತ್ತು. ಈ ಫೋನ್ ಯಶಸ್ವಿಯಾದ ಬೆನ್ನಲ್ಲೆ ರಿಯಲ್ ಮಿ 8 5G ಸ್ಮಾರ್ಟ್ ಫೋನ ಅನ್ನೂ ಲಾಂಚ್ ಮಾಡಿತ್ತು. ಸದ್ಯ ರಿಯಲ್ ಮಿ 8 5ಜಿ ಸ್ಮಾರ್ಟ್ ಫೋನಿನಲ್ಲಿ ಹೊಸ ಸ್ಟೋರೆಜ್ ಅನ್ನು ಪರಿಚಯಿಸಿದೆ.

ಭಾರತದಲ್ಲಿ ರಿಯಲ್‌ಮಿ 8 5G ಬೆಲೆ 4GB RAM+ 128GB ಶೇಖರಣಾ ರೂಪಾಂತರಕ್ಕೆ 14,999 ರೂ. ಹಾಗೂ 8 GB RAM + 128GB ಸ್ಟೋರೇಜ್ ಆಯ್ಕೆ ಬೆಲೆ 16,999 ರೂ. ಆಗಿದೆ. ಇದೇ ಸಾಲಿಗೆ ಸದ್ಯ 4GB RAM+ 64GB ಸ್ಟೋರೆಜ್ ಸಾಮರ್ಥ್ಯದ ಫೋನ್ ಕೂಡ ಸೇರಿದೆ. ಇದರ ಬೆಲೆ ಕೇವಲ 13,999 ರೂ. ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಸೂಪರ್ಸಾನಿಕ್ ಬ್ಲ್ಯಾಕ್ ಮತ್ತು ಸೂಪರ್ಸಾನಿಕ್ ಬ್ಲೂ ಕಲರ್‌ ಆಯ್ಕೆಯಲ್ಲಿ ಲಭ್ಯವಾಗಲಿದೆ. ಮೇ 18, ಮಧ್ಯಾಹ್ನ 12 ರಿಂದ ಇಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮತ್ತು ರಿಯಲ್‌.ಕಾಮ್ ಮತ್ತು ಆಫ್‌ಲೈನ್ ರಿಟೇಲ್‌ ಸ್ಟೋರ್‌ಗಳಲ್ಲಿ ಖರೀದಿಗೆ ಸಿಗಲಿದೆ.

ಈ ನೂತನ ರಿಯಲ್ ಮಿ 8 5G ಸ್ಮಾರ್ಟ್ ಫೋನ್ ಕಳೆದ ತಿಂಗಳು ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟ ರಿಯಲ್ ಮಿ 8 ರ ಅಪ್‌ ಗ್ರೇಡ್ ಆವೃತ್ತಿಯಂತಿದೆ. ಇದು 6.5-ಇಂಚಿನ ಫುಲ್‌-ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ.

ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ 11 ನಲ್ಲಿ ರಿಯಲ್‌ಮಿ ಯುಐ 2.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB RAM ಮತ್ತು 128 GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಬಳಸಿ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಇನ್ನೂ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಅಳವಡಿಸಲಾಗಿದ್ದು, ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ f/ 2.4 ಮ್ಯಾಕ್ರೋ ಲೆನ್ಸ್ ಅನ್ನು ಸಹ ಒಳಗೊಂಡಿದೆ. ರಿಯರ್‌ ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಎಐ ಬ್ಯೂಟಿ ಫಿಲ್ಟರ್‌ಗಳ ಹೊರತಾಗಿ ಲೋ-ಲೈಟ್‌ ಫೋಟೋಗ್ರಫಿಗಾಗಿ ಸೂಪರ್ ನೈಟ್‌ಸ್ಕೇಪ್ ಮೋಡ್‌ ಅನ್ನು ನೀಡಲಾಗಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 18W ಕ್ವಿಕ್ ಚಾರ್ಜ್ ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿಯನ್ನು ಬೆಂಬಲಿಸುತ್ತದೆ.

 

Share post:

Subscribe

spot_imgspot_img

Popular

More like this
Related

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...