ಕತ್ತೆ ಹಾಲಿಗೆ ಹೆವಿ ಡಿಮ್ಯಾಂಡ್!; ಲೀಟರ್ ಬೆಲೆ ಅಬ್ಬಬ್ಬಾ!

Date:

ನಿಮ್ಮಮ್ಮ ನಿನಗೆ ಕತ್ತೆ ಹಾಲು ಕುಡಿಸಿದ್ರೆನೋ ಅಂತಾ ಬೈಯುವ ಮಂದಿಯೆಲ್ಲಾ ಈ ಕೊರೊನಾ ಸಾಂಕ್ರಾಮಿಕ ಕಾಲದಲ್ಲಿ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕತ್ತೆ ಹಾಲಿಗೆ ಮುಗಿಬಿದ್ದಿದ್ದಾರೆ.

ಚಿಕ್ಕಮಗಳೂರು ನಗರದ ಬೀದಿ ಬೀದಿಗಳಲ್ಲಿ ಕತ್ತೆ ಹಾಲು ಕುಡಿಯುವವರು ಕಳೆದ ಒಂದು ವಾರದಿಂದ ಕಂಡು ಬರುತ್ತಿದ್ದಾರೆ. ದೊಡ್ಡವರು, ಸಣ್ಣವರು ಎನ್ನದೇ ಆನ್‌ಸ್ಪಾಟ್ ಕತ್ತೆ ಹಾಲನ್ನು ಕರೆದ ತಕ್ಷಣ ಹೊಳ್ಳೆಗೆ 50 ರೂಪಾಯಿ ಕೊಟ್ಟು ಕುಡಿಯುವ ದೃಶ್ಯ ಸಾಮಾನ್ಯವಾಗಿದೆ. ಕಾಫಿನಾಡಲ್ಲಿ ಈಗ ಕತ್ತೆ ಹಾಲಿಗೆ ಫುಲ್ ಡಿಮ್ಯಾಂಡ್ ಬಂದಿದ್ದು, ಕಳೆದ ಒಂದು ವಾರದಿಂದ ನಗರದಲ್ಲಿ ಕತ್ತೆಗಳನ್ನು ಹಿಡಿದುಕೊಂಡು ಕತ್ತೆ ಹಾಲಿನ ತಾಕತ್ತಿನ ಬಗ್ಗೆ ಬೀದಿ ಬೀದಿಗಳಲ್ಲಿ ಸಾರುತ್ತಾ ಹಾಲನ್ನು ಮಾರಾಟ ಮಾಡುವ ಮಂದಿ ನಗರದಲ್ಲಿ ಬೀಡು ಬಿಟ್ಟಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಡಾಂಕಿಗೆ ಫುಲ್ ಡಿಮ್ಯಾಂಡ್ ಮತ್ತು ನಗರದಲ್ಲಿ ಇಮೇಜ್ ಕ್ರಿಯೇಟ್ ಆಗಿದೆ.

 

ಕತ್ತೆ ಹಾಲನ್ನು ಯಾರು ಬೇಕಾದರೂ ಕುಡಿಯಬಹುದಾಗಿದ್ದು, ಮಕ್ಕಳ ಎಲ್ಲಾ ತರಹದ ವ್ಯಾದಿಗೆ ಇದು ರಾಮಬಾಣ ಅಂತೆ. ಕೆಮ್ಮು, ಶೀತ, ನೆಗಡಿ, ಕಫ ಹೀಗೆ ಹಲವು ಸಣ್ಣಪುಟ್ಟ ಖಾಯಿಲೆಗಳಿಗೆ ಕತ್ತೆ ಹಾಲು ಸಂಜೀವಿನಿ ಎಂಬ ಮಾತು ಕತ್ತೆ ಬೀದಿಗೆ ಬರುತ್ತಿದ್ದಂತೆ ಪ್ರತಿ ಬೀದಿಗಳಲ್ಲಿ ಶುರುವಾಗುತ್ತದೆ. ಕತ್ತೆ ಹಾಲನ್ನು ಮಕ್ಕಳಿಗೆ ಕುಡಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತೆಂದು ವೈಜ್ಞಾನಿಕವಾಗಿಯೂ ರುಜುವಾತಾಗಿದೆ ಎಂಬ ಅಭಿಪ್ರಾಯದಿಂದ ಜನ ಮರುಳೋ, ಜಾತ್ರೆ ಮರುಳೋ ಎಂಬಂತೆ ಕತ್ತೆ ಹಾಲಿಗೆ ಫುಲ್ ಡಿಮ್ಯಾಂಡ್ ಬಂದಿದೆ.

ಡೈರಿಯಲ್ಲಿ ಒಂದು ಲೀಟರ್ ಹಾಲಿಗೆ 48 ರೂಪಾಯಿ ಕೊಟ್ಟು ಹಾಲು ಖರೀದಿಸಲು ಹಿಂದೆ ಮುಂದೆ ನೋಡುವ ಮಂದಿ ಕತ್ತೆ ಹಾಲಿಗೆ ಎಷ್ಟು ಬೇಕಾದರೂ ಖರ್ಚು ಮಾಡಲು ಸಿದ್ದರಿದ್ದಾರೆ. ಹೊಳ್ಳೆಗೆ 50 ರೂಪಾಯಿ, ಒಂದು ಕಾಫಿ ಕುಡಿಯುವ ಲೋಟದಷ್ಟು ಹಾಲಿಗೆ 100 ರೂಪಾಯಿ ಕೊಟ್ಟು ಕುಡಿಯುತ್ತಿದ್ದಾರೆ. ಹೀಗೆ ಲೆಕ್ಕಾಚಾರ ಮಾಡಿದರೆ ಒಂದು ಲೀಟರ್ ಕತ್ತೆ ಹಾಲಿಗೆ ಐದು ಸಾವಿರ ಆಗುತ್ತದೆ. ಆಂಧ್ರ ಪ್ರದೇಶದಿಂದ ಚಿಕ್ಕಮಗಳೂರಿಗೆ ಬಂದಿರುವ ಜನ ಕತ್ತೆ ಹಾಲಿನ ಮಾರಾಟದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. 20 ಜನ 20 ಕತ್ತೆಯೊಂದಿಗೆ ಚಿಕ್ಕಮಗಳೂರು ನಗರಕ್ಕೆ ಬಂದಿದ್ದಾರೆ. ಒಬ್ಬೊಬ್ಬರು ಒಂದೊಂದು ಕತ್ತೆಯೊಂದಿಗೆ ಒಂದೊಂದು ಏರಿಯಾಗೆ ಭೇಟಿ ನೀಡುತ್ತಿದ್ದಾರೆ. ಇಡೀ ದಿನ ನಗರ ಸೇರಿದಂತೆ ಹಳ್ಳಿ- ಹಳ್ಳಿ ಸುತ್ತುತ್ತಿದ್ದಾರೆ. ಬೆಳಗ್ಗೆ 6 ಗಂಟೆಗೆ ಹೋಗಿ 10- 11 ಗಂಟೆಗೆ ವೇಳೆಗೆ 800- 1000 ದುಡಿಯುತ್ತಿದ್ದಾರೆ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...